newsfirstkannada.com

ರೋಹಿತ್ ಶರ್ಮಾಗಿದೆ ಈ ವೀಕ್ನೆಸ್.. ಬಾಂಗ್ಲಾದ ಈ ಬೌಲರ್​ಗಳೆಂದ್ರೆ ಹಿಟ್​ಮ್ಯಾನ್​ಗೆ ಭಯ..!

Share :

Published June 22, 2024 at 10:52am

  ರೋಹಿತ್ ಶರ್ಮಾ​ರನ್ನ ಖೆಡ್ಡಾಕ್ಕೆ ಕೆಡುವುತ್ತಾರಾ ಬಾಂಗ್ಲಾದ ಬೌಲರ್ಸ್?

  ​ಸೂಪರ್​- 8 ಹಂತದಲ್ಲಿ ಶುಭಾರಂಭ ಮಾಡಿದ ಟೀಮ್ ಇಂಡಿಯಾ

  ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾಗೆ ಈ ಸೆಲ್ಯೂಷನ್ಸ್ ಸಿಗುತ್ತಾ?

ರೋಹಿತ್​ ಶರ್ಮಾ.. ಆನ್​​ ಫೀಲ್ಡ್​ ಅಂತ ಬಂದ್ರೆ ಸೆಂಚುರಿಮ್ಯಾನ್​ ಕಟ್ಟಿಹಾಕೋದೆ ಕಷ್ಟ. ಆ ಮಟ್ಟಿಗೆ ಟೆರರ್​ ಬ್ಯಾಟಿಂಗ್​​ಗೆ ಹೆಸರುವಾಸಿ. ಇಂತಹ ಲೆಜೆಂಡ್ರಿಗೆ ಲೆಫ್ಟ್​ ಆರ್ಮ್ ಪೇಸರ್​ಗಳ ಫೋಬಿಯಾ ಕಾಡ್ತಿದೆ. ಪ್ರಸಕ್ತ ಟಿ20 ವಿಶ್ವಕಪ್​​​ ಸಮರದಲ್ಲಿ ಹಿಟ್​ಮ್ಯಾನ್​ ವೀಕ್ನೆಸ್​ ಮತ್ತೊಮ್ಮೆ ಬಟಬಯಲಾಗಿದೆ.

T20 ವಿಶ್ವಕಪ್​​ನಲ್ಲಿ ರೋಹಿತ್​​​ ಎಡಗೈ ವೇಗಿಗಳ ಕಾಟ..!

T20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ ಇಲ್ಲಿತನಕ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಗ್ರೂಪ್​ ಸ್ಟೇಜ್​ನಲ್ಲಿ ಅಜೇಯ ಓಟ ಮುಂದುವರಿಸಿದ್ದ ಭಾರತ, ಸೂಪರ್​​​​-8ನಲ್ಲೂ ಗೆಲುವಿನ ಶುಭಾರಂಭ ಮಾಡಿದೆ. ಇಂತಹ ಸೂಪರ್​ ಪರ್ಫಾಮೆನ್ಸ್​​​​​ ನಡುವೆ ಕ್ಯಾಪ್ಟನ್ ರೋಹಿತ್​​ಗೆ ಲೆಫ್ಟ್​ ಆರ್ಮ್​ ಪೇಸರ್ಸ್​ ಮಗ್ಗುಲ ಮುಳ್ಳಾಗಿ ಕಾಡ್ತಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಕಾರಿನಲ್ಲಿ ಮಹಿಳೆಯನ್ನು ಎಳೆದೊಯ್ದ ಪಾಪಿಗಳು.. ಗಂಡನ ಕಡೆಯವರಿಂದ ನಡೀತಾ ಕೃತ್ಯ?

ಲೆಜೆಂಡ್ರಿ ರೋಹಿತ್​ ಶರ್ಮಾರ ಎಡಗೈ ವೇಗಿಗಳ ಎದುರಿನ ವೀಕ್ನೆಸ್​ ಟಿ20 ವಿಶ್ವಕಪ್​ನಲ್ಲಿ ಮತ್ತೊಮ್ಮೆ ಬಟಬಯಾಲಾಗಿದೆ. ವಿಶ್ವದರ್ಜೆಯ ಬೌಲರ್​ಗಳನ್ನ ಸುಲಭವಾಗಿ ಬೆಂಡೆತ್ತುವ ರೋಹಿತ್​​​, ಎಡಗೈ ಪೇಸ್ ಬೌಲರ್ಸ್​ ಅಂದ್ರೆ ಸಾಕು ಬೆಚ್ಚಿ ಬೀಳ್ತಾರೆ. ಪ್ರಸಕ್ತ ಟಿ20 ವಿಶ್ವಕಪ್​ನಲ್ಲಿ ಆ ವೀಕ್ನೆಸ್​​​​​​​​​​​ಗೆ ಸೆಲ್ಯೂಷನ್ಸ್ ಸಿಗುತ್ತೆ ಅಂದುಕೊಂಡ್ರೆ, ಮತ್ತದೇ ಹಳೇ ಚಾಳಿ ಮುಂದುವರಿಸಿದ್ದಾರೆ.

T20 WC​ನಲ್ಲಿ ಎಡಗೈ ಬೌಲರ್​​​​​​​​ ವಿರುದ್ಧ

ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್​​ನಲ್ಲಿ ರೋಹಿತ್​ ಶರ್ಮಾ 4 ಇನ್ನಿಂಗ್ಸ್​​ಗಳನ್ನ ಆಡಿದ್ದಾರೆ. 38 ಎಡಗೈ ವೇಗಿಗಳ ಎಸೆತಗಳನ್ನ ಎದುರಿಸಿದ್ದು, ಬರೀ 44 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಎವರೇಜ್​ 14.66 ಆದ್ರೆ ಮೂರು ಬಾರಿ ವಿಕೆಟ್​ ಒಪ್ಪಿದ್ದಾರೆ.

ಈ ವರ್ಷ ಎಡಗೈ ವೇಗಿಗಳೇ ಹೆಚ್ಚು ದುಸ್ವಪ್ನ..!

ಪ್ರಸಕ್ತ ಟಿ20 ವಿಶ್ವಕಪ್​​ ಟೂರ್ನಿ ಅಷ್ಟೇ ಅಲ್ಲ.. ಈ ವರ್ಷ ರೋಹಿತ್​ಗೆ, ಲೆಫ್ಟ್ ಆರ್ಮ್​ ಬೌಲರ್ಸ್​ ಬೆಂಬಿಡದ ಭೂತದಂತೆ ಕಾಡ್ತಿದ್ದಾರೆ. ಆಡಿರುವ ಇನ್ನಿಂಗ್ಸ್​ ಪೈಕಿ ಅತಿಹೆಚ್ಚು ಬಾರಿ ಎಡಗೈ ವೇಗಿಗಳಿಗೆ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಹೆಂಡತಿಯನ್ನ ಕಟ್ಟಿ ಹಾಕಿ, ಗಂಡನಿಗೆ ಚೂರಿ ಇರಿತ​.. ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ ಗ್ಯಾಂಗ್

2024ರಲ್ಲಿ ಎಡಗೈ ವೇಗಿಗಳ ವಿರುದ್ಧ ರೋಹಿತ್​​​..!

2024 ರಲ್ಲಿ ರೋಹಿತ್​ ಶರ್ಮಾ ಲೆಫ್ಟ್ ಆರ್ಮ್​ ಪೇಸರ್​​​ಗಳ ಎದುರು 19 ಇನ್ನಿಂಗ್ಸ್​ಗಳನ್ನ ಆಡಿದ್ದು, 98 ಬಾಲ್ಸ್ ಎದುರಿಸಿದ್ದಾರೆ. 16ರ ಎವರೇಜ್​​ನಲ್ಲಿ ಬ್ಯಾಟ್ ಬೀಸಿದ್ದು, ಬರೀ 128 ರನ್ ಹೊಡೆದಿದ್ದಾರೆ. 8 ಬಾರಿ ಎಡಗೈ ಪೇಸರ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ.

ಬಾಂಗ್ಲಾ ತಂಡದಲ್ಲಿ ಡೆಡ್ಲಿ ಮುಷ್ತಾಫಿಜುರ್​​​ ರಹಮಾನ್​​​..!

ಇಂದು ನಡೆಯುವ 2ನೇ ಸೂಪರ್​​​-8 ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನ ಎದುರಿಸಲಿದೆ. ಇಂದು ಕೂಡ ಹಿಟ್​ಮ್ಯಾನ್​​​​​ ಲೆಫ್ಟ್​​ ಆರ್ಮ್​ ಪೇಸರ್ಸ್​ ಕಾಟ ಕೊಡಲಿದ್ದಾರೆ. ಡೇಂಜರಸ್​​ ಮುಷ್ತಾಫಿಜುರ್​ ರೆಹಮಾನ್​​ ಬಾಂಗ್ಲಾ ತಂಡದಲ್ಲಿದ್ದಾರೆ. ಎದುರಾಳಿಯನ್ನ ಖೆಡ್ಡಾಗೆ ಬೀಳಿಸೋದ್ರಲ್ಲಿ ಇವರು ನಿಸ್ಸೀಮ. ಇವರಿಗೆ ತಂಜಿಮ್​​​​ ಹಸನ್​​​​​​​ ಸಕಿಬ್​​​​​​​ ರ ಸಾಥ್​ ಕೂಡ ಸಿಗಲಿದೆ. ಸೋ, ರೋಹಿತ್​ ಇಂದು ಬಾಂಗ್ಲಾದೇಶದ ಎಡಗೈ ಪೇಸರ್​ಗಳ ವಿರುದ್ಧ ಎಚ್ಚರಿಕೆಯಿಂದ ಆಟವಾಡಬೇಕಿದೆ. ಯಾಕಂದ್ರೆ ಕಳೆದ 3 ಇನ್ನಿಂಗ್ಸ್​ಗಳಲ್ಲಿ ಲೆಫ್ಟ್​ ಆರ್ಮ್​ ಪೇಸರ್ಸ್​ ದುಸ್ನಪ್ನರಾಗಿ ಕಾಡಿದ್ದಾರೆ. ಇಂದಾದ್ರು ಆ ಫೋಬಿಯಾದಿಂದ ಹೊರಬಂದು, ರನ್​​​ ದರ್ಬಾರ್ ನಡೆಸುವಂತಾಗಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್ ಶರ್ಮಾಗಿದೆ ಈ ವೀಕ್ನೆಸ್.. ಬಾಂಗ್ಲಾದ ಈ ಬೌಲರ್​ಗಳೆಂದ್ರೆ ಹಿಟ್​ಮ್ಯಾನ್​ಗೆ ಭಯ..!

https://newsfirstlive.com/wp-content/uploads/2024/06/ROHIT_SHARMA-6.jpg

Load More