newsfirstkannada.com

×

ವಿರೋಧಿಗಳೇ ಟೀಕಿಸುವ ಮುನ್ನ ಹತ್ತು ಸಾರಿ ಯೋಚಿಸಿ.. ಅವಮಾನಗಳ ಮೆಟ್ಟಿ ನಿಂತ ಕ್ಯಾಪ್ಟನ್ ರೋಹಿತ್ ಕತೆ ಇದು..!

Share :

Published November 6, 2023 at 11:48am

Update November 6, 2023 at 11:50am

    ರೋಹಿತ್​ ಲೇಜಿ, ವಡಾಪಾವ್​​ ಅನ್ನೋರು ಎಲ್ಲಿದ್ದೀರಾ?

    ಲೇಜಿ ಆಗಿದ್ರೆ ಈ ಸಾಧನೆ ಮಾಡೋಕೆ ಆಗ್ತಾನೆ ಇರ್ಲಿಲ್ಲ

    ಈ ಎರಡು ಘಟನೆಗಳೆ ಹೇಳ್ತಿವೆ ರೋಹಿತ್​ ಕಥೆ

ಒಬ್ಬ ವ್ಯಕ್ತಿಯನ್ನು ನಿಂದಿಸೋದು ಬಹಳ ಸುಲಭ. ಲೆಜೆಂಡ್ರಿ ರೋಹಿತ್​ ಶರ್ಮಾ ವಿಚಾರದಲ್ಲೂ ಅದನ್ನೇ ಮಾಡಲಾಗ್ತಿದೆ. ಹಿಟ್​ಮ್ಯಾನ್​​ ಅದ್ಭುತ ಸಾಧನೆ ಮಾಡಿದ್ರೂ ಅವರನ್ನ ವಡಾಪಾವ್​​, ಲೇಜಿ ಪರ್ಸನ್​ ಅಂತೆಲ್ಲಾ ಕರೆದು ನಿಂದಿಸೋರಿದ್ದಾರೆ. ಹಾಗಾದ್ರೆ ರೋಹಿತ್​ ನಿಜಕ್ಕೂ ಲೇಜಿ ಕ್ರಿಕೆಟರಾ? ಕ್ರಿಕೆಟ್​ ಆಡಲು ಮುಂಬೈಕರ್​ ಫಿಟ್ಟೆ ಇಲ್ವಾ?

ನಿಂದನೆ, ಟೀಕೆ -ಟಿಪ್ಪಣಿ ಯಾರನ್ನ ಬಿಟ್ಟಿದೆ ಹೇಳಿ? 100 ಶತಕಗಳ ಶತಕರಾಜ, ಮಾಸ್ಟರ್ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರನ್ನೇ ಬಿಟ್ಟಿಲ್ಲ. ಯಾವ ಜನರು ಸಚಿನ್​​ರನ್ನ ಕ್ರಿಕೆಟ್ ದೇವರು ಎಂದು ಹೊತ್ತು ಮೆರೆದಾಡಿದ್ರೋ ಅದೇ ಜನ ಒಂದು ಕಾಲದಲ್ಲಿ ಸಚಿನ್​ ಓರ್ವ ಸೆಂಚುರಿ ಸ್ವಾರ್ಥಿ ಅನ್ನೋ ಟ್ಯಾಗ್​ಲೈನ್​​ ನೀಡಿದ್ರು. ಸದ್ಯ ಹಿಟ್​ಮ್ಯಾನ್​​ ಖ್ಯಾತಿಯ ರೋಹಿತ್​ ಶರ್ಮಾರದ್ದು ಅದೇ ಕಥೆ. ಇಲ್ಲಿ ರೋಹಿತ್​ರನ್ನ ಸೆಲ್ಫಿಶ್​​​ ಅಂತ ಕರೀತಿಲ್ಲ. ಬದಲಿಗೆ ವಡಾಪಾವ್​​​, ಲೇಜಿ ಪರ್ಸನ್​ ಅಂತೆಲ್ಲಾ ಬಾಡಿ ಶೇಮಿಂಗ್​ ಜೊತೆ ಆ್ಯಟಿಟ್ಯೂಡ್​ ಬಗ್ಗೆ ಟೀಕೆ ಮಾಡಲಾಗ್ತಿದೆ.

ಹಿಟ್​​ಮ್ಯಾನ್​ ಲೇಜಿ, ವಡಾಪಾವ್​​ ಅನ್ನೋರು ಎಲ್ಲಿದ್ದೀರಾ?

ರೋಹಿತ್​​ ಶರ್ಮಾ.. ದ ಬ್ರ್ಯಾಂಡ್​ ಆಫ್​​​ ಕ್ರಿಕೆಟ್​​​. 45 ಶತಕ..18,084 ರನ್​​​, 573 ಸಿಕ್ಸರ್​ಗಳ ರಾಜ. ಮೂರು ವಿಶ್ವದಾಖಲೆಯ ದ್ವಿಶತಕ ಸಿಡಿಸಿದ ಸರದಾರ. ಇದು ನಿಜಕ್ಕೂ ಕಮ್ಮಿ ಸಾಧನೆಯೆನಲ್ಲ. ಟೀಮ್ ಇಂಡಿಯಾದಲ್ಲಿ ಕಿಂಗ್ ಕೊಹ್ಲಿ ಬಿಟ್ರೆ ರೋಹಿತ್ ಶರ್ಮಾ​ನೇ ಗ್ರೇಟ್​ ಪ್ಲೇಯರ್​​ ಸಾಲಿನಲ್ಲಿ ನಿಲ್ಲುತ್ತಾರೆ. ಈ ಎಲ್ಲಾ ಸಾಧನೆಗಳ ನಡುವೆಯೂ ರೋಹಿತ್​ನ ಲೇಜಿ, ವಡಾಪಾವ್​​​ ಅಂತೆಲ್ಲಾ ಕರೆದು ಹಂಗಿಸುವ ಒಂದು ವರ್ಗವಿದೆ. ಅವಕಾಶ ಸಿಕ್ಕಾಗಲೆಲ್ಲಾ ವಿರೋಧಿಗಳು ಹಿಟ್​ಮ್ಯಾನ್​ ವಿರುದ್ಧ ಮುಗಿಬೀಳ್ತಾರೆ.

ಬಟ್​​​ ರೋಹಿತ್​​ ನಿಜಕ್ಕೂ ಅಷ್ಟೊಂದು ಲೇಜಿ ಕ್ರಿಕೆಟರಾ? ವಡಾಪಾವ್ ಅಂತೆಲ್ಲಾ ಕರೆಸಿಕೊಳ್ಳಬೇಕಾ.? ನೋ.. ಡೆಫಿನೆಟ್ಲಿ ನೋ..!​ ಯಾಕಂದ್ರೆ ಮುಂಬೈಕರ್​​​​​​​ ಲೇಜಿ ಕ್ರಿಕೆಟರ್ ಅಲ್ಲವೇ ಅಲ್ಲ. ಹಾಗೊಂದು ವೇಳೆ ರೋಹಿತ್​ ಲೇಜಿ ಆಗಿದ್ರೆ 16 ವರ್ಷಗಳ ಕಾಲ ಸುದೀಘ ಕ್ರಿಕೆಟ್​​​ ಆಡೋಕೆ ಸಾಧ್ಯ ಆಗ್ತಾನೆ ಇರ್ಲಿಲ್ಲ. ಅವೆಲ್ಲಾ ಹೇಟರ್ಸ್​ಗಳ ಬಾಯಿಚಪಲದ ಮಾತುಗಳಷ್ಟೇ. ರೋಹಿತ್​​​ ಲೇಜಿ ಕ್ರಿಕೆಟಿಗ ಅಲ್ಲ ಅನ್ನೋದಕ್ಕೆ ಈ ಎರಡು ಸಂಗತಿಗಳೇ ಸಾಕು.

ಕಳೆದ 5 ವರ್ಷದಲ್ಲಿ ರೋಹಿತ್​​​​ ಬಿಟ್ಟಿದ್ದು ಕೇವಲ 2 ಕ್ಯಾಚ್​

ಇದು ನಿಮಗೆ ಕೇಳೋಕೆ ಅಚ್ಚರಿ ಅನ್ನಿಸಿದ್ರೂ ಸತ್ಯ, ಸತ್ಯ. ರೋಹಿತ್​​ ಶರ್ಮಾ ಕಳೆದ ಐದು ವರ್ಷದಲ್ಲಿ ಅಂದ್ರೆ 2019 ರಿಂದ ಈಚೆಗೆ ಕೇವಲ ಎರಡೇ ಎರಡು ಕ್ಯಾಚ್​​ ಡ್ರಾಪ್​​​ ಮಾಡಿದ್ದಾರೆ. ಇವೆರಡನ್ನು ಬಿಟ್ರೆ ಔಟ್​​ ಸ್ಟ್ಯಾಂಡಿಂಗ್​ ಫೀಲ್ಡಿಂಗ್​​ ಮಾಡಿದ್ದಾರೆ​. ಆದರೆ ಮೋಸ್ಟ್​​​ ಫಿಟ್ಟೆಸ್ಟ್​​ ಕ್ರಿಕೆಟರ್ ಅಂತ ಕರೆಸಿಕೊಳ್ಳುವ ಕಿಂಗ್ ಕೊಹ್ಲಿ ರೋಹಿತ್​ಗೆ ತದ್ವಿರುದ್ಧ. ಇದೇ ಸಮಯದಲ್ಲಿ ಬರೋಬ್ಬರಿ 28 ಕ್ಯಾಚ್​​ಗಳನ್ನ ಕೈ ಚೆಲ್ಲಿದ್ದಾರೆ. ಈಗ ನೀವೇ ಹೇಳಿ? ರೋಹಿತ್​ ಲೇಝಿ ಕ್ರಿಕೆಟರ್ ಆಗಿದ್ದರೆ ಫೀಲ್ಡಿಂಗ್​​ನಲ್ಲಿ ಈ ಮಟ್ಟಿಗೆ ಮ್ಯಾಜಿಕ್ ಮಾಡಲು ಸಾಧ್ಯವಾಗ್ತಿತ್ತಾ?

ಕಿಂಗ್ ಕೊಹ್ಲಿಗಿಂತ ರೋಹಿತ್​ ಮೋಸ್ಟ್​​ ಫಿಟ್​ ಅಂಡ್ ಫೈನ್

ರೋಹಿತ್​​​​ ಶರ್ಮಾ ಫಿಟ್​​​ ಇಲ್ಲ ಅನ್ನೋರಿಗೆ ಇದಕ್ಕಿಂತ ಬೆಸ್ಟ್​ ಉತ್ತರ ಕೊಡೋಕಾಗಲ್ಲ ಬಿಡಿ. ಸದ್ಯ ಶುಭ್​​ಮನ್ ಗಿಲ್​​​​​ರನ್ನ ಬಿಟ್ರೆ ಟೀಮ್ ಇಂಡಿಯಾದ ಮೋಸ್ಟ್​ ಫಿಟ್​ ಅಂಡ್ ಫೈನ್​ ಕ್ರಿಕೆಟರ್ ಯಾರು ಗೊತ್ತಾ? ಕಿಂಗ್ ಕೊಹ್ಲಿ ಅಲ್ಲ.. ಬದಲಿಗೆ ರೋಹಿತ್​ ಶರ್ಮಾ. ಈ ವರ್ಷ ಏಷ್ಯಾಕಪ್​ಗೂ ಮುನ್ನ ಈ ಅಸಲಿ ಸತ್ಯ ಬಯಲಾಗಿದೆ. ಏಷ್ಯಾಕಪ್​ಗೂ ಮುನ್ನ ನಡೆದ ಯೋ ಯೋ ಟೆಸ್ಟ್​​​ನಲ್ಲಿ ಹಿಟ್​ಮ್ಯಾನ್​​ ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ. ರೋಹಿತ್​​ ಶರ್ಮಾ 18.6 ಅಂಕ ಪಡೆದಿದ್ದಾರೆ. ಫಿಟ್ನೆಸ್​ ಹರಿಕಾರ ವಿರಾಟ್ ಕೊಹ್ಲಿ 17.6 ಸ್ಕೋರ್​ ಗಳಿಸಿದ್ದಾರೆ. ಆಲ್​ರೌಂಡರ್ ಹಾರ್ದಿಕ್​​ ಪಾಂಡ್ಯ 17.2 ಅಂಕ ಸಂಪಾದಿಸಿದ್ರು. ರೋಹಿತ್​​​​​​​​ ಶರ್ಮಾ ವಡಾಪಾವ್​ ಎಂದು ಹೀಯಾಳಿಸೋರಿಗೆ ಇದಕ್ಕಿಂತ ಉತ್ತರ ಬೇಕಾ?

ಈ ಟೀಕೆ, ನಿಂದನೆ, ಅಪಮಾನ ರೋಹಿತ್​ ಶರ್ಮಾಗೆ ಹೊಸದೇನಲ್ಲ. ತಲೆ ಕೆಡಿಸಿಕೊಂಡೂ ಇಲ್ಲ. ಮುಂದೆಯೂ ಟೀಕೆಗಳಿಗೆ ಕಿವಿಗೊಡಲ್ಲ. ಇವೆಲ್ಲವನ್ನೂ ಮೆಟ್ಟಿನಿಂತ ಮೇಲೆಯೇ ಹಿಟ್​ಮ್ಯಾನ್​ ಸಾಧನೆಯ ಶಿಖರವೇರಿರೋದು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿರೋಧಿಗಳೇ ಟೀಕಿಸುವ ಮುನ್ನ ಹತ್ತು ಸಾರಿ ಯೋಚಿಸಿ.. ಅವಮಾನಗಳ ಮೆಟ್ಟಿ ನಿಂತ ಕ್ಯಾಪ್ಟನ್ ರೋಹಿತ್ ಕತೆ ಇದು..!

https://newsfirstlive.com/wp-content/uploads/2023/11/ROHIT_SHARMA-4.jpg

Load More