newsfirstkannada.com

6, 6, 4, 6, 0, 6! ಬೌಲರ್​​ಗೆ ಒಂದೇ ಓವರ್​​ನಲ್ಲಿ ನರಕ ದರ್ಶನ ತೋರಿಸಿದ ರೋಹಿತ್ ಶರ್ಮಾ

Share :

Published June 25, 2024 at 2:35pm

  ಸೇಡಿನ ಸಮರದಲ್ಲಿ ರೋಹಿತ್​ ಶರ್ಮಾ ಸಿಡಿಲಬ್ಬರ

  ಮುಂಬೈಕರ್​ ಆರ್ಭಟಕ್ಕೆ ಕಾಂಗರೂಗಳು ಕಂಗಾಲ್​

  ಸೆಂಟ್​​ ಲುಸಿಯಾದಲ್ಲಿ ರೋಹಿತ್​ ರಣಾರ್ಭಟ

ಅಹ್ಮದಾಬಾದ್​​ನಲ್ಲಿ ಏಕದಿನ ವಿಶ್ವಕಪ್​​ ಸೋತಿದ್ದ ನೋವು, ಹತಾಶೆ, ದುಖಃ ಎಲ್ಲವನ್ನೂ ನಿನ್ನೆ ಹಿಟ್​​ಮ್ಯಾನ್​ ಹೊರಹಾಕಿದ್ರು. ಸೇಡಿನ ಸಮರದಲ್ಲಿ ರೋಹಿತ್​ ಶರ್ಮಾ ಆಕ್ರೋಶದ ಬ್ಯಾಟಿಂಗ್​ ನೋಡಿ ಕಾಂಗರೂಗಳು ಕಂಗಾಲ್​ ಆದರು. ​ಆಸಿಸ್​ ಬೌಲರ್​​ಗಳಿಗೆ ಟೀಮ್​ ಇಂಡಿಯಾ ಕ್ಯಾಪ್ಟನ್​​ ನರಕ ದರ್ಶನ ಮಾಡಿಸಿದರು.

ಮುಂಬೈಕರ್​ ಆರ್ಭಟಕ್ಕೆ ಕಾಂಗರೂಗಳು ಕಂಗಾಲ್​..!
ಮಸ್ಟ್​ ವಿನ್​ ಗೇಮ್​ನಲ್ಲಿ ಗೆಲುವಿಗೆ ಪಣತೊಟ್ಟು ಕಣಕ್ಕಿಳಿದ ಆಸ್ಟ್ರೇಲಿಯಾದ ಕಥೆ ನಿನ್ನೆ ಸೂತ್ರ ಹರಿದ ಗಾಳಿಪಟದಂತಾಗಿತ್ತು. ಏನೇನೋ ಲೆಕ್ಕಾಚಾರ ಹಾಕಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಪ್ಯಾಟ್​​ ಕಮಿನ್ಸ್​ ತಲೆ ಮೇಲೆ ಕೈ ಹೊತ್ತು ಕೂತು ಬಿಟ್ರು. ನಾಯಕ ರೋಹಿತ್​ ಶರ್ಮಾ ಅಬ್ಬರಕ್ಕೆ ಕಾಂಗರೂಗಳು ಅಕ್ಷರಶಃ ಕಂಗಾಲ್​ ಆಗಿ ಬಿಟ್ರು.

ಇದನ್ನೂ ಓದಿ:ಜೈಲಲ್ಲಿ ದರ್ಶನ್​ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..!

ಸೆಂಟ್​​ ಲುಸಿಯಾದಲ್ಲಿ ರೋಹಿತ್​ ರಣಾರ್ಭಟ.!
ಇನ್​​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ನ ಟೀಕೆ ಎದುರಿಸಿದ್ದ ರೋಹಿತ್​ ಶರ್ಮಾ ನಿನ್ನೆ ಬ್ಯಾಟ್​ನಿಂದಲೇ ಆನ್ಸರ್​ ಕೊಟ್ರು. ಅಗ್ರೆಸ್ಸಿವ್​ ಆಟ ಅಂದ್ರೆ ಏನು ಅನ್ನೋದನ್ನ ತನ್ನ ವಿಸ್ಪೋಟಕ ಇನ್ನಿಂಗ್ಸ್​ನಿಂದಲೇ ತೋರಿಸಿದ್ರು. ಮೊದಲ ಓವರ್​ನ 3ನೇ ಎಸೆತವನ್ನ ಬೌಂಡರಿ ಸಿಡಿಸಿ ಅಕೌಂಟ್​ ಓಪನ್​ ಮಾಡಿದ ಹಿಟ್​​ಮ್ಯಾನ್​ ಆಮೇಲೆ ಆಸ್ಟ್ರೇಲಿಯನ್​ ಬೌಲಿಂಗ್​ ದಾಳಿಯನ್ನ ಚಿಂದಿ ಉಡಾಯಿಸಿದ್ರು.

ಬೌಲಿಂಗ್​ ಧೂಳಿಪಟ.. 19 ಎಸೆತಕ್ಕೆ ಅರ್ಧಶತಕ..!
ರೋಹಿತ್​ ಶರ್ಮಾ ಅಗ್ರೆಸ್ಸಿವ್​ ಆಟ ಹೇಗಿತ್ತು ಅನ್ನೋದಕ್ಕೆ ಇದೇ ಬೆಸ್ಟ್​ ಎಕ್ಸಾಂಪಲ್​..! ಆಸ್ಟ್ರೇಲಿಯಾ ಬೌಲರ್​ಗಳ ಮೇಲೆ ಸವಾರಿ ಮಾಡಿದ ಮುಂಬೈಕರ್​​, ಅರ್ಧಶತಕ ಸಿಡಿಸಿದ್ದು ಕೇವಲ 19 ಎಸೆತಗಳಲ್ಲಿ. ರೋಹಿತ್​ ಶರ್ಮಾ ರಣಾರ್ಭಟ ಹೇಗಿತ್ತು ಅನ್ನೋದಕ್ಕೆ ಈ ಆಟವೇ ಬೆಸ್ಟ್​ ಎಕ್ಸಾಂಪಲ್​.!

ಇದನ್ನೂ ಓದಿ:ಡೆಡ್ಲಿ ಸ್ಪೆಲ್​ಗೆ ಆಸಿಸ್ ಕಕ್ಕಾಬಿಕ್ಕಿ.. ಆಸ್ಟ್ರೇಲಿಯಾ​ ಕನಸಿಗೆ ರೋಹಿತ್ ಕೊಳ್ಳಿ ಇಟ್ಟಿದ್ದು ಹೀಗೆ..!

ಮಿಚೆಲ್​ ಸ್ಟಾರ್ಕ್​, ಸ್ಟೋಯಿನಿಸ್​​ಗೆ ನರಕ ದರ್ಶನ
ವಿಶ್ವ ಕ್ರಿಕೆಟ್​ ಲೋಕ ಕಂಡ ಶ್ರೇಷ್ಟ ಬೌಲರ್ ಅನಿಸಿಕೊಳ್ಳೋ ಮಿಚೆಲ್​ ಸ್ಟಾರ್ಕ್​ ದಾಳಿಯನ್ನ ರೋಹಿತ್​ ಧೂಳಿಪಟವಾಗಿಸಿದ್ರು. 3ನೇ ಓವರ್​​ ಹಾಕಿದ ಸ್ಟಾರ್ಕ್​ಗೆ ನರಕ ದರ್ಶನ ಮಾಡಿಸಿದ್ರು. ಬರೋಬ್ಬರಿ 28 ರನ್​ಗಳನ್ನ ಚಚ್ಚಿದ್ರು. ಈ ವಿಶ್ವಕಪ್​ನ ಆಸಿಸ್​ ತಂಡದ ಬೆಸ್ಟ್​ ಬೌಲರ್​​ ಅನಿಸಿಕೊಂಡಿರೋ ಮಾರ್ಕಸ್​​ ಸ್ಟೋಯಿನಿಸ್​​ನೂ ರೋಹಿತ್​ ಬಿಡಲಿಲ್ಲ. ಪವರ್​ ಪ್ಲೇ ಮುಗಿದ ನಂತರವೂ ಆರ್ಭಟಿಸಿದ ರೋಹಿತ್​, ಸ್ಟೋಯಿನಿಸ್​ ಹಾಕಿದ 8ನೇ ಓವರ್​ನಲ್ಲಿ ​17 ರನ್​​ ಸಿಡಿಸಿದ್ರು.

41 ಎಸೆತ, 92 ರನ್! 7 ಬೌಂಡರಿ, 8 ಸಿಕ್ಸರ್​!
ಸೆಂಟ್​ ಲೂಸಿಯಾ ಗ್ರೌಂಡ್​ನಲ್ಲಿ ಕಾಂಗರೂಗಳನ್ನು ಕಾಡಿದ ರೋಹಿತ್​ ಶರ್ಮಾ, ಎದುರಿಸಿದ್ದು ಕೇವಲ 41 ಎಸೆತ ಮಾತ್ರ. ಈ ಎಸೆತಗಳಲ್ಲೇ 7 ಬೌಂಡರಿ, 9 ಸಿಕ್ಸರ್​ ಚಚ್ಚಿ ಬಿಸಾಕಿದ ಹಿಟ್​ಮ್ಯಾನ್​​ 92 ರನ್​ ಸಿಡಿಸಿದ್ರು. ಅಂದ್ಹಾಗೆ ನಿನ್ನೆ ಟೀಮ್​ ಇಂಡಿಯಾ ಕ್ಯಾಪ್ಟನ್​​ ಬ್ಯಾಟ್​ ಬೀಸಿದ್ದು ಬರೋಬ್ಬರಿ 224.89ರ ಸ್ಟ್ರೈಕ್​ರೇಟ್​​ನಲ್ಲಿ. ನಾನೇ ಕ್ರಿಕೆಟ್​ ಲೋಕದ ಸಿಕ್ಸರ್​ ಕಿಂಗ್​ ಅನ್ನೋದನ್ನು ಹಿಟ್​ಮ್ಯಾನ್​ ಮತ್ತೆ ನಿರೂಪಿಸಿದ್ರು. ನಿನ್ನೆ ಬರೋಬ್ಬರಿ 8 ಸಿಕ್ಸರ್​​ ಸಿಡಿಸಿ ಮಿಂಚಿದ ರೋಹಿತ್​, ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ 200 ಸಿಕ್ಸರ್ ಸಿಡಿಸಿದ ಏಕೈಕ ಬ್ಯಾಟ್ಸ್​ಮನ್​ ಎಂಬ ದಾಖಲೆ ಬರೆದ್ರು. ಜೊತೆಗೆ ಟಿ20 ವಿಶ್ವಕಪ್​​ನಲ್ಲಿ ಯುವರಾಜ್​ ಸಿಂಗ್​ ಹಿಂದಿಕ್ಕಿ ಹೆಚ್ಚು ಸಿಕ್ಸರ್​ ಚಚ್ಚಿದ ಭಾರತೀಯ ಎಂಬ ಖ್ಯಾತಿಗೂ ಪಾತ್ರರಾದ್ರು.

ಇದನ್ನೂ ಓದಿ:ಆಸ್ಟ್ರೇಲಿಯಾ ವಿಶ್ವಕಪ್ ಕನಸು ಭಗ್ನ.. ಸೆಮಿಫೈನಲ್​​ಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ಅಫ್ಘಾನಿಸ್ತಾನ್..!

ಸ್ಪೋಟಕ ಇನ್ನಿಂಗ್ಸ್​ ಕಟ್ಟಿದ ರೋಹಿತ್​ ಶರ್ಮಾ ಟೀಮ್​ ಇಂಡಿಯಾ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಕೇವಲ 8 ರನ್​ ಅಂತರದಲ್ಲಿ ಸೆಂಚುರಿ ಮಿಸ್​​ ಮಾಡಿಕೊಂಡ್ರು. ಆಸಿಸ್​ ವಿರುದ್ಧ ಅಬ್ಬರಿಸಿ​ ರಗಡ್​ ಫಾರ್ಮ್​ಗೆ ಮರಳಿರೋ ಹಿಟ್​ಮ್ಯಾನ್​, ಮುಂದಿನ ಬಿಗ್ ​ಮ್ಯಾಚ್​ಗಳಲ್ಲೂ ಹೀಗೆ ಅಬ್ಬರಿಸಲಿ. ಸೆಂಚುರಿ ಪೂರೈಸೋದ್ರ ಜೊತೆಗೆ ಕಪ್​ ಕೂಡ ಗೆಲ್ಲಿಸಿಕೊಡಲಿ ಅನ್ನೋದು ಫ್ಯಾನ್ಸ್​ ಪ್ರಾರ್ಥನೆಯಾಗಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಫೈನಲ್ ಹೇಗಿರುತ್ತೆ..? ಯಾರು ಯಾರ ವಿರುದ್ಧ ಸೆಣಸಾಟ ಮಾಡ್ತಾರೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6, 6, 4, 6, 0, 6! ಬೌಲರ್​​ಗೆ ಒಂದೇ ಓವರ್​​ನಲ್ಲಿ ನರಕ ದರ್ಶನ ತೋರಿಸಿದ ರೋಹಿತ್ ಶರ್ಮಾ

https://newsfirstlive.com/wp-content/uploads/2024/06/Rohit-sharma-10.jpg

Load More