newsfirstkannada.com

ವಿಶ್ವಕಪ್ ಗೆದ್ದ ನೆಲದ ಮಣ್ಣನ್ನು ಪ್ರಸಾದವಾಗಿ ಸೇವಿಸಿದ ರೋಹಿತ್ ಶರ್ಮಾ.. ಪಿಚ್​​ಗೆ ಮುತ್ತುಕೊಟ್ಟು ಕೃತಜ್ಞತೆ!

Share :

Published June 30, 2024 at 1:02pm

    ಮೈದಾನದಲ್ಲೇ ಉದ್ದಂಡ ನಮಸ್ಕಾರ ಹಾಕಿದ ಹಿಟ್​ಮ್ಯಾನ್​

    ವಿಶ್ವಕಪ್​ ಗೆದ್ದ ಬಳಿಕ ಮೈದಾನದ ಮಣ್ಣು ಸವಿದ ರೋಹಿತ್​

    ಭೂಮಿ ತಾಯಿಯನ್ನು ವಂದಿಸಿದ ಟೀಂ ಇಂಡಿಯಾದ ನಾಯಕ

ಭಾರತೀಯರು ತಾಯಿ ಮತ್ತು ಭೂಮಿ ತಾಯಿಯನ್ನು ಸದಾ ಪೂಜಿಸುತ್ತಾರೆ, ಗೌರವಿಸುತ್ತಾರೆ. ನಿನ್ನೆ ನಡೆದ ಟಿ20 ವಿಶ್ವಕಪ್​ ಫೈನಲ್​ನಲ್ಲೂ ಅಂತಹದ್ದೇ ಕ್ಷಣವೊಂದು ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದೆ. ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ ವಿಶ್ವಕಪ್​ ಗೆದ್ದ ಬಳಿಕ ಮೈದಾನದ ಮಣ್ಣು ಸವಿದಿದ್ದಾರೆ. ಆ ಮೂಲಕ ಭೂಮಿ ತಾಯಿಗೆ ವಂದಿಸಿದ್ದಾರೆ.

ಇದನ್ನೂ ಓದಿ: ದೇವರು ದೊಡ್ಡೋನು, ಕೃತಜ್ಞತೆಯಿಂದ ತಲೆ ಬಾಗುತ್ತೇನೆ.. ವಿರಾಟ್​ ಕೊಹ್ಲಿ ಭಾವುಕ ಪೋಸ್ಟ್​

13 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಈ ಗೆಲುವಿನ ಕ್ಷಣದಲ್ಲಿ ರೋಹಿತ್​ ಮೈದಾನದಲ್ಲೇ ಉದ್ದಂಡ ನಮಸ್ಕಾರ ಹಾಕಿದ್ದಾರೆ. ಭೂಮಿಗೆ ಮುಖವಿಟ್ಟು ಅತ್ತಿದ್ದಾರೆ. ಗೆಲುವಿನ ಸಂಭ್ರಮದ ಜೊತೆಗೆ ಕಣ್ಣೀರ ಕಂಬನಿ ಸುರಿಸಿದ್ದಾರೆ.

ಇದನ್ನೂ ಓದಿ: ಗಟ್ಟಿಗಿತ್ತಿ ಸುನಿತಾ ವಿಲಿಯಮ್ಸ್​.. ಈಕೆಯ ಛಲ, ಸಾಧನೆ ಮಹಿಳೆಯರಿಗೆ ಸ್ಫೂರ್ತಿ

ಇದಾದ ಬಳಿಕ ಪಂದ್ಯ ಗೆಲ್ಲಲು ಸಾಕ್ಷಿಯಾದ ಮೈದಾನದ ಮಣ್ಣು ಸವಿದಿದ್ದಾರೆ. ಬಳಿಕ ನಮಸ್ಕರಿಸಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ರೋಹಿತ್​ ಭೂಮಿ ತಾಯಿಯನ್ನು ಗೌರವಿಸಿದ ದೃಶ್ಯವನ್ನು ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಕಪ್ ಗೆದ್ದ ನೆಲದ ಮಣ್ಣನ್ನು ಪ್ರಸಾದವಾಗಿ ಸೇವಿಸಿದ ರೋಹಿತ್ ಶರ್ಮಾ.. ಪಿಚ್​​ಗೆ ಮುತ್ತುಕೊಟ್ಟು ಕೃತಜ್ಞತೆ!

https://newsfirstlive.com/wp-content/uploads/2024/06/Rohit-sharma-2-1.jpg

Load More