newsfirstkannada.com

ರೋಹಿತ್ ಶರ್ಮಾ ಮಲಗಿರುವಾಗ ಯುವ ಆಟಗಾರರು ಏನು ಮಾಡ್ತಾರೆ..? ಕ್ಯಾಪ್ಟನ್​ಗೆ ಮರೆವು ಜೊತೆಗೆ ಈ ಕಾಯಿಲೆಯೂ ಇದೆ..!

Share :

22-07-2023

    ಮೈದಾನದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್​

    ಎಲ್ಲಿ ಹೋದರು ಏನಾನ್ನದ್ರೂ ಮರೆತು ಹೋಗುವುದು ಕಾಮನ್..!

    ರೋಹಿತ್​ರ ಮೈನಸ್​ ಪಾಯಿಂಟ್ ಕ್ಯಾಚ್ ಮಾಡ್ತಾರೆ ಯುವಕರು

ಟೀಮ್​ ಇಂಡಿಯಾ ನಾಯಕ ರೋಹಿತ್​ಗೆ ವಿಪರೀತ ಮರೆವು ಇರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದರ ಹೊರತಾಗಿ ಹಿಟ್​ಮ್ಯಾನ್​ಗೆ ಇನ್ನೊಂದು ವೀಕ್​ನೆಸ್​ ಇದೆ. ಆ ವೀಕ್​ನೆಸ್​ ಏನು ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

ರೋಹಿತ್ ಶರ್ಮಾ, ವಿಶ್ವ ಕ್ರಿಕೆಟ್​ನ ಹಿಟ್​ಮ್ಯಾನ್.. ರಣರೌದ್ರವತಾರದ ಬ್ಯಾಟಿಂಗ್​​ಗೆ ಹೆಸರುವಾಸಿಯಾಗಿರೋ ರೋಹಿತ್, ಟೀಮ್ ಇಂಡಿಯಾದ ‘ಗಜನಿ’ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ, ಟೀಮ್ ಇಂಡಿಯಾ ನಾಯಕನಿಗೆ ಮರೆವು ಮಾತ್ರವೇ ಅಲ್ಲ. ನಿದ್ದೆ ಮಾಡುವುದು ಎಂದರೂ ಪಂಚಪ್ರಾಣ. ಮುಂಬೈಕರ್ ರೋಹಿತ್​​ಗೆ ಕ್ರಿಕೆಟ್​ ಹಾಗೂ ಪ್ರ್ಯಾಕ್ಟೀಸ್​ ಇಲ್ಲ ಅಂದ್ರೆ, ಮೊದಲು ಮಾಡೋ ಕೆಲಸವೇ ನಿದ್ದೆ. ಈ ನಿದ್ದೆ ಯಾವ ಮಟ್ಟಕ್ಕೆ ಅಂದ್ರೆ, ರೋಹಿತ್ ಶರ್ಮಾ ರೂಮ್​ನಲ್ಲಿಟ್ಟಿರೋ ಯಾವುದೇ ವಸ್ತುವನ್ನಾದರೂ ಹೊತ್ತೊಯ್ಯಬಹುದು.

ಹೀಗಾಗಿಯೇ ಕ್ಯಾಪ್ಟನ್​ ರೋಹಿತ್ ಶರ್ಮಾ ರೂಮ್​ಗೆ ಎಂಟ್ರಿ ಕೊಡುವ ಯುವ ಆಟಗಾರರು ಅವರ ರೂಮ್​ಗೆ ಹೋದಗಾಲೆಲ್ಲ ತಮಗೆ ಬೇಕಿರೋ ವಸ್ತುಗಳನ್ನ ತೆಗೆದುಕೊಂಡು ಹೋಗ್ತಾರಂತೆ. ಸಹ ಆಟಗಾರರೂ ಏನೇ ತೆಗೆದುಕೊಂಡು ಹೋದರು ರೋಹಿತ್ ಕೇಳುವ ಗೋಜಿಗೇ ಹೋಗಲ್ಲ. ಯಾಕಂದ್ರೆ, ನಿದ್ದೆಯಲ್ಲಿ ಮುಳುಗಿರೋ ರೋಹಿತ್​ಗೆ ಯಾರು ಬಂದೋದ್ರು ಅನ್ನೋ ಅರಿವೇ ಇರಲ್ಲ. ಇದೇ ಕಾರಣಕ್ಕೆ ರೋಹಿತ್ ಶರ್ಮಾ ನಿದ್ದೆ ಬಗ್ಗೆ ಕ್ರಿಕೆಟಿಗರು ಆಗಾಗ ಕಾಲೆಳೆಯುತ್ತಲೇ ಇರುತ್ತಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್ ಶರ್ಮಾ ಮಲಗಿರುವಾಗ ಯುವ ಆಟಗಾರರು ಏನು ಮಾಡ್ತಾರೆ..? ಕ್ಯಾಪ್ಟನ್​ಗೆ ಮರೆವು ಜೊತೆಗೆ ಈ ಕಾಯಿಲೆಯೂ ಇದೆ..!

https://newsfirstlive.com/wp-content/uploads/2023/07/ROHIT.jpg

Load More