newsfirstkannada.com

ಸೀನಿಯರ್ ಪ್ಲೇಯರ್ಸ್​ಗೆ BCCI​ ಬೌನ್ಸರ್; ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ T20 ಕರಿಯರ್ ಖತಂ ಮಾಡಿದ್ದೇಕೆ?

Share :

07-07-2023

    ಸೀನಿಯರ್​ ಆಟಗಾರರಿಗೆ ಫಸ್ಟ್​ ಅಲ್ಲೇ ಬೌನ್ಸರ್ ಹಾಕಿದ ಅಗರ್ಕರ್

    ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಟಿ20 ಕರಿಯರ್ ಏನಾಗುತ್ತೋ?

    ಭಾರತ ತಂಡದಲ್ಲಿ 30 ವರ್ಷದ ದಾಟಿದ ಒಬ್ಬ ಆಟಗಾರನಿಗೆ ಚಾನ್ಸ್

ಆಯ್ಕೆ ಸಮಿತಿಯ ಮುಖ್ಯಸ್ಥನ ಹುದ್ದೆಗೇರಿದ ಮೊದಲ ಟಾಸ್ಕ್​ನಲ್ಲಿ ಅಜಿತ್ ಅಗರ್ಕರ್ ಸೀನಿಯರ್ಸ್​ಗೆ ಬೌನ್ಸರ್ ಹಾಕಿದ್ದಾರೆ. ಟಿ20 ತಂಡದ ವಿಚಾರದಲ್ಲಿದ್ದ ಹಲವು ಗೊಂದಲಗಳನ್ನ ಕ್ಲೀನ್ ಬೋಲ್ಡ್ ಮಾಡಿದ್ದಾರೆ. 5 ಪಂದ್ಯ್ಗದ ಸರಣಿಗೆ, 15 ಜನರನ್ನ ಆಯ್ಕೆ ಮಾಡಿ ಹಲವು ಸಂದೇಶಗಳನ್ನ ರವಾನಿಸಿದ್ದಾರೆ.

ವೆಸ್ಟ್ ಇಂಡಿಸ್ ಪ್ರವಾಸದ ಟಿ20 ಸರಣಿಗೆ ಕೊನೆಗೂ ಟೀಮ್ ಪ್ರಕಟಗೊಂಡಿದೆ. ಟೆಸ್ಟ್, ಏಕದಿನ ಸರಣಿಗಳಿಗೆ ತಂಡವನ್ನ ಪ್ರಕಟಿಸಿದ್ದ, ಹಂಗಾಮಿ ಮುಖ್ಯಸ್ಥ ಶಿವು ಸುಂದರ್ ದಾಸ್ ನೇತೃತ್ವದ ಸೆಲೆಕ್ಷನ್ ಕಮಿಟಿ ಟಿ20 ತಂಡದ ಆಯ್ಕೆಯನ್ನ ಹೋಲ್ಟ್​ನಲ್ಲಿಟ್ಟಿತ್ತು. ನೂತನ ಸೆಲೆಕ್ಟರ್ ಬಂದ ಮೇಲಷ್ಟೇ ಆಯ್ಕೆ ಮಾಡೋದು ಇದ್ರ ಹಿಂದಿದ್ದ ಲೆಕ್ಕಾಚಾರವಾಗಿತ್ತು. ಯಾಕಂದ್ರೆ, ಈ ಒಂದು ತಂಡದ ಆಯ್ಕೆಯೊಂದಿಗೆ ಬಹುಮುಖ್ಯ ಸಂದೇಶಗಳನ್ನ ರವಾನಿಸಬೇಕಿತ್ತು.

5 ಪಂದ್ಯದ ಸರಣಿ, 15 ಜನರ ಆಯ್ಕೆ, ಹಲವು ಸಂದೇಶ.!

ಮಾಜಿ ವೇಗಿ ಅಜಿತ್ ಅಗರ್ಕರ್ ಸೆಲೆಕ್ಟರ್ ಗಾದಿಗೆ ಏರಿದ್ದೇ ಏರಿದ್ದು, ಇಂಡೀಸ್ ಪ್ರವಾಸದ ಟಿ20 ಸರಣಿಗೆ ಟೀಮ್ ಅನೌನ್ಸ್ ಆಗಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿ 15 ಆಟಗಾರರ ಬಲಿಷ್ಠ ತಂಡವನ್ನ ಸೆಲೆಕ್ಷನ್ ಕಮಿಟಿ ಆಯ್ಕೆ ಮಾಡಿದೆ. ಇಷ್ಟು ದಿನ ಸೆಲೆಕ್ಷನ್ ಕಮಿಟಿ ಪ್ರಮುಖ ಡಿಶಿಷನ್ ತೆಗೆದುಕೊಳ್ಳಬಲ್ಲ ಪ್ರಭಾವಿ ವ್ಯಕ್ತಿಯ ಕೊರತೆಯನ್ನ ಎದುರಿಸ್ತಾ ಇತ್ತು. ಅಗರ್ಕರ್ ಆಗಮನ ಆ ಕೊರತೆ ನೀಗಿದ್ದು, ಫಸ್ಟ್ ಟಾಸ್ಕ್​ನಲ್ಲೇ ಬಿಗ್ ಡಿಶಿಷನ್​ಗಳನ್ನ ಕೈಗೊಂಡಿದ್ದಾರೆ.

ಕೊಹ್ಲಿ – ರೋಹಿತ್ ಟಿ20 ಕರಿಯರ್ ಖತಂ.!

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯೇ ಕೊನೆ. ಆ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟಿ20 ತಂಡದ ಭಾಗವಾಗಿಯೇ ಇಲ್ಲ. ಈ ಹಿಂದೆ ಟಿ20 ಸರಣಿಗಳ ತಂಡದಿಂದ ರೋಹಿತ್, ಕೊಹ್ಲಿಯ ಹೆಸರು ಮಾಯವಾದಾಗ ರೆಸ್ಟ್ ನೀಡಲಾಗಿದೆ ಎಂಬ ಸುದ್ದಿ ಬಿಸಿಸಿಐ ವಲಯದಿಂದ ಕೇಳಿ ಬರ್ತಿತ್ತು. ಈಗ ಆ ಸುದ್ದಿಯ ಸದ್ದೇ ಇಲ್ಲ.. ಅಲ್ಲಿಗೆ ಸೈಲೆಂಟ್ ಆಗೇ ಕೊಹ್ಲಿ, ರೋಹಿತ್ ಟಿ20 ಕರಿಯರ್​ಗೆ ಕೊನೆ ಮೊಳೆ ಬಿದ್ದಂತಾಗಿದೆ.

ಡೌಟೇ ಬೇಡ.. ಟಿ20ಗೆ ಹಾರ್ದಿಕ್ ಪಾಂಡ್ಯನೇ ನಾಯಕ.!

ನಿರೀಕ್ಷೆಯಂತೆ ಇಂಡೀಸ್ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಹಂಗಾಮಿ ನಾಯಕನಾಗಿ ಬಂದ ಹಾರ್ದಿಕ್, ಇನ್ಮುಂದೆ ಟಿ20 ತಂಡದ ಖಾಯಂ ನಾಯಕ ಅನ್ನೋದು ಇದರೊಂದಿಗೆ ಕನ್ಫರ್ಮ್ ಆಗಿದೆ. ಯುವ ತಂಡ, ಯುವ ನಾಯಕತ್ವದ ಮೇಲೆ ಹೆಚ್ಚು ಒಲವು ತೋರ್ತಾ ಇರೋ ಬಿಸಿಸಿಐ, ಪಾಂಡ್ಯ ನಾಯಕತ್ವದಲ್ಲೇ 2024ರ ಟಿ20 ವಿಶ್ವಕಪ್ ಅಖಾಡಕ್ಕಿಳಿಯೋ ಪ್ಲಾನ್ ರೂಪಿಸಿತ್ತು. ಅದಕ್ಕೀಗ ಅಜಿತ್ ಅಗರ್ಕರ್ ಅಧಿಕೃತ ಮುದ್ರೆ ಒತ್ತಿದಂತಾಗಿದೆ.

ಟಿ20 ತಂಡದಲ್ಲಿ ಯುವಕರಿಗೆ ಮಾತ್ರ ಮಣೆ.!

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾಗಿರುವ ತಂಡವನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ನಿಮಗೂ ಇದು ಅರ್ಥ ಆಗುತ್ತೆ. ಸದ್ಯ ಟಿ20 ಮಾದರಿಯಲ್ಲಿ ವಿಶ್ವದ ಸ್ಟಾರ್ ಬ್ಯಾಟ್ಸ್​ಮನ್​ ಆಗಿ ಗುರುತಿಸಿಕೊಂಡಿರುವ ಸೂರ್ಯ ಕುಮಾರ್ ಯಾದವ್ ಬಿಟ್ರೆ, ಮತ್ತೊಬ್ಬ 30ಕ್ಕಿಂತ ಹೆಚ್ಚಿನ ವಯಸ್ಸಿನ ಆಟಗಾರನಿಗೆ ಸೆಲೆಕ್ಷನ್ ಕಮಿಟಿ ಮಣೆ ಹಾಕಿಲ್ಲ. ಅಲ್ಲಿಗೆ ಕಟ್ & ಕ್ಲೀಯರ್ ಆಗಿ ಸೆಲೆಕ್ಷನ್ ಕಮಿಟಿ ಟಿ20 ತಂಡದಲ್ಲಿ ಯುವ ಆಟಗಾರರಿಗೆ ಮಾತ್ರ ಸ್ಥಾನ ಎಂಬ ಸಂದೇಶವನ್ನ ರವಾನಿಸಿರೋದು ಸ್ಪಷ್ಟವಾಗಿ ಗೊತ್ತಾಗುತ್ತೆ.

ಕೊಹ್ಲಿ -ರೋಹಿತ್ ಶರ್ಮಾ ಮಾತ್ರವಲ್ಲ. ಆರ್. ಅಶ್ವಿನ್, ಮೊಹಮ್ಮದ್ ಶಮಿಯಂತಹ ಸೀನಿಯರ್ಸ್ ಹೆಸರು ಕೂಡ ಟಿ20 ತಂಡದಿಂದ ಮಾಯವಾಗಿದೆ. ಇವರಿಬ್ಬರಿಗೂ ಭವಿಷ್ಯದಲ್ಲಿ ಮತ್ತೆ ಟಿ20 ತಂಡದ ಡೋರ್ ಒಪನ್ ಆಗೋದು ಅನುಮಾನ. ಈ ಹಿಂದೆ ದಿನೇಶ್ ಕಾರ್ತಿಕ್ ಮ್ಯಾಜಿಕಲ್ ಕಮ್​ಬ್ಯಾಕ್​ ಮಾಡೋಕೆ ಅವಕಾಶ ಇಲ್ಲ. ಟಿ20 ತಂಡಕ್ಕೆ ಯುವಕರಿಗೆ ಸೆಲೆಕ್ಟರ್ಸ್ ಮೊದಲ ಆದ್ಯತೆ ನೀಡ್ತಿರೋದು ಸ್ಪಷ್ಟವಾಗಿದೆ.

ಸೀನಿಯರ್ ಆಟಗಾರರನ್ನ ಹೊರಗಿಟ್ಟು ಯಂಗ್​ ಟೀಮ್ ಕಟ್ಟುವ ಬಿಸಿಸಿಐ ಹಾಗೂ ಸೆಲೆಕ್ಷನ್ ಕಮಿಟಿಯ ಪ್ಲಾನ್ ಸರಿಯಾಗಿದೆ. ಹೊಡಿ ಬಡಿ ಆಟಕ್ಕೆ ಫಿಯರ್ಲೆಸ್ ಆಗಿ ಆಡುವ ಯುವ ತಂಡದ ಅಗತ್ಯತೆ ಹೆಚ್ಚಿದೆ. ಹಾಗಂತ, ಈ ಹಿಂದೆ ಅಪಾರ ಕೊಡುಗೆ ನೀಡಿದ ಸೀನಿಯರ್ ಆಟಗಾರರನ್ನ ಏಕಾಏಕಿ ಸೈಡ್ಲೈನ್ ಮಾಡೋದು ಸರಿಯಲ್ಲ. ಹಿರಿಯ ಆಟಗಾರರಿಗೂ ಗೌರವಪೂರ್ವಕ ಗುಡ್ ಬೈ ಹೇಳೋಕೆ ಪ್ಲಾನ್ ರೂಪಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೀನಿಯರ್ ಪ್ಲೇಯರ್ಸ್​ಗೆ BCCI​ ಬೌನ್ಸರ್; ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ T20 ಕರಿಯರ್ ಖತಂ ಮಾಡಿದ್ದೇಕೆ?

https://newsfirstlive.com/wp-content/uploads/2023/07/KOHLI_ROHIT_AJIT_AGARKAR.jpg

Load More