newsfirstkannada.com

2023 ಏಷ್ಯಾಕಪ್; ಪಾಕ್​​ ತಂಡಕ್ಕೆ ಖಡಕ್​​ ವಾರ್ನಿಂಗ್​ ಕೊಟ್ಟ ಕ್ಯಾಪ್ಟನ್​​ ರೋಹಿತ್​ ಶರ್ಮಾ​​​

Share :

29-08-2023

    ಆಗಸ್ಟ್​​ 30ನೇ ತಾರೀಕಿನಿಂದಲೇ 2023 ಏಷ್ಯಾಕಪ್​​ ಸ್ಟಾರ್ಟ್​​

    ಸೆಪ್ಟೆಂಬರ್​​ 2ಕ್ಕೆ ಟೀಂ ಇಂಡಿಯಾ, ಪಾಕಿಸ್ತಾನ ಮುಖಾಮುಖಿ

    ಪಾಕ್​ ತಂಡಕ್ಕೆ ಕ್ಯಾಪ್ಟನ್​​ ರೋಹಿತ್​ ವಾರ್ನಿಂಗ್​ ಕೊಟ್ಟಿದ್ದೇಕೆ?

ಬಹುನಿರೀಕ್ಷಿತ 2023 ಏಷ್ಯಾಕಪ್​​ ಟೂರ್ನಿ ಆಗಸ್ಟ್​​ 30ನೇ ತಾರೀಕಿನಿಂದಲೇ ಶುರುವಾಗಲಿದೆ. ಹೀಗಾಗಿ ಇಡೀ ಕ್ರೀಡಾ ಜಗತ್ತೇ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದೆ. ಸೆಪ್ಟೆಂಬರ್​​​ 2ನೇ ತಾರೀಕು ಪಲ್ಲೆಕೆಲೆ ಮೈದಾನದಲ್ಲಿ ನಡೆಯಲಿರೋ ಈ ಬಿಗ್​ ಮ್ಯಾಚ್​​ಗಾಗಿ ಟೀಂ ಇಂಡಿಯಾ, ಪಾಕ್​​ ಆಟಗಾರರು ಭರ್ಜರಿ ತಯಾರಿ ನಡೆಸಿಕೊಂಡಿದ್ದಾರೆ. ಟೀಂ ಇಂಡಿಯಾ ಆಟಗಾರರು ಆರು ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಲೂರು ಕ್ಯಾಂಪಸ್​​ನಲ್ಲಿ ಸೇರಿರೋ ಆಟಗಾರರು ಅಂತಿಮ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಪಾಕ್​​ ತಂಡಕ್ಕೆ ಟೀಂ ಇಂಡಿಯಾದ ಸ್ಕಿಪರ್​​​ ರೋಹಿತ್​ ಶರ್ಮಾ ವಾರ್ನಿಂಗ್​​ ಕೊಟ್ಟಿದ್ದಾರೆ.

ನಾನು ಎಂದಿಗೂ ನನ್ನ ಬ್ಯಾಟಿಂಗ್​ ಶೈಲಿ ಬದಲಿಸುವುದಿಲ್ಲ. ಮೂರು ವರ್ಷಗಳ ಹಿಂದೆ ನನ್ನ ಕರಿಯರ್​ ಸ್ಟ್ರೈಕ್​ ರೇಟ್​ ಕೇವಲ 90 ಇತ್ತು. ಈಗ ನೀವು ನೋಡಿದ್ರೆ ಅದು 110 ದಾಟಿದೆ. 110 ಸ್ಟ್ರೈಕ್​ ರೇಟ್​ ಜತೆ 55 ಆವರೇಜ್​ ಸಾಧ್ಯವಿಲ್ಲ. ಹೀಗಾಗಿ ನಾನು ಬಿಗ್​ ಸ್ಕೋರ್​ ಮಾಡಲು ಸಾಧ್ಯವಾಗುತ್ತಿಲ್ಲ. ನಾನು ಪವರ್​ ಹಿಟ್ಟಿಂಗ್​​​ ಬ್ಯಾಟಿಂಗ್​ ಮಾಡೋದು. ಈ ಬಗ್ಗೆ ನಾನು ಮ್ಯಾನೇಜ್ಮೆಂಟ್​​ಗೆ ಹೇಳಿದ್ದೇನೆ. ಪಾಕ್​ ವಿರುದ್ಧದ ಪಂದ್ಯದಲ್ಲೂ ನಾನು ರಿಸ್ಕ್​ ತೆಗೆದುಕೊಂಡು ಪವರ್​ ಹಿಟ್​​ ಮಾಡಲಿದ್ದೇನೆ ಎಂದರು.

ಆವರೇಜ್​ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದ ರೋಹಿತ್​​

ಇದು ನನ್ನ ಆಯ್ಕೆ. ನಾನು ಏನಾದ್ರೂ ಹೊಸದಾಗಿ ಟ್ರೈ ಮಾಡಬೇಕು ಎಂದಿದ್ದೇನೆ. ನನ್ನ ಫಲಿತಾಂಶ ನನಗೆ ಖುಷಿ ಕೊಡುತ್ತಿದೆ. ಎಲ್ಲರಿಗೂ ಕ್ರೀಸ್​​ನಲ್ಲಿ ಹೆಚ್ಚು ಸಮಯ ಕಳೆಯಬೇಕು, 150 ರನ್​ ಸ್ಕೋರ್​ ಮಾಡಬೇಕು ಎಂದು ಇರುತ್ತದೆ. ನಾನು ನನ್ನ ಆವರೇಜ್​ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಾನು ಅಗ್ರೆಸ್ಸಿವ್​​ ಆಗಿ ಬ್ಯಾಟಿಂಗ್​ ಮಾಡುತ್ತೇನೆ ಎಂದು ಹೇಳಿದರು. ಈ ಮೂಲಕ ಪಾಕ್​ ತಂಡಕ್ಕೆ ಎಚ್ಚರಿಕೆ ನೀಡಿದ್ದರು.

ಭಾರತ, ಪಾಕ್​ ನಡುವಿನ ಪಂದ್ಯ ಎಂದರೆ ಜನಕ್ಕೆ ಕ್ರೇಜ್​​. ಕಾರಣ ಪಂದ್ಯ ಫ್ಯಾನ್ಸ್​ಗೆ ಅಷ್ಟು ಕಿಕ್​​ ನೀಡಲಿದೆ. ಕೇವಲ ಭಾರತ, ಪಾಕ್​​ ಮಾತ್ರವಲ್ಲ ಇಡೀ ಕ್ರೀಡಾ ಜಗತ್ತೇ ಈ ಬಿಗ್​ ಮ್ಯಾಚ್​ ನೋಡುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2023 ಏಷ್ಯಾಕಪ್; ಪಾಕ್​​ ತಂಡಕ್ಕೆ ಖಡಕ್​​ ವಾರ್ನಿಂಗ್​ ಕೊಟ್ಟ ಕ್ಯಾಪ್ಟನ್​​ ರೋಹಿತ್​ ಶರ್ಮಾ​​​

https://newsfirstlive.com/wp-content/uploads/2023/07/ROHIT_SHARMA_BABAR.jpg

Load More