newsfirstkannada.com

ಭಾರತ ತಂಡದ ನಾಯಕತ್ವದಿಂದ ರೋಹಿತ್​ ಶರ್ಮಾ ಔಟ್​​? ಮುಂದಿನ ಕ್ಯಾಪ್ಟನ್​ ಇವರೇ ನೋಡಿ!

Share :

Published August 26, 2024 at 10:47pm

Update August 26, 2024 at 10:59pm

    ಮುಂದಿನ ವರ್ಷ ನಡೆಯಲಿರೋ ಐಸಿಸಿ ಮೆಗಾ ಚಾಂಪಿಯನ್ ಟ್ರೋಫಿ

    ಚಾಂಪಿಯನ್ ಟ್ರೋಫಿಗೆ ಈಗಿನಿಂದಲೇ ಟೀಮ್​ ಇಂಡಿಯಾ ತಯಾರಿ

    ಮಾರ್ಚ್ 1ನೇ ತಾರೀಕಿನಂದು ಭಾರತ- ಪಾಕಿಸ್ತಾನ ನಡುವಣ ಪಂದ್ಯ!

ಮುಂದಿನ ವರ್ಷ ನಡೆಯಲಿರೋ ಚಾಂಪಿಯನ್ ಟ್ರೋಫಿಗೆ ಈಗಿನಿಂದಲೇ ಟೀಮ್​ ಇಂಡಿಯಾ ತಯಾರಿ ನಡೆಸಿಕೊಂಡಿದೆ. ಈಗಾಗಲೇ ಐಸಿಸಿ ಮೆಗಾ ಟೂರ್ನಿ ತಾತ್ಕಾಲಿಕ ವೇಳಾಪಟ್ಟಿ ರಿಲೀಸ್​ ಆಗಿದ್ದು, ಮಾರ್ಚ್ 1ನೇ ತಾರೀಕಿನಂದು ಭಾರತ- ಪಾಕಿಸ್ತಾನ ನಡುವಣ ಪಂದ್ಯ ನಿಗದಿಪಡಿಸಲಾಗಿದೆ. ಆದರೆ, ಬಿಸಿಸಿಐ ಮಾತ್ರ ಈ ತಾತ್ಕಾಲಿಕ ವೇಳಾಪಟ್ಟಿಗೆ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಐಸಿಸಿ ತಿಳಿಸಿದೆ. ಇದರ ಮಧ್ಯೆ ಟೀಮ್​ ಇಂಡಿಯಾ ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​ ಒಂದಿದೆ.

ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಈಗ 37 ವರ್ಷ. ಐಸಿಸಿ ಚಾಂಪಿಯನ್ ಟ್ರೋಫಿ ನಂತರ ಇವರು 38 ವರ್ಷಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಇವರಿಗೆ ಭಾರತ ಏಕದಿನ ತಂಡದ ಕ್ಯಾಪ್ಟನ್ಸಿಯಿಂದ ಕೊಕ್​​ ನೀಡುವ ಸಾಧ್ಯತೆ ಇದೆ. ಇವರ ಬದಲಿಗೆ ಟೀಮ್​ ಇಂಡಿಯಾದ ಉಪ ನಾಯಕ ಶುಭ್ಮನ್​ ಗಿಲ್​​ ಕ್ಯಾಪ್ಟನ್ಸಿ ಪಟ್ಟ ಕಟ್ಟಲಿದ್ದಾರೆ ಎನ್ನುತ್ತಿವೆ ಮೂಲಗಳು.

ಗಿಲ್​ಗೆ ಉಪ ನಾಯಕನ ಪಟ್ಟ ಕಟ್ಟಿದ್ದು ಏಕೆ?

ಶ್ರೀಲಂಕಾ ಪ್ರವಾಸಕ್ಕೆ ಮುನ್ನವೇ ಟೀಮ್​​ ಇಂಡಿಯಾ ಏಕದಿನ ಮತ್ತು ಟಿ20 ತಂಡದ ಉಪ ನಾಯಕನ ಪಟ್ಟವನ್ನು ಗಿಲ್​ ಅವರಿಗೆ ಕಟ್ಟಲಾಯ್ತು. ದೂರ ದೃಷ್ಟಿಯಿಂದ ಎಲ್ಲಾ ಮಾದರಿಯಲ್ಲೂ ಒಬ್ಬರೇ ಟೀಮ್​ ಇಂಡಿಯಾವನ್ನು ಮುನ್ನಡೆಸಬೇಕು. ಮುಂದಿನ 10 ವರ್ಷಗಳ ಕಾಲ ಟೀಮ್​ ಇಂಡಿಯಾ ಕ್ಯಾಪ್ಟನ್​ ಬದಲಾಗಬಾರದು ಎಂದು ಸೆಲೆಕ್ಷನ್​ ಕಮಿಟಿ ಗಿಲ್​ಗೆ ಉಪ ನಾಯಕ ಪಟ್ಟ ಕಟ್ಟಿದೆ. ಮುಂದಿನ ವರ್ಷದ ಚಾಂಪಿಯನ್ ಟ್ರೋಫಿ ನಂತರ ಟೀಮ್​ ಇಂಡಿಯಾದಲ್ಲಿ ಭಾರೀ ಬದಲಾವಣೆ ಆಗಲಿದ್ದು, ಗಿಲ್​ ಏಕದಿನ ತಂಡದ ಕ್ಯಾಪ್ಟನ್​ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 2025ರ ಐಪಿಎಲ್​​ಗೆ ಯುವರಾಜ್​​​ ಸಿಂಗ್​ ಎಂಟ್ರಿ; ಸಿಕ್ಸರ್​​ ಕಿಂಗ್​​ಗೆ​​ ಈ ತಂಡದಿಂದ ಬಿಗ್​ ಆಫರ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತ ತಂಡದ ನಾಯಕತ್ವದಿಂದ ರೋಹಿತ್​ ಶರ್ಮಾ ಔಟ್​​? ಮುಂದಿನ ಕ್ಯಾಪ್ಟನ್​ ಇವರೇ ನೋಡಿ!

https://newsfirstlive.com/wp-content/uploads/2024/05/Team-India_m.jpg

Load More