newsfirstkannada.com

Rohit Sharma: ತಂಡದೊಂದಿಗಿನ ಮೊದಲ ದಿನದ ಪ್ರಯಾಣ ಖರಾಬಾಗಿತ್ತಂತೆ! ಇದಕ್ಕೆ ಕಾರಣ ಯಾರು ಗೊತ್ತಾ?

Share :

09-11-2023

  ಸಾಮಾನ್ಯ ಆಟಗಾರನಾಗಿ ತಂಡ ಸೇರಿದ ರೋಹಿತ್​ ಶರ್ಮಾ

  ನಾನ್​ ಇಲ್ಲಿ ಕೂರ್ತಿನಿ. ನೀನ್​​ ಬೇರೆ ಸೀಟ್​ ನೋಡ್ಕೋ ಅಂದಿದ್ದ ಕ್ರಿಕೆಟಿಗ

  ಆತ ಮೊದಲ ಪ್ರವಾಸದಲ್ಲಿ ಮಾತೇ ಆಡಲಿಲ್ಲ ಎಂದ ರೋಹಿತ್​ ಶರ್ಮಾ

ಈಗ ರೋಹಿತ್​ ಶರ್ಮಾ ಟೀಮ್​ ಇಂಡಿಯಾದ ಕ್ಯಾಪ್ಟನ್​ & ಬಾಸ್​. ಆದರೆ ಆರಂಭದಲ್ಲಿ ಒಬ್ಬ ಸಾಮಾನ್ಯ ಆಟಗಾರ. ಸಾಮಾನ್ಯನಾಗಿ ತಂಡಕ್ಕೆ ಎಂಟ್ರಿ ರೋಹಿತ್​, ಮೊದಲ ಬಾರಿ ತಂಡದೊಂದಿಗೆ ಪ್ರಯಾಣಿಸಿದ ಅನುಭವ ಸಿಕ್ಕಾಪಟ್ಟೆ ಖರಾಬಾಗಿತ್ತಂತೆ. ಇದಕ್ಕೆಲ್ಲಾ ಕಾರಣ ಯುವರಾಜ್​ ಸಿಂಗ್.

ಯುವರಾಜ್​ ಸಿಂಗ್.​ ಮತ್ಯಾರು ಮಾಡ್ತಾರೆ. ನಾನು ಏನು ಹೇಳಲಿ. ನಾನು ಅವರಿಗೆ ತುಂಬಾ ಭಯಪಡ್ತಿದ್ದೆ. ಭಾರತೀಯ ತಂಡದ ಬಸ್​​ನೊಳಗಿನ ಮೊದಲ ಅನುಭವವನ್ನ ಹೇಳ್ತಿನಿ. ಮೊದಲ ಬಾರಿ ಅಲ್ವಾ. ನಾನು ಒಂದು ಗಂಟೆ ಮೊದಲೆ ಕೆಳಗೆ ಹೋಗಿದ್ದೆ. ಒಂದು ಗಂಟೆ ಕೆಳಗಡೆ ನಿಂತುಕೊಂಡು ನೋಡ್ತಾ ಇದ್ದೆ. ಬಸ್​ ಎಲ್ಲಿದೆ.? ಏನಾಗುತ್ತೆ.? ಎಲ್ಲರೂ ಎಲ್ಲಿಂದ ಬರ್ತಾರೆ.? ನಾನು ಲಾಬಿಯಲ್ಲಿ ಕೂತಿದ್ದೆ. ಅದರ ಹತ್ತಿರ ಬಸ್​​ ಬಂದು ನಿಂತಿತು. ಅವರು ಹೇಳಿದ್ರು ಬಂದು ಕೂರಬಹುದು ಅಂತಾ. ಎಲ್ಲರೂ ಬರಲು ಆರಂಭಿಸಿದ್ರು. ಯಾರು ಎಲ್ಲಿ ಕೂರ್ತಾರೆ ಅನ್ನೋದನ್ನ ನಾನು ನೋಡಿಕೊಂಡೆ. ಅಲ್ಲಿ ಸಚಿನ್​ ಕೂರ್ತಾರೆ. ಇಲ್ಲಿ ದ್ರಾವಿಡ್​ ಕೂರ್ತಾರೆ. ನನ್ನ ಜೊತೆಗೆ ನನ್ನ ವಯಸ್ಸಿನ ಕೆಲ ಆಟಗಾರರು ಇದ್ರು. ಅವರನ್ನ ನೋಡಿ ನನಗೆ ಸ್ವಲ್ಪ ರಿಲೀಫ್​ ಆಯ್ತು. ಆಗ ಬಂದಿದ್ದು ಯುವರಾಜ್​ ಸಿಂಗ್​. ನಾನು ಯುವಿಯ ಬಹುದೊಡ್ಡ ಫ್ಯಾನ್​​. ನಿಜವಾಗ್ಲೂ ಒಳ್ಳೆ ಫುಟ್ಬಾಲ್​ ಸ್ಟಾರ್​​ ಹೊರಗಡೆ ಬಂದ್ರು. ಶಾರ್ಟ್ಸ್​, ಸಾಕ್ಸ್​​, ಚೆಂದದ ಸನ್​ಗ್ಲಾಸ್​, ಉಲ್ಟಾ ಕ್ಯಾಪ್​ ಹಾಗೂ ಹೆಡ್​ಪೋನ್​. ನನಗೆ ಒಳಗಿನಿಂದಲೆ ಗೊತ್ತಾಯ್ತು. ಒಳಗಡೆ ಬಂದ್ರು. ನಾನು ಹಾಯ್​ ಯುವಿ ಪಾ. ನಾನು ರೋಹಿತ್​ ಅಂದೆ. ಹ.. ನಿನಗೆ ಗೊತ್ತಾ ಇದು ಯಾರ ಸೀಟ್​ ಅಂತಾ.? ಎಂದು ಕೇಳಿದ್ರು. ನಾನು ಹೇಳಿದೆ ನನಗೆ ಗೊತ್ತಿಲ್ಲ ಅಂತಾ. ಆಗ ಯುವಿ ಹೇಳಿದ್ರು, ನಾನ್​ ಇಲ್ಲಿ ಕೂರ್ತಿನಿ. ನೀನ್​​ ಬೇರೆ ಸೀಟ್​ ನೋಡ್ಕೋ ಎಂದ್ರು.

ಇದನ್ನು ಓದಿ: ಬೌಲಿಂಗ್ Ranking​ನಲ್ಲಿ ನಂ.1 ಪಟ್ಟಕ್ಕೇರಿದ ಸಿರಾಜ್.. ಶುಭ್​ಮನ್ ಹೆಸರಲ್ಲೂ ಇದೆ ದಾಖಲೆ.. ಅದೇನದು? ಈ ಸ್ಟೋರಿ ಓದಿ ​

ಅದೊಂದು ಕೆಟ್ಟ ಮೊದಲ ಅನುಭವ. ಮತ್ತೆ ಯುವರಾಜ್​ ಸಿಂಗ್​ ಮೊದಲ ಪ್ರವಾಸದಲ್ಲಿ ಮಾತೇ ಆಡಲಿಲ್ಲ. ಐರ್ಲೆಂಡ್​ನಲ್ಲಿ ಮ್ಯಾನ್​ ಆಫ್​ ದ ಸಿರೀಸ್​ ಸಿಗ್ತು. ನಾನು ಯುವಿ ಪಾ ಚೆನ್ನಾಗಿ ಆಡಿದ್ರಿ ಅಂದೆ. ಅದಕ್ಕೆ ಅವ್ರು ಥ್ಯಾಂಕ್ಸ್​ ಅಂದ್ರು ಅಷ್ಟೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Rohit Sharma: ತಂಡದೊಂದಿಗಿನ ಮೊದಲ ದಿನದ ಪ್ರಯಾಣ ಖರಾಬಾಗಿತ್ತಂತೆ! ಇದಕ್ಕೆ ಕಾರಣ ಯಾರು ಗೊತ್ತಾ?

https://newsfirstlive.com/wp-content/uploads/2023/11/Rohit-Sharma.jpg

Load More