newsfirstkannada.com

×

10 ಸಿಕ್ಸರ್, 6 ಬೌಂಡರಿ.. ಟೀಂ ಇಂಡಿಯಾಗೆ ದುಸ್ವಪ್ನವಾಗಿ ಕಾಡಿದ ವಿಂಡೀಸ್​ನ ಕಿಂಗ್, ಪೂರನ್.. ಹೇಗಿತ್ತು ಸ್ಫೋಟಕ ಬ್ಯಾಟಿಂಗ್..!?

Share :

Published August 14, 2023 at 9:43am

    ವಿಂಡೀಸ್​ ತಂಡಕ್ಕೆ 8 ವಿಕೆಟ್​​ಗಳ ಭರ್ಜರಿ ಗೆಲುವು

    3-2 ರಿಂದ ಸರಣಿ ಗೆದ್ದ ವೆಸ್ಟ್​​ಇಂಡೀಸ್​​​ ತಂಡ

    ಪ್ರವಾಸಿ ಟೀಮ್ ಇಂಡಿಯಾಗೆ ಭಾರೀ ಮುಖಭಂಗ

ಮೂರು ಮಾದರಿ ಸರಣಿ ಗೆಲ್ಲುವ ಟೀಮ್ ಇಂಡಿಯಾ ಕನಸು ನುಚ್ಚುನೂರಾಗಿದೆ. ವಿಂಡೀಸ್​ ವಿರುದ್ಧ ಟಿ20 ಸರಣಿಯಲ್ಲಿ ಹಾರ್ದಿಕ್​ ಪಾಂಡ್ಯ ಪಡೆ ಕೈಚೆಲ್ಲಿ ಮುಖಭಂಗ ಅನುಭವಿಸಿದೆ. ಡಿಸೈಡರ್ ಮ್ಯಾಚ್​​ನಲ್ಲಿ ವಿಂಡೀಸ್​ ತಂಡ 8 ವಿಕೆಟ್​ಗಳ ಗೆಲುವು ದಾಖಲಿಸಿ ಚಾಂಪಿಯನ್​ ಪಟ್ಟಕ್ಕೇರಿತು.

ಫ್ಲೋರಿಡಾದಲ್ಲಿ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದು ಭಾರತಕ್ಕೆ ಆರಂಭದಲ್ಲಿ ಮುಳುವಾಯ್ತು. ಕಳೆದ ಪಂದ್ಯ ಹೀರೋಸ್​​ ಜೈಸ್ವಾಲ್​​​​ 5 ಹಾಗೂ ಶುಭ್​​ಮನ್​​​​​​ ಗಿಲ್​ ಜಸ್ಟ್​​​ 9 ರನ್​​​​ಗೆ ನಿರಾಸೆ ಮೂಡಿಸಿದ್ರು.
3ನೇ ವಿಕೆಟ್​​ಗೆ ಡೇಂಜರಸ್​ ಸೂರ್ಯಕುಮಾರ್ ಯಾದವ್​ ಹಾಗೂ ತಿಲಕ್​ ವರ್ಮಾ ಸಿಡಿದು ನಿಂತ್ರು. 49 ರನ್​​​ ಗಳಿಸಿದ ಈ ಸೆಟಲ್ಡ್​ ಜೋಡಿಯನ್ನ ಸ್ಪಿನ್ನರ್ ಚೇಸ್​ ಬೇರ್ಪಡಿಸಿದ್ರು. ಉತ್ತಮವಾಗಿ ಆಡ್ತಿದ್ದ ತಿಲಕ್​​​​​​​​​ 27ಕ್ಕೆ ಆಟ ನಿಲ್ಲಿಸಿದ್ರು.

ಸೂರ್ಯಕುಮಾರ್​ ಏಕಾಂಗಿ ಹೋರಾಟ

ಫೈನಲ್​​ ಫೈಟ್​​ನಲ್ಲಾದ್ರು ಸ್ಯಾಮ್ಸನ್​​ ಅಬ್ಬರಿಸ್ತಾರೆ ಅನ್ನೋ ನಿರೀಕ್ಷೆ ಹುಸಿಯಾಯ್ತು. ಪಟಪಟನೇ 2 ಬೌಂಡ್ರಿ ಸಿಡಿಸಿ ಪೆವಿಲಿಯನ್​ ಸೇರಿಕೊಂಡ್ರು. ಇನ್ನೊಂದೆಡೆ ಜವಾಬ್ದಾರಿಯುತ ಅಟವಾಡಬೇಕಿದ್ದ ಕ್ಯಾಪ್ಟನ್ ಹಾರ್ದಿಕ್​​​ ಎರಡಂಕಿಗೆ ಸುಸ್ತಾದ್ರು. ಒಂದೆಡೆ ನಂಬಿಗಸ್ಥ ಬ್ಯಾಟ್ಸ್​​ಮನ್​​​ಗಳು ಫೇಲ್ಯೂರ್​ ಆದ್ರು ಸೂರ್ಯಕುಮಾರ್​​ ಯಾದವ್​ ಎಂದಿನಂತೆ ನಿಭೀರ್ತಿ ಆಟವಾಡಿದ್ರು. 38 ಎಸೆತದಲ್ಲಿ ಅರ್ಧಶತಕ ಪೂರೈಸಿ 100 ರ ಗಡಿ ದಾಟಿಸಿದ್ರು.

18ನೇ ಓವರ್​​ನಲ್ಲಿ ಸೂರ್ಯ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಎಲ್​​​ಬಿಡಬ್ಲ್ಯು ಬಲೆಗೆ ಬಿದ್ರು. ಕೊನೆಯಲ್ಲಿ ಆಲ್​ರೌಂಡರ್​ ಅಕ್ಷರ್ ಪಟೇಲ್ ಸೇರಿ ಬಾಲಂಗೋಚಿಗಳು ಕಮಾಲ್ ಮಾಡ್ಲಿಲ್ಲ. ಫೈನಲಿ ಭಾರತ 9 ವಿಕೆಟ್​ಗೆ 165 ರನ್ ಬಾರಿಸ್ತು. 166 ರನ್ ಗುರಿ ಬೆನ್ನಟ್ಟಿದ ವಿಂಡೀಸ್​​​​​​​​​ ಕೈಲ್ ಮೇಯರ್ಸ್​ ರನ್ನ ಬೇಗನೆ ಕಳೆದುಕೊಂಡ್ರೂ ನಿಕೋಲಸ್ ಪೂರನ್​​​​-ಬ್ರೆಂಡನ್​​​ ಕಿಂಗ್​ ಇಂಡಿಯನ್ ಬೌಲರ್ಸ್​ ಬೆಂಡೆತ್ತಿದ್ರು. ದಂಡಂ ದಶಗುಣಂ ರೀತಿ ಬ್ಯಾಟ್ ಬೀಸಿದ ಈ ಜೋಡಿ ಸೆಂಚುರಿ ಜೊತೆಯಾಟವಾಡಿ ಗೇಮ್​ ಅನ್ನ ಕಂಪ್ಲೀಟ್​​ ಕಂಟ್ರೋಲ್​ ತೆಗೆದುಕೊಂಡ್ರು. ಪೂರನ್​​ 47 ರನ್​ಗೆ ಔಟಾದ್ರು.

ಕೊನೆವರೆಗೆ ಮಗ್ಗುಲ ಮುಳ್ಳಾಗಿ ಕಾಡಿದ ಕಿಂಗ್ ಸ್ಫೋಟಕ 85 ರನ್​ ಚಚ್ಚಿದ್ರು. ಫೈನಲಿ ವಿಂಡೀಸ್​ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ, 3-2 ರಿಂದ ಸರಣಿ ಕೈವಶಮಾಡಿಕೊಳ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

10 ಸಿಕ್ಸರ್, 6 ಬೌಂಡರಿ.. ಟೀಂ ಇಂಡಿಯಾಗೆ ದುಸ್ವಪ್ನವಾಗಿ ಕಾಡಿದ ವಿಂಡೀಸ್​ನ ಕಿಂಗ್, ಪೂರನ್.. ಹೇಗಿತ್ತು ಸ್ಫೋಟಕ ಬ್ಯಾಟಿಂಗ್..!?

https://newsfirstlive.com/wp-content/uploads/2023/08/West_INDIES-1.jpg

Load More