newsfirstkannada.com

ಉದ್ಘಾಟನೆಯಾಗಿ 6 ತಿಂಗಳು ಅಷ್ಟೇ.. ಮಳೆಗೆ ಸೋರುತ್ತಿದೆ ಅಯೋಧ್ಯೆ ರಾಮಮಂದಿರ..!

Share :

Published June 25, 2024 at 9:58am

Update June 25, 2024 at 1:23pm

    ಜನವರಿ 22ರಂದು ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

    ಅಯೋಧ್ಯೆಗೆ ಕೋಟಿ ಕೋಟಿ ಭಕ್ತರು ಭೇಟಿ, ರಾಮಲಲ್ಲಾನ ದರ್ಶನ

    ಗರ್ಭಗುಡಿಯ ಛಾವಣಿ ಮೂಲಕ ನೀರು ಒಳಗೆ ಬಂದಿದೆ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಯಾಗಿ ಆರು ತಿಂಗಳಾಗಿದೆ. ಇದೇ ವರ್ಷದ ಜನವರಿ 22ರಂದು ಪ್ರಧಾನಿ ಮೋದಿ ರಾಮಮಂದಿರ ಲೋಕಾರ್ಪಣೆ ಮಾಡಿದ್ದರು.

ಈ ಬೆನ್ನಲ್ಲೇ ದೇಶದ ಮೂಲೆ ಮೂಲೆಯಿಂದ ಕೋಟಿ ಕೋಟಿ ಭಕ್ತರು ಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಹೀಗಿರುವಾಗ ಅಯೋಧ್ಯೆಯಲ್ಲಿ ಸದ್ಯ ಭಾರೀ ಮಳೆಯಾಗ್ತಿದ್ದು ಮಳೆಗೆ ರಾಮಮಂದಿರದ ಛಾವಣಿ ಸೋರುತ್ತಿದೆ ಅಂತ ದೇವಾಲಯದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ದರ್ಶನ್ ಅಭಿಮಾನಿಗಳಿಗೆ ಪುಕಪುಕ.. ಫೀಲ್ಡಿಗೆ ಇಳಿದ ಪೊಲೀಸರು.. ಓರ್ವ ಅರೆಸ್ಟ್..!

ಮೊದಲ ಮಳೆಗೆ ಗರ್ಭಗುಡಿಯ ಛಾವಣಿ ಮೂಲಕ ನೀರು ಒಳಗೆ ಬಂದಿದೆ. ನೂರಾರು ಎಂಜಿನಿಯರ್‌ಗಳು ಇಲ್ಲಿದ್ದಾರೆ. ಸುಸಜ್ಜಿತವಾಗಿಯೇ ರಾಮಮಂದಿರ ನಿರ್ಮಿಸಲಾಗಿದೆ. ಹೀಗಿದ್ದರೂ ಗರ್ಭಗುಡಿಯೇ ಸೋರುತ್ತಿರುವುದು ಟೀಕೆಗೆ ಕಾರಣವಾಗಿದೆ. ಕೂಡಲೇ ರಾಮಮಂದಿರದ ಕಡೆ ಗಮನ ಹರಿಸಿ, ಸಮಸ್ಯೆ ಸರಿಪಡಿಸಬೇಕಿದೆ ಎಂದಿದ್ದಾರೆ. ಇದೇ ವೇಳೆ ಅಯೋಧ್ಯೆ ಮಂದಿರದ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಸೋರಿಕೆ ಸಹಜ ಅಂತ ದೇಗುಲ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಡೆಡ್ಲಿ ಸ್ಪೆಲ್​ಗೆ ಆಸಿಸ್ ಕಕ್ಕಾಬಿಕ್ಕಿ.. ಆಸ್ಟ್ರೇಲಿಯಾ​ ಕನಸಿಗೆ ರೋಹಿತ್ ಕೊಳ್ಳಿ ಇಟ್ಟಿದ್ದು ಹೀಗೆ..!

ದೇವಾಲಯದ ಆವರಣದಲ್ಲಿ ಮಳೆ ನೀರು ಹೋಗಲು ಚರಂಡಿ ವ್ಯವಸ್ಥೆಯೂ ಇಲ್ಲ. ರಾಮಲಲ್ಲಾ ಮುಂಭಾಗದಲ್ಲಿ ‌ಅರ್ಚಕರು ಕುಳಿತುಕೊಳ್ಳುವ ಸ್ಥಳದಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆ ಆಗಿದೆ. ದೇಶದ ಪ್ರಮುಖ ಇಂಜಿನಿಯರ್ಸ್​ ರಾಮಮಂದಿರ ಕಟ್ಟಿದ್ದಾರೆ. ಆದರೆ ಇದರಲ್ಲೇ ಮಳೆ ನೀರು ಸೋರಿಕೆಯಾಗುತ್ತಿರುವುದು ಅಶ್ಚರ್ಯ ಎಂದ ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ವಿಶ್ವಪ್ರಸಿದ್ದ ದೇವಾಲಯದಲ್ಲಿ ಮಳೆ ನೀರಿನ‌ ಸೋರಿಕೆಯೇ ಅಶ್ಚರ್ಯ ತಂದಿದೆ. ಇದು ಹೇಗೆ ಆಯಿತು? ದೊಡ್ಡ ದೊಡ್ಡ ಇಂಜಿನಿಯರ್​ಗಳು ನಿರ್ಮಿಸಿದ ಮೇಲೂ ಅವರ ಉಪಸ್ಥಿತಿಯಲ್ಲಿ ಮಳೆ ನೀರಿನ ಸೋರಿಕೆ , ಇದು ದೊಡ್ಡ ತಪ್ಪು. ದೇವಾಲಯದ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಆರೋಪಿಸಿದ್ದಾರೆ.

ಇದನ್ನೂ ಓದಿ:ಹೊಟ್ಟೆ ತುಂಬಾ ಕೊಟ್ಟಿದ್ದಾರೆ.. ನಟ ದರ್ಶನ್ ಸ್ಥಿತಿ ನೆನೆದು ಬೇಸರಗೊಂಡ ಧರ್ಮ ಕೀರ್ತಿ ರಾಜ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಘಾಟನೆಯಾಗಿ 6 ತಿಂಗಳು ಅಷ್ಟೇ.. ಮಳೆಗೆ ಸೋರುತ್ತಿದೆ ಅಯೋಧ್ಯೆ ರಾಮಮಂದಿರ..!

https://newsfirstlive.com/wp-content/uploads/2024/01/AYODHYE-2-1.jpg

Load More