Advertisment

ಬೆಂಗಳೂರಲ್ಲಿ ವಿಚಿತ್ರ ಪ್ರಕರಣ.. ಬೆಕ್ಕಿಗೆ ಮುಖ, ಮೂತಿ ನೋಡದೇ ಹೊಡೆದ ರೂಮ್‌ಮೇಟ್‌; ಆಮೇಲೇನಾಯ್ತು?

author-image
admin
Updated On
ಬೆಂಗಳೂರಲ್ಲಿ ವಿಚಿತ್ರ ಪ್ರಕರಣ.. ಬೆಕ್ಕಿಗೆ ಮುಖ, ಮೂತಿ ನೋಡದೇ ಹೊಡೆದ ರೂಮ್‌ಮೇಟ್‌; ಆಮೇಲೇನಾಯ್ತು?
Advertisment
  • ಒಬ್ಬನಿಗೆ ಪ್ರಾಣಿಗಳೇ ಪ್ರಪಂಚ, ಮತ್ತೊಬ್ಬನಿಗೆ ಪ್ರಾಣಿಗಳೇ ಪ್ರಾಬ್ಲಂ!
  • ಇಬ್ಬರು ರೂಮ್​​ಮೆಟ್ಸ್​​ ವೈರಿಗಳಾಗುವಂತೆ ಮಾಡಿದ ಬೆಕ್ಕಿನ ಜಗಳ
  • ಜೊತೆಗಾರನ ಮೇಲೆ ಮೈಕೋ ಲೇಔಟ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು: ನಾಯಿ ಕಚ್ಚಿ ಬಿಡ್ತು ಅಥವಾ ನಾಯಿ ಮಿಸ್​​ ಆಗಿದೆ ಅಂತಾ ಕಂಪ್ಲೇಂಟ್​ ಕೊಟ್ಟ ಕಥೆಗಳನ್ನ ಕೇಳಿದ್ದೀವಿ. ನೋಡಿದ್ದೀವಿ. ಆದ್ರೆ ಇದು ಒಂದು ಬೆಕ್ಕಿನ ಕಹಾನಿ. ಅವ್ರಿಬ್ಬರು ರೂಮ್​ಮೇಟ್ಸ್​. ಒಬ್ಬನಿಗೆ ಪ್ರಾಣಿಗಳೇ ಪ್ರಪಂಚ. ಮತ್ತೊಬ್ಬನಿಗೆ ಪ್ರಾಣಿಗಳಂದ್ರೆನೇ ಪ್ರಾಬ್ಲಂ. ಹೀಗಿದ್ದಾಗ ಒಬ್ರು ಅಡ್ಜೆಸ್ಟ್‌ ಮಾಡಿಕೊಳ್ಳಲೇಬೇಕು. ಇಲ್ಲ ಅಂದ್ರೆ ಹೀಗ್ ಆಗುತ್ತೆ ನೋಡಿ.

Advertisment

publive-image

ಅದೆಷ್ಟು ಮುದ್ದು ಮುದ್ದಾಗಿದೆ ನೋಡಿ.. ಈ ಯುವಕನಿಗಂತು ಈ ಬೆಕ್ಕು ಅಂದ್ರೆ ಪಂಚಪ್ರಾಣ. ಆಟ ಊಟ ಎಲ್ಲವೂ ಇದರ ಜೊತೆಯಲ್ಲೇ. ಇವ್ರು ತರುಣ್. ಇನ್ನ ಈತ ಮನಿಷ್ ರತ್ನಾಕರ್​. ಇವರಿಬ್ಬರು ರೂಮ್​ ಮೆಟ್ಸ್. ಈ ತುರುಣ್​ ಒಬ್ಬ ಅನಿಮಲ್ ಲವರ್​. ಮನಿಷ್​​ ಕಥೆ ಯಾಕ್ ಕೇಳ್ತೀರಾ.. ಪ್ರಾಣಿಗಳೆಂದರೆ ದೂರ ದೂರ.. ಇದೇ ಇದೇ ವಿಚಾರ ಈಗ ಇಬ್ಬರು ರೂಮ್​​ಮೆಟ್ಸ್​​ ವೈರಿಗಳಾಗುವಂತೆ ಮಾಡಿದೆ.

[caption id="attachment_98961" align="aligncenter" width="800"]publive-image ಆರೋಪಿ ಮನಿಷ್ ರತ್ನಾಕರ್ ಹಾಗು ಬೆಕ್ಕಿನ ಮಾಲೀಕ ತರುಣ್[/caption]

ಮನೀಷ್‌ ಈ ಮುದ್ದಾದ ಬೆಕ್ಕಿನ ಮೇಲೆ ರಾಕ್ಷಸಿ ವರ್ತನೆ ತೋರಿಸಿದ್ದಾರಂತೆ. ತರುಣ್, ತನ್ನ ಹುಟ್ಟೂರು ಹೊಸಪೇಟೆಯಿಂದ ಈ ಬೆಕ್ಕನ್ನ ರೂಮಿಗೆ ತಂದು ಸಾಕ್ತಿದ್ದ. ಆದ್ರೆ, ತನ್ನ ರೂಮ್​ನಲ್ಲಿ ಬೆಕ್ಕಿರೋದನ್ನ ಸಹಿಸದ ಮನಿಷ್, ತರುಣ್​ ಇಲ್ಲದ ವೇಳೆ ​ಇದಕ್ಕೆ ಮನಸೋ ಇಚ್ಚೆ ಥಳಿಸಿದ್ದಾನೆ. ಮೃಗೀಯ ವರ್ತನೆ ತೋರಿಸಿದ್ದಾನೆ.

Advertisment

ಇದನ್ನೂ ಓದಿ: 42ನೇ ವಸಂತಕ್ಕೆ ಕಾಲಿಟ್ಟ ಮೋಹಕ ತಾರೆ ರಮ್ಯಾ; ಸ್ಟಾರ್​ ನಟಿ ಬರ್ತ್​ ಡೇ ದಿನ ಹೋಗಿದ್ದೇಲ್ಲಿಗೆ? 

ಬೆಕ್ಕು ಮೂಲೆಯಲ್ಲಿ ಕೂತಿದ್ರೂ ಕಾಟ ಕೊಡ್ತು ಅಂತ ಮುಖ, ಕುತ್ತಿಗೆಗೆ ರಕ್ತ ಬರುವ ಹಾಗೇ ಹೊಡೆದಿದ್ದಾನೆ ಅಂತ ಬೆಕ್ಕಿನ ಮಾಲೀಕ ಆರೋಪ ಮಾಡಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಕೂಡ ನೀಡಿದ್ದಾರೆ.

ಅದೇನೇ ಹೇಳಿ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೇ ಮುದ್ದು ಬೆಕ್ಕಿನ ಮರಿ ಮಾತ್ರ ಸರಿಯಾಗಿ ಪೆಟ್ಟು ತಿಂದಿದೆ. ಈ ರೀತಿ ತಮ್ಮ ತಮ್ಮ ನಡುವಿನ ಭಿನ್ನಾಭಿಪ್ರಾಯಕ್ಕೆ ಮೂಕ ಪ್ರಾಣಿ ಮೇಲೆ ದರ್ಪ ತೋರೋದು ಖಂಡನೀಯ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment