newsfirstkannada.com

ಬೆಂಗಳೂರು ಬಂದ್​, ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ಬದಲಾವಣೆ; ಸಂಚಾರಕ್ಕೆ ಯಾವ ರೂಟ್​ ಸೂಕ್ತ? ಇಲ್ಲಿದೆ ಮಾಹಿತಿ

Share :

11-09-2023

    ಖಾಸಗಿ ಸಾರಿಗೆ ಒಕ್ಕೂಟಗಳು ಇಂದು ಬಂದ್ ಆಚರಿಸುತ್ತಿದೆ

    ಇಂದು ಖಾಸಗಿ ವಾಹನಗಳು ಓಡಾಡುವುದನ್ನು ನಿಲ್ಲಿಸಿವೆ

    ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ

ಬೆಂಗಳೂರು ಸ್ತಬ್ಧವಾಗಿದೆ. ಕಾರಣ ಖಾಸಗಿ ಸಾರಿಗೆ ಒಕ್ಕೂಟಗಳು ಇಂದು ಬಂದ್ ಆಚರಿಸುತ್ತಿದೆ. ಈ ಹಿನ್ನಲೆ ನಗರದಲ್ಲಿ ಖಾಸಗಿ ವಾಹನಗಳು ಓಡಾಡುವುದನ್ನು ನಿಲ್ಲಿಸಿದ್ದು, ನಗರದಲ್ಲಿ ಸಾರಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ. ಪ್ರತಿಭಟನೆ ನಡೆಯುವ ಕಾರಣ ಕೆಲವು ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರಿಂದ ವ್ಯವಸ್ಥೆ ಕಲ್ಪಿಸಲಾಗಿದೆ.

  • ಖೋಡೆ ಸರ್ಕಲ್‌ಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ
  • RR ಜಂಕ್ಷನ್‌ ಮೂಲಕ ಕೃಷ್ಣ ಪ್ಲೋರ್- ಮಲ್ಲೇಶ್ವರಂ ಕಡೆಗೆ ಬದಲಾವಣೆ ಮಾಡಲಾಗಿದೆ
  • ಗೂಡ್ ಶೆಡ್ ರಸ್ತೆಯಿಂದ ಜಿ.ಟಿ. ರಸ್ತೆ ಮುಖಾಂತರ ಸಂಚಾರಕ್ಕೆ ಅವಕಾಶ
  • ಸಂಗೊಳ್ಳಿ ರಾಯಣ್ಣ ಸರ್ಕಲ್, ಓಕಳಿಪುರಂ, ಸುಜಾತ ಕಡೆಗೆ ಸಂಚಾರಕ್ಕೆ ಅವಕಾಶ
  • ಆನಂದ್ ರಾವ್ ಸರ್ಕಲ್‌ನಿಂದ ಹಳೇ ಜೆಡಿಎಸ್ ರಸ್ತೆ ಕಡೆಗೆ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ
  • ಜೊತೆಗೆ ಶೇಷಾದ್ರಿಪುರಂ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ
  • ಮೈಸೂರ್ ಬ್ಯಾಂಕಿನಿಂದ ಬರುವ ವಾಹನ ಸಂಚಾರ ಬದಲಿಸಬೇಕಿದೆ
  • ಪ್ಯಾಲೇಸ್ ರಸ್ತೆ, ಮಹಾರಾಣಿ ಅಂಡರ್ ಪಾಸ್, ಬಸವೇಶ್ವರ ಸರ್ಕಲ್ ಮೂಲಕ ತೆರಳಬೇಕಿದೆ

ಬೆಂಗಳೂರು ಬಂದ್ ಇರುವ ಕಾರಣ​ ಈ ಮಾರ್ಗಗಳ ಮುಖಾಂತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಾಗಾಗಿ ವಾಹನ ಸವಾರರು ರಸ್ತೆ ಬದಲಾವಣೆ ಮಾಡುವ ಮೂಲಕ ಸಂಚರಿಸಿದರೆ ಅನುಕೂಲವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಬಂದ್​, ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ಬದಲಾವಣೆ; ಸಂಚಾರಕ್ಕೆ ಯಾವ ರೂಟ್​ ಸೂಕ್ತ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/09/Bengaluru-Bandh-1.jpg

Load More