newsfirstkannada.com

ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ; ದರ್ಶನ್​ಗೆ ಆತಿಥ್ಯ ನೀಡಲು ರೌಡಿಗಳ ಪೈಪೋಟಿ; ಇನ್‌ಸೈಡ್ ಮಾಹಿತಿ ಇಲ್ಲಿದೆ

Share :

Published June 25, 2024 at 9:14pm

  ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ಆತಿಥ್ಯ ನೀಡಲು ಫೈಟ್​​!

  2011ರಲ್ಲಿ ದರ್ಶನ್​ ಜೈಲಿನಲ್ಲಿದ್ದಾಗ ಸಾಥ್ ಕೊಟ್ಟಿದ್ದ ಸೈಕಲ್ ರವಿ

  ದರ್ಶನ್​ಗೆ ಏನೆಲ್ಲಾ ಬೇಕು ಅದನ್ನು ನೀಡಲು ರೆಡಿ ಎಂದ ರೌಡಿ ನಾಗ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಸಾಮಾನ್ಯ ಕೈದಿಗಳಂತೆ ದಿನ ಕಳೆಯುತ್ತಿರುವ ದರ್ಶನ್ ಊಟ, ತಿಂಡಿ ಹಾಗೂ ನಿದ್ರೆಯನ್ನು ಸರಿಯಾಗಿ ಮಾಡದೇ ಚಿಂತೆಗೆ ಬಿದ್ದಿದ್ದಾರೆ. ಈ ಮಧ್ಯೆ ಜೈಲಲ್ಲಿ ನಟ ದರ್ಶನ್​​ಗೆ ಆತಿಥ್ಯ ನೀಡಲು ರೌಡಿಗಳ ಪಡೆ ನಾ ಮುಂದು ತಾ ಮುಂದು ಅಂತ ಪೈಪೋಟಿ ನಡೆಸುತ್ತಿರೋ ರೋಚಕ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ನಿರ್ಮಾಪಕ ಉಮಾಪತಿ ಬಗ್ಗೆ ದರ್ಶನ್ ಫ್ಯಾನ್ ಅವಹೇಳನಕಾರಿ ಹೇಳಿಕೆ; ಆರೋಪಿ ಚೇತನ್ ಹೇಳಿದ್ದೇನು? 

ಜೈಲಿನಲ್ಲಿ ದರ್ಶನ್​ಗೆ ಆತಿಥ್ಯ ನೀಡಲು ರೌಡಿಗಳ ಫೈಟ್​​!
ವಿಲ್ಸನ್ ಗಾರ್ಡನ್ ನಾಗ.. ಸೈಕಲ್ ರವಿ ಟೀಂ ಪೈಪೋಟಿ
ಪಟ್ಟಣಗೆರೆ ಶೆಡ್​​ನಲ್ಲಿ ಹೇಯ ಕೃತ್ಯ ಎಸಗಿದ್ದ ದರ್ಶನ್ ಗ್ಯಾಂಗ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದೆ. ಅಟ್ಟಹಾಸ ಮೆರೆದಿದ್ದವರು ಪ್ರಾಯಶ್ಚಿತ್ತ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿರೋ ನಟ ದರ್ಶನ್​ಗಾಗಿ ಅಭಿಮಾನಿಗಳ ಬಳಗ ಕಣ್ಣೀರಿಡುತ್ತಿದೆ. ಬೆನ್ನಿಗೆ ನಿಂತು ಜೈಕಾರ ಕೂಗುತ್ತಿದೆ. ಈ ಮಧ್ಯೆ ಜೈಲಿನಲ್ಲೂ ದರ್ಶನ್​ಗೆ ಅಭಿಮಾನಿಗಳ ಸಂಖ್ಯೆಯೇನೂ ಕಮ್ಮಿ ಇಲ್ಲ ಬಿಡಿ. ಜೈಲಿನಲ್ಲೂ ದರ್ಶನ್ ಅಭಿಮಾನಿಗಳ ಮನ ಮಿಡಿಯುತ್ತಿದೆ. ಅಭಿಮಾನಗಳಿಸಲು ಹಾತೊರೆಯುತ್ತಿದೆ ಅಂದ್ರೆ ನೀವು ನಂಬಲೇಬೇಕು.

ಹೌದು.. ದರ್ಶನ್​​​ಗೆ ರೌಡಿಗಳು ಸಹ ಅಪ್ಪಟ ಅಭಿಮಾನಿಗಳು. ಅದರಲ್ಲೂ ವಿಲ್ಸನ್ ಗಾರ್ಡನ್ ನಾಗ ಹಾಗೂ ರೌಡಿ ಸೌಕಲ್ ರವಿ ಜೈಲಿನಲ್ಲಿ ನಟ ದರ್ಶನ್​​​ಗೆ ಆತಿಥ್ಯ ನೀಡಲು ಪೈಪೋಟಿ ನಡೆಸುತ್ತಿದ್ದಾರೆ. ಈಗಾಗಲೇ ವಿಲ್ಸನ್ ಗಾರ್ಡನ್ ನಾಗ ಕೊಲೆ ಕೇಸ್​​ನಲ್ಲಿ ಜೈಲಲ್ಲಿದ್ದು ದರ್ಶನ್​​ಗೆ ಸೌಕರ್ಯ ನೀಡಲು ನಾ ಮುಂದು ತಾ ಮುಂದು ಅಂತ ಪೈಪೋಟಿಗೆ ಬಿದ್ದಿದ್ದಾರೆ. ಮತ್ತೊಂದೆಡೆ ಸೈಕಲ್ ರವಿ ಜೈಲಿನಲ್ಲಿ ಇಲ್ಲದಿದ್ರೂ ಅಲ್ಲಿರೋ ತನ್ನ ಹುಡುಗರ ಮೂಲಕ ದರ್ಶನ್​​​​​ ನೋಡಿಕೊಳ್ಳಲು ಪೈಪೋಟಿ ನೀಡುತ್ತಿದ್ದಾನೆ ಎನ್ನಲಾಗಿದೆ.

ದಾಸನಿಗಾಗಿ ರೌಡಿಗಳ ಪೈಪೋಟಿ

ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ ನಡುವೆ ದರ್ಶನ್​ಗಾಗಿ ಪೈಪೋಟಿ
ಇದಕ್ಕಾಗಿ ರವಿಯ ಬಂಟನೊಬ್ಬ ಹಳೆ ಕೇಸಲ್ಲಿ ಜೈಲು ಸೇರೋ ಸಾಧ್ಯತೆ
ಈ ಹಿಂದೆ 2011ರಲ್ಲಿ ದರ್ಶನ್​ಗೆ ಜೈಲಿನಲ್ಲಿ ಆತಿಥ್ಯ ನೀಡಿದ್ದ ಸೈಕಲ್ ರವಿ
ಈಗಲೂ ತಾನೇ ನೋಡಿಕೊಳ್ಳುತ್ತೇನೆ ಮುಂದಾಗಿರುವ ಸೈಕಲ್ ಗ್ಯಾಂಗ್
ಆದ್ರೆ ವಿಲ್ಸನ್ ಗಾರ್ಡನ್ ನಾಗ ಜೈಲಲ್ಲಿದ್ದು ನಾನಿದ್ದೀನಿ ಅಂತಾ ಮುಂದು
ದರ್ಶನ್​ಗೆ ಏನೆಲ್ಲಾ ಬೇಕು ಅದನ್ನು ನೀಡಲು ಸಿದ್ಧವಾಗಿರುವ ರೌಡಿ ನಾಗ

ಇದನ್ನೂ ಓದಿ: ಅಮ್ಮನನ್ನು ನೋಡಲು ಜೈಲಿಗೆ ಬಂದ ಪವಿತ್ರಾ ಗೌಡ ಪುತ್ರಿ; ಸಹೋದರ ತಂದ ದೊಡ್ಡ ಬ್ಯಾಗ್​​ನಲ್ಲಿ ಏನಿದೆ? 

ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್‌ಗೆ ಸೇವೆ ಮಾಡಲು ರೌಡಿಗಳು ಹಾತೊರೆಯುತ್ತಿದ್ದಾರೆ. ಆದರೆ ಜೈಲಿನ ಸಪರೇಟ್ ಬ್ಯಾರಕ್​​ನಲ್ಲಿರುವ ದರ್ಶನ್​ ನೋಡಿಕೊಳ್ಳಲು ಜೈಲಾಧಿಕಾರಿಗಳು ಅವಕಾಶ ಮಾಡಿಕೊಟ್ಟಿಲ್ಲ. ಹೊರಗಿರಲಿ, ಜೈಲಿನ ಒಳಗಿರಲಿ ನಟ ದರ್ಶನ್​ಗೆ ಅಪಾರ ಅಭಿಮಾನ ಬಳಗ ಇದೆ. ಇಷ್ಟೊಂದು ಅಭಿಮಾನಿಗಳನ್ನು ಗಳಿಸಿರುವ ನಟ ದರ್ಶನ್​ ಅವರು ಮುಂದೆ ಜೈಲಿನಲ್ಲಿ ಹೇಗೆ ಇರ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ; ದರ್ಶನ್​ಗೆ ಆತಿಥ್ಯ ನೀಡಲು ರೌಡಿಗಳ ಪೈಪೋಟಿ; ಇನ್‌ಸೈಡ್ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/06/darshan58.jpg

Load More