newsfirstkannada.com

ಹೆಂಡತಿ ನಂಬರ್ ಕೊಡು ಅಂದಿದ್ಕೆ ಸ್ನೇಹಿತರ ಮಧ್ಯೆ ಭಯಾನಕ ಮಾರಾಮಾರಿ.. ರೌಡಿಶೀಟರ್ ಅರೆಸ್ಟ್..!

Share :

14-09-2023

    ಚಂದ್ರಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಹೊಡೆದಾಟ..!

    ಕಂಠಪೂರ್ತಿ ಕುಡಿದು ಗಲಾಟೆ, ಆಮೇಲೆ ಆಗಿದ್ದೇನು..?

    ಚಾಕು ಇರಿದುಕೊಂಡ್ರು, ಮನೆಯನ್ನೂ ಧ್ವಂಸ ಮಾಡಿಬಿಟ್ರು..!

ಬೆಂಗಳೂರು: ಹೆಂಡತಿಯ ನಂಬರ್ ಕೊಡು ಎಂದಿದ್ದಕ್ಕೆ ಕೋಪಿಸಿಕೊಂಡ ರೌಡಿಶೀಟರ್ ತನ್ನ ಸ್ನೇಹಿತ ಹಾಗೂ ಆತನ ಸಂಬಂಧಿಗಳ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಚಂದ್ರಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಕೆಂಪೇಗೌಡ ಅಲಿಯಾಸ್ ಕೆಂಪ ಎಂಬ ರೌಡಿಶೀಟರ್​​ನನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ..?

ರೌಡಿಶೀಟರ್ ಕೆಂಪೇಗೌಡ ಹಾಗೂ ಆತನ ಸ್ನೇಹಿತ ರಮೇಶ್ ಬಾರ್ ಒಂದರಲ್ಲಿ ಕಂಠಪೂರ್ತಿ ಕುಡಿದು ಅಂಗಡಿ ಮುಂದೆ ನಿಂತಿದ್ದರು. ಈ ವೇಳೆ ಇಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಆಗಿದೆ. ಆಗ ಸ್ನೇಹಿತ ರಮೇಶ್, ನಿನ್ನ ಹೆಂಡತಿಯ ಫೋನ್ ನಂಬರ್ ಕೊಡು ಎಂದು ಕೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕೆಂಪ, ರಮೇಶ್ ಕಪಾಳಕ್ಕೆ ಬಾರಿಸಿ ಮನೆಗೆ ಹೋಗುತ್ತಾನೆ.

ಸ್ನೇಹಿತ ರಮೇಶ್, ರೌಡಿಶೀಟರ್ ಕೆಂಪೇಗೌಡ ಅಲಿಯಾಸ್ ಕೆಂಪ

ಇದೇ ವಿಚಾರವನ್ನು ಇಟ್ಟುಕೊಂಡು ರಮೇಶ್ ತನ್ನ ಗ್ಯಾಂಗ್ ಕರ್ಕೊಂಡು ರಾತ್ರಿ 11 ಗಂಟೆ ಸುಮಾರಿಗೆ ಕೆಂಪನ ಮನೆಗೆ ಹೋಗಿದ್ದಾನೆ. ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಸೇರಿ 10ಕ್ಕೂ ಹೆಚ್ಚು ಜನರ ತಂಡವನ್ನು ಕಟ್ಟಿಕೊಂಡು ಹೋಗಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಕೊನೆಗೆ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿಗೆ ಕೆಂಪೇಗೌಡ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.

ಮನೆ ಧ್ವಂಸ ಮಾಡಿದ್ರಾ..?
ಇದರಿಂದ ಕೆರಳಿದ ರಮೇಶ್ ಅಂಡ್ ಗ್ಯಾಂಗ್, ಕೆಂಪೇಗೌಡ ಮನೆ ಮೇಲೆ ಕಲ್ಲು ಎಸೆದಿದ್ದಾರೆ. ಅಷ್ಟಕ್ಕೂ ಸುಮ್ಮನಾಗದೇ ಮನೆಯ ಕಿಟಕಿ, ಗಾಜುಗಳು ಪುಡಿ ಪುಡಿ ಮಾಡಿದ್ದಾರೆ. ಬಾಗಿಲು ಮುರಿದು ಹಾಕಿ ಹೋಗಿದ್ದಾರೆ ಎನ್ನಲಾಗಿದೆ. ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಲೇಔಟ್ ಠಾಣೆ ಪೊಲೀಸರು ರೌಡಿ ಕೆಂಪೇಗೌಡನನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ ನಂಬರ್ ಕೊಡು ಅಂದಿದ್ಕೆ ಸ್ನೇಹಿತರ ಮಧ್ಯೆ ಭಯಾನಕ ಮಾರಾಮಾರಿ.. ರೌಡಿಶೀಟರ್ ಅರೆಸ್ಟ್..!

https://newsfirstlive.com/wp-content/uploads/2023/09/BNG_KIRIK-1.jpg

Load More