ಪ್ರೀತಿಸಿ ಮದುವೆಯಾಗಿದ್ದ ರೌಡಿ ಶೀಟರ್
ಹೊಸ ಜೀವನ ಕಟ್ಟಿಕೊಳ್ಳಬೇಕು ಎಂದಿದ್ದ
ಕೊನೆಗೂ ಹಾಡಹಗಲೇ ಬೀದಿ ಹೆಣವಾದ
ಬೆಂಗಳೂರು: ಅಂಡರ್ ವರ್ಲ್ಡ್ ಪಟ್ಟಕ್ಕೆ ಬೆಂಗಳೂರಿನಲ್ಲಿ ಈಗಿನಿಂದಲೇ ಜಿದ್ದಾ ಜಿದ್ದಿ. ಜಯರಾಜ್ ಕಾಲದಿಂದಲೂ ರೌಡಿಸಂನಲ್ಲಿ ಹವಾ ಮಾಡಬೇಕು, ಹೆಸರು ಮಾಡಬೇಕು ಎಂದು ರೌಡಿಗಳು ಹುಟ್ಟಿಕೊಳ್ಳುತ್ತಲೇ ಇದ್ದಾರೆ. ಒಬ್ಬ ಬೆಳೆದರೆ, ಮತ್ತೊಬ್ಬ ತುಳಿಯುತ್ತಾನೆ. ಹಾಗೆಯೇ ಅಂಡರ್ ವರ್ಲ್ಡ್ ಕೂಡ. ಹೀಗೆ ಮೆರೆಯುತ್ತಿದ್ದ ರೌಡಿ ಶೀಟರ್ ರಾತ್ರೋ ರಾತ್ರಿ ಕೊಲೆಯಾಗಿದ್ದಾನೆ.
ಕೋರ್ಟ್ನಲ್ಲಿ ಲಾಯರ್ ವೇಷ ಹಾಕಿಕೊಂಡು ಬಂದು ಅರೆಸ್ಟ್ ಆದ ರೌಡಿ ಶೀಟರ್ ಕಥೆ ನಿಮಗೆ ಗೊತ್ತೇ ಇದೆ. ಬನಶಂಕರಿ ಬಳಿ ಹಾಡಹಗಲೇ ಮಚ್ಚುಲಾಂಗು ಝಳಪಿಸಿ ಫೈನಾನ್ಶಿಯರ್ ಮದನ್ ಕೊಲೆ ಮಾಡಿದ್ದ ಸಿದ್ದಾಪುರ ಮಹೇಶ್ ಅಂಡ್ ಗ್ಯಾಂಗ್ ಇದು. ಈ ಗ್ಯಾಂಗ್ ಲೀಡರ್ ಮಹೇಶ್ ಶುಕ್ರವಾರ ರಾತ್ರಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬರುವಾಗ ನಡು ರಸ್ತೆಯಲ್ಲಿ ಕಗ್ಗೊಲೆಯಾಗಿ ಹೋಗಿದ್ದಾನೆ.
ಮುಖದ ಗುರುತೇ ಸಿಗದಂತೆ ಕೊಲೆ ಮಾಡಿರೋ ಆರೋಪಿಗಳಿಗೆ ಪೊಲೀಸರು 4 ತಂಡಗಳನ್ನ ರಚಿಸಿ ಹುಡುಕಾಟ ಶುರು ಮಾಡಿದ್ದಾರೆ. ಇನ್ನು ಕೊಲೆ ನಡೆದ ಸ್ಥಳಕ್ಕೆ ಕಮಿಷನರ್ ದಯಾನಂದ್ ಮತ್ತು ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪ್ರಕರಣದ ತನಿಖೆ ನಡೆಸ್ತಿರೋ ಪೊಲೀಸರು ಸದ್ಯ ರಾತ್ರಿ ಮಹೇಶ್ನ ಕಾರಿನಲ್ಲಿದ್ದ ಚಾಲಕ ಮತ್ತು ಕಿರಣ್ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್ ವಿರುದ್ಧ ದೂರು
ತನ್ನ ಗಂಡನ ಕೊಲೆಗೆ ವಿಲ್ಸನ್ ಗಾರ್ಡನ್ ನಾಗ ಮತ್ತವನ ಶಿಷ್ಯಂದಿರೇ ಕಾರಣ ಎಂದು ಆರೋಪಿಸಿ ಸಿದ್ದಾಪುರ ಮಹೇಶ್ನ ಪತ್ನಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಪೊಲೀಸರು ಕೂಡಾ ಸಿಸಿಟಿವಿ ಮತ್ತು ಪ್ರತ್ಯಕ್ಷವಾಗಿ ಕಂಡವರ ವಿಚಾರಣೆ ಶುರು ಮಾಡಿದ್ದು ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸುವುದಾಗಿ ತಿಳಿಸಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಪ್ರೇಮ ಪಾಶಕ್ಕೆ ಸಿಲುಕಿ ಈ ಪಾತಕ ಲೋಕವನ್ನ ಬಿಟ್ಟು ದೂರ ಹೋಗಿ ಜೀವನ ಕಟ್ಟಿಕೊಳ್ಳೋ ಪ್ರಯತ್ನದಲ್ಲಿ ಇದ್ದವನು ಹೀಗೆ ಬೀದಿ ಹೆಣವಾಗಿದ್ದು ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ