newsfirstkannada.com

ಲಾಂಗ್​​ನಿಂದ ಕೊಚ್ಚಿ ಡೆಡ್ಲಿ ಅಟ್ಯಾಕ್​​.. ಹಲ್ಲೆಗೊಳಗಾದ ರೌಡಿಶೀಟರ್​​ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಾ!

Share :

06-09-2023

    ಬೆಂಗಳೂರಿನಲ್ಲಿ ರೌಡಿಶೀಟರ್​​​ ಗುರುಸ್ವಾಮಿ ಮೇಲೆ ಅಟ್ಯಾಕ್​ ಕೇಸ್​

    3 ವಿಶೇಷ ತಂಡಗಳ ರಚನೆ, ಪೊಲೀಸರಿಂದ ತೀವ್ರಗೊಂಡ ತನಿಖೆ!

    ಹಲ್ಲೆಗೊಳಗಾದ ಗ್ಯಾಂಗ್​ಸ್ಟರ್​ ಕಥೆ ಕೇಳಿದ್ರೆ ಪಕ್ಕಾ ಬೆಚ್ಚಿಬೀಳ್ತೀರಾ

ಬೆಂಗಳೂರು: ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವ ದೃಶ್ಯ ನೋಡಿದ್ರೆ ಎದೆ ಜಲ್​ ಅನ್ನತ್ತೆ. ಸಾರ್ವಜನಿಕ ಸ್ಥಳಗಳಲ್ಲಿ ಪದೇ ಪದೇ ಈ ರೀತಿಯ ಅವಾಂತರ ನಡೆಯೋದು ಭಯ ಹುಟ್ಟಿಸೋದಷ್ಟೇ ಅಲ್ಲ, ರೌಡಿಗಳ ಅಟ್ಟಹಾಸದ ಬಗ್ಗೆಯೂ ನಡುಕ ಹುಟ್ಟಿಸತ್ತೆ. ಮೊನ್ನೆ ರಾತ್ರಿ ಬೆಂಗಳೂರಿನ ಬಾಣಸವಾಡಿಯ ಕಮ್ಮನಹಳ್ಳಿ ಸುಖಸಾಗರ್ ಹೊಟೇಲ್ ಒಳಗೆ ನಡೆದ ಕೃತ್ಯ ಇದಕ್ಕೆ…ಮತ್ತೊಂದು ಸಾಕ್ಷಿ.

ಈತ ಹಲ್ಲೆಗೊಳಗಾದ ವಿ.ಕೆ.ಗುರುಸ್ವಾಮಿ. ತಮಿಳುನಾಡಿನ ನಟೋರಿಯಸ್ ರೌಡಿಶೀಟರ್​. ಮೊನ್ನೆ ಹೋಟೆಲ್​ನಲ್ಲಿ ಟೀ ಕುಡಿಯುವಾಗ ಜವರಾಯನಂತೆ ಬಂದ ಐದು ಜನರ ಗುಂಪು ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿ. ಪುನಃ ತಮಿಳುನಾಡಿಗೆ ಎಸ್ಕೇಪ್​ ಆಗಿದ್ದಾರೆ.

ಪೊಲೀಸರ ಮೇಲೆಯೇ ಹಲ್ಲೆ

ರೌಡಿಶೀಟರ್​​​ ಗುರುಸ್ವಾಮಿ ಮೇಲೆ ಅಟ್ಯಾಕ್ ಮಾಡಿದ ಆರೋಪಿಗಳು, ಹಲ್ಲೆ ಮಾಡಿ ರಾತ್ರೋ ರಾತ್ರಿ ಕಾರಿನಲ್ಲಿ ತಮಿಳುನಾಡಿಗೆ ಎಸ್ಕೇಪ್ ಆಗಿದ್ದಾರೆ. ಹೀಗಾಗಿ, ತಮಿಳುನಾಡು ಪೊಲೀಸರಿಗೆ ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ರು. ಆದ್ರೆ, ತಮಿಳುನಾಡು ಟೋಲ್ ನಲ್ಲಿ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ನಡೆಸಿ, ಎಸ್ಕೇಪ್​ ಆಗಿದ್ದಾರಂತೆ.

ಸದ್ಯ ಈ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು, ಮೂರು ವಿಶೇಷ ತಂಡ ರಚಿಸಿ ಆರೋಪಿಗಳಿಗಾಗಿ ಬಾಣಸವಾಡಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್​ಗಳ ಮೂಲಕ ಆರೋಪಿಗಳ ಪತ್ತೆಗೆ ಸಿದ್ಧತೆ ನಡೆಸಿದ್ದು, ಸಿಸಿಟಿವಿ, ಟವರ್ ಡಂಪ್ ಲಿಸ್ಟ್​​ ತೆಗೆದು ಆರೋಪಿಗಳಿಗೆ ಶೋಧ ನಡೆಸಲಾಗ್ತಾಯಿದೆ.

ಇನ್ನು ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್​ಗೆ ಒಳಗಾದ ಗುರುಸ್ವಾಮಿ ಹಿಸ್ಟರಿ ಎಂತದ್ದು ಗೊತ್ತಾ?

20ನೇ ವಯಸ್ಸಿನಲ್ಲಿಯೇ ಕ್ರಿಮಿನಲ್ ಕೇಸ್​ಗಳಲ್ಲಿ ಭಾಗಿಯಾಗಿದ್ದ ಗುರುಸ್ವಾಮಿ, ಉದ್ಯೋಗ ಅರಸಿ ಕಮುತಿಯಿಂದ ವಲಸೆ ಬಂದಿದ್ದ. ಮಧುರೈನ ಕೀರತುರೈನಲ್ಲಿ ಗುರುಸ್ವಾಮಿ ಜೀವನ ದಿಕ್ಕು ಬದಲಿಸಿತ್ತು. ಕರುಣಾನಿಧಿ ಪುತ್ರ ಅಳಗಿರಿ ಆಪ್ತನಾಗಿ ಗುರುತಿಸಿಕೊಂಡಿದ್ದ ಗುರು, ಎಐಎಡಿಎಂಕೆ ರಾಜಪಾಂಡಿಯನ್‌ ಜೊತೆಗೆ ರಾಜಕೀಯ ಜಿದ್ದು ಹೊಂದಿದ್ದ. 2001ರಲ್ಲಿ ವೈಯಕ್ತಿಕ ಮಟ್ಟಕ್ಕೂ ರಾಜಕೀಯ ದ್ವೇಷ ತಿರುಗಿತ್ತು. ಕೀರತುರೈ ಠಾಣೆಯಲ್ಲಿ ರೌಡಿಶೀಟರ್ ಆಗಿರೋ ಗುರುಸ್ವಾಮಿ ಮೇಲೆ, 8 ಕೊಲೆ ಹಾಗೂ 7 ಕೊಲೆ ಯತ್ನ ಕೇಸ್ ಇದೆ. ಪ್ರಸ್ತುತ ಜಾಮೀನಿನ ಮೇಲೆ ವಿ.ಕೆ ಗುರುಸ್ವಾಮಿ ಹೊರಗಿದ್ದ.

ಜೊತೆಯಲ್ಲಿದ್ದವರಿಂದಲೇ ಮಾಹಿತಿ ಲೀಕ್ ಆಗಿ ಗುರುಸ್ವಾಮಿ ಮೇಲೆ ದಾಳಿ ನಡೆದಿದೆ ಎಂಬ ಶಂಕೆ ವ್ಯಕ್ತವಾಗ್ತಾಯಿದೆ. ಸದ್ಯ ಹಲ್ಲೆಗೊಳಗಾದ ಗುರುಸ್ವಾಮಿ ಸ್ಥಿತಿ ಗಂಭೀರವಾಗಿದ್ದು, ತನಿಖೆ ನಂತರ ಅಟ್ಯಾಕ್​ ಹಿಂದಿನ ಸತ್ಯಾಂಶ ಬಯಲಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾಂಗ್​​ನಿಂದ ಕೊಚ್ಚಿ ಡೆಡ್ಲಿ ಅಟ್ಯಾಕ್​​.. ಹಲ್ಲೆಗೊಳಗಾದ ರೌಡಿಶೀಟರ್​​ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಾ!

https://newsfirstlive.com/wp-content/uploads/2023/09/death-44.jpg

Load More