newsfirstkannada.com

Breaking News: ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಕೊಚ್ಚಿ ಕೊಲೆ; ಬೆಚ್ಚಿಬಿದ್ದ ತುಮಕೂರು

Share :

22-10-2023

    ರೌಡಿಶೀಟರ್ ಮಾರುತಿ ಅಲಿಯಾಸ್ ಪೋಲಾರ್ಡ್​ನ ಕೊಲೆ

    ತಿಲಕಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

    ಪರಾರಿ ಆಗಿರುವ ದುಷ್ಕರ್ಮಿಗಳು, ಪೊಲೀಸರಿಂದ ಶೋಧ

ತುಮಕೂರು: ತಡರಾತ್ರಿ ಬಂಡೆಮನೆ ಕಲ್ಯಾಣ ಮಂಟಪದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ನ ಕೊಲೆ ಮಾಡಲಾಗಿದೆ. ನಾಲ್ಕೈದು ದುಷ್ಕರ್ಮಿಗಳಿಂದ ಏಕಾಏಕಿಯಾಗಿ ಎಂಟ್ರಿಯಾಗಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.

ಮಾರುತಿ ಅಲಿಯಾಸ್ ಪೋಲಾರ್ಡ್ (34) ಕೊಲೆಯಾದ ರೌಡಿಶೀಟರ್. ಮಧುಗಿರಿ ಮೂಲದ ಮಾರುತಿ, ತುಮಕೂರಿನ ಮಂಚಲಕುಪ್ಪೆ ಬಳಿ ಪತ್ನಿ ಜೊತೆ ವಾಸವಾಗಿದ್ದ. ನಿನ್ನೆ ರಾತ್ರಿ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡುತ್ತಿದ್ದಾಗ ರೌಡಿಶೀಟರ್ ಮಾರುತಿ ಮೇಲೆ ದಾಳಿಯಾಗಿದೆ. ಕಳೆದ ಏಳೇಂಟು ವರ್ಷಗಳ ಹಿಂದೆ ನಡೆದಿದ್ದ ಹಟ್ಟಿ ಮಂಜ ಕೊಲೆ ಕೇಸ್ ಸೇರಿದಂತೆ ಹಲವು ಕೇಸ್​ಗಳಲ್ಲಿ ಮಾರುತಿ ಆರೋಪಿಯಾಗಿದ್ದ ಎನ್ನಲಾಗಿದೆ.

ಅದೇ ದ್ವೇಷಕ್ಕೆ ಕೊಲೆಯಾಗಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಕೃತ್ಯ ನಡೆದ ಸ್ಥಳಕ್ಕೆ ತುಮಕೂರಿನ ತಿಲಕಪಾರ್ಕ್ ಪೊಲೀಸರು, ಎಸ್ಪಿ ಅಶೋಕ್, ಎಎಸ್​​ಪಿ ಮರಿಯಪ್ಪ, ಡಿವೈಎಸ್​ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ತಿಲಕಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೈದ ಆರೋಪಿಗಳಿಗಾಗಿ ಪೊಲೀಸರು ಹುಟುಕಾಟ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಕೊಚ್ಚಿ ಕೊಲೆ; ಬೆಚ್ಚಿಬಿದ್ದ ತುಮಕೂರು

https://newsfirstlive.com/wp-content/uploads/2023/10/TMK_ROWDY.jpg

Load More