newsfirstkannada.com

ಸ್ಕೆಚ್​​ ಹಾಕಿದ್ದು ಶಿಷ್ಯನಿಗೆ.. ಕೊಚ್ಚಿ ಕೊಂದಿದ್ದು ಗುರುವನ್ನ.. ಕೊಲೆಯಾದ ಈತ ಸಾಚ ಏನಲ್ಲ..!

Share :

Published November 11, 2023 at 9:07pm

    ಟಾರ್ಗೆಟ್ ಮಾಡಿದವನನ್ನು ಬಿಟ್ಟು ಬೇರೆಯವನಿಗೆ ಇರಿದ ಗ್ಯಾಂಗ್

    ಕೊಲೆಯಾದ ವ್ಯಕ್ತಿ ಸಾಮಾನ್ಯನೇನು ಅಲ್ಲ, ಅವನಿಗೂ ಇದೆ ಲಿಂಕ್

    ಸಹದೇವ ಅಂದಕೂಡಲೇ ಪಾಂಡವರ ಸಹೋದರರಲ್ಲಿ ಒಬ್ಬನಲ್ಲ!

ರೌಡಿಶೀಟರ್‌ ವಿಚಾರಗಳಲ್ಲಿ ಹೀಗಾಗೋದು ಅಪರೂಪವೇ. ಯಾರು ಟಾರ್ಗೆಟ್ ಆಗಿರುತ್ತಾರೋ ಅವರನ್ನೇ ಟಾರ್ಗೆಟ್ ಮಾಡ್ಕೊಂಡು ಕೇಸ್‌ ಖಲ್ಲಾಸ್ ಮಾಡಿಬಿಡ್ತಾರೆ. ಆದ್ರೆ, ಈ ಕೇಸ್‌ನಲ್ಲಿ ಗುರಿ ಇಟ್ಟವರು ಎಡವಿದ್ದಾರೆ. ಆದ್ರೆ, ಒಬ್ಬನ ಕಥೆ ಅಂತೂ ಫಿನಿಶ್ ಆಗ್ಬಿಟ್ಟಿದೆ. ಇದು ಹೇಗಾಯ್ತು? ಏಕಾಯ್ತು?.

ನವೆಂಬರ್‌ 8ರಂದು ಪುಟ್ಟೇನಹಳ್ಳಿಯಲ್ಲಿ ಒಂದ್ ಮರ್ಡರ್ ಆಗಿತ್ತು. ಮರ್ಡರ್ ಆದವನು ಅಮಾಯಕನೂ ಅಲ್ಲ, ಸಚ್ಚಾರಿತ್ರ್ಯವಂತನೂ ಅಲ್ಲ. ಅವನೊಬ್ಬ ರೌಡಿಶೀಟರೇ ಆಗಿದ್ದವನೇ ಸಹದೇವ ಎನ್ನುವನು.

ಸಹದೇವ ಪಾಂಡವರ ಸಹೋದರನಲ್ಲ!

ಸಹದೇವ ಅಂದಕೂಡಲೇ ಪಾಂಡವರ ಸದಸ್ಯ ಅಂತಾ ದಯವಿಟ್ಟು ಅಂದ್ಕೋಬೇಡಿ. ನಮ್ಮ ದೇಶದಲ್ಲಿ ನಾಮಕರಣ ಮಾಡಿರೋ ಹೆಸರಿಗೂ, ವ್ಯಕ್ತಿಗೂ ಸಂಬಂಧವೇ ಇರಲ್ಲ. ಆ ಸಹದೇವ ಜ್ಯೋತಿಷ್ಯದಲ್ಲಿ ತುಂಬಾ ಜ್ಞಾನಿಯಾಗಿದ್ದನು. ಆದ್ರೆ, ಇವನಿಗೆ ಜ್ಯೋತಿಷ್ಯ ಎಂದರೇನು ಅಂತಾನು ಗೊತ್ತಿಲ್ಲ.

ಕೊಲೆ ಮಾಡಿದ ಆರೋಪಿಗಳು

ಇವನ ಹೆಸರು ಸಹದೇವ ಅಂತ.. ರೌಡಿಶೀಟರ್​ ಲಿಸ್ಟ್​ನಲ್ಲಿ ಸಹದೇವ ಹೆಸರು ಇದೆ. ನ.8ರಂದು ರಾತ್ರಿ ಸರಿ ಸುಮಾರು 9.30 ಗಂಟೆಗೆ ಸಹದೇವ್ ಟೀ ಕುಡಿಬೇಕು ಅಂತ ಬೇಕರಿ ಬಳಿ ಬಂದಿದ್ದ. ಈ ವೇಳೆ ಬೈಕ್​ನಲ್ಲಿ ಬಂದಿದ್ದ 6 ಜನ ಸಹದೇವನನ್ನ ಕೊಚ್ಚಿ ಹತ್ಯೆ ಮಾಡಿದ್ದರು. ಬಳಿಕ ಕ್ಷಣಾರ್ಧದಲ್ಲೇ ಬೈಕ್​​ನಲ್ಲಿ ಎಸ್ಕೇಪ್ ಆಗಿದ್ದಾರೆ.

ವಾರ್ನಿಂಗ್ ಕೊಟ್ಟಿದ್ದ ಬೆನ್ನಲ್ಲೇ ಕೊಲೆ

ಇಲ್ಲಿ ಒಂದು ವಿಚಾರವನ್ನು ಹೇಳಲೇಬೇಕು. ಅದೇನಂದ್ರೆ ಅಂದು ಬೆಳಗ್ಗೆ ಪೊಲೀಸರು ರೌಡಿಗಳ ಪರೇಡ್ ನಡೆಸಿದ್ರು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ವಾರ್ನಿಂಗ್ ಕೂಡ ಕೊಟ್ಟಿದ್ರು. ಆದ್ರೆ ಸಂಜೆಯಾಗುವಷ್ಟರಲ್ಲಿ ಹಳೆ ದ್ವೇಷಕ್ಕೆ ರೌಡಿಶೀಟರ್​ ಸಹದೇವನ ಹತ್ಯೆಯಾಗಿದೆ. ಬೆಳಗ್ಗೆ ವಾರ್ನಿಂಗ್​ ಕೊಟ್ರೂ ಯಾವುದೇ ಭಯವಿಲ್ಲದೇ ನಡು ರಸ್ತೆಯಲ್ಲೆ ಹತ್ಯೆ ಮಾಡಿದ್ದಾರೆ.

ಇದಿಷ್ಟು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾದ ವಿಚಾರ. ಆದ್ರೆ, ಕೋಣನಗುಂಟೆ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ ನಂತರ, ಈ ಮರ್ಡರ್ ಹಿಂದಿನ ಸತ್ಯ ಗೊತ್ತಾಗಿದೆ. ವಿನಯ್ ಮತ್ತು ಧರ್ಮ ಸೇರಿದಂತೆ 8 ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿಬಿಟ್ಟಿದ್ದಾರೆ. ಇವರು ವಿಚಾರಣೆ ವೇಳೆ ಹೇಳಿದ ಸತ್ಯ ಕೇಳಿದಾಗ, ಪೊಲೀಸರೇ ದಂಗಾಗಿ ಹೋದರು.

ಅಂದು ಮುಗಿಸದಿದ್ದಿದ್ರೆ ಅವರೇ ‘ಮಿಸ್‌ ಯೂ’ ಲಿಸ್ಟ್ ಸೇರ್ತಿದ್ರು!

ಪುಟ್ಟೇನಹಳ್ಳಿಯ ರೌಡಿಶೀಟರ್‌ ಸಹದೇವ ಏರಿಯಾದಲ್ಲಿ ಒಂದ್ ರೇಂಜ್‌ಗೆ ಹವಾ ಇಟ್ಟಿದ್ದ. ಒನ್ ಟು ಒನ್ ನಿಂತ್ಕೊಂಡು ಫೈಟ್ ಮಾಡೋ ತಾಕತ್ತು ಕೂಡ ಇವ್ನಿಗೆ ಇತ್ತು. ಹಾಗಂತಾ ದೊಡ್ಡ ಹೆಸರು ಮಾಡಿದ್ನಾ ಅಂದ್ರೆ ಆ ಥರಾ ಇಲ್ಲ.

ನ.8ರಂದು ಸಹದೇವ ಏರಿಯಾದ ಟೀ ಅಂಗಡಿಯೊಂದರಲ್ಲಿ ಟೀ ಕುಡ್ಕೊಂಡು ನಿಂತಿದ್ದ. ಆಗ ವಿನಯ್‌ ಮತ್ತು ಧರ್ಮನ ಗ್ಯಾಂಗ್ ಅಲ್ಲಿಗೆ ಬಂದಿದೆ. ಯಾವಾಗ ಇವ್ರು ಬಂದ್ರೋ ಸಹದೇವ ಸ್ವಲ್ಪ ಅಲರ್ಟ್ ಆಗ್ತಾನೆ. ಯಾಕಂದ್ರೆ, ಇವರಿಬ್ಬರ ನಡುವೆ ರೈವಲರಿ ಅಂತೂ ಇದ್ದೇ ಇತ್ತು. ಅಲ್ದೇ, ವಿನಯ್ ಗ್ಯಾಂಗ್‌ ಸಹದೇವನ ಶಿಷ್ಯ ರಾಬರಿ ನವೀನ್‌ನ ಹುಡಿಕಿಕೊಂಡು ಬಂದಿರೋದು ಅವ್ನಿಗೆ ಗೊತ್ತಾಗುತ್ತೆ. ಜೊತೆಗೆ ಸಹದೇವನನ್ನ ಅಡ್ಡಗಟ್ಟಿ ಎಲ್ಲೋ ರಾಬರಿ ನವೀನ ಅಂತಾ ಫುಲ್ ಅವಾಜ್ ಕೂಡ ಹಾಕಿಬಿಡ್ತಾರೆ. ಇದನ್ನೆಲ್ಲ ಕೇಳಿಸಿಕೊಂಡು ಸುಮ್ನೆ ಇರೋನಂತೂ ಅಲ್ಲ ಸಹದೇವ. ಯಾಕ್ರಪ್ಪಾ ನಮ್ಮ ಹುಡ್ಗನನ್ನ ಹುಡುಕುತ್ತಿದ್ದೀರಾ. ಏನ್ ಸಮಾಚಾರ ಅಂತಾ ಅವಾಜ್ ಹಾಕ್ತಾನೆ. ಮೊದ್ಲೇ ಮರ್ಡರ್‌ ಮಾಡೋ ಮೂಡ್‌ನಲ್ಲಿದ್ದ ವಿನಯ್ ಮತ್ತು ಧರ್ಮನ ಗ್ಯಾಂಗ್‌, ಅಲ್ಲಿಯೇ ಇದ್ದ ಅಡುಗೆ ಮಾಡೋ ಸೌಟಿನಿಂದ ತಲೆಗೆ ಬಲವಾಗಿ ಹೊಡೆದು ಬಿಟ್ಟಿದ್ದಾರೆ.

ಅಡುಗೆ ಸೌಟಿನಿಂದ ಹೊಡೆದಾಗ ಮೂಗಿನಿಂದ ಬಂತು ರಕ್ತ

ತೀವ್ರವಾಗಿ ಪೆಟ್ಟು ಬಿದ್ದಿದ್ದರಿಂದ ಸಹದೇಹ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಸಹದೇವ ಬದುಕಿದ್ರೆ ನಮ್ಮನ್ನ ಬಿಡೋಲ್ಲ ಅಂತಾ ಯೋಚಿಸೋ ಆರೋಪಿಗಳು, ಮುಗಿಸಿಬಿಡೋಣ ಅಂತಾ ಸ್ಪಾಟ್‌ನಲ್ಲೇ ಡಿಸೈಡ್ ಮಾಡ್ತಾರೆ. ಹೀಗಾಗಿ, ಪಕ್ಕದಲ್ಲಿ ಇದ್ದ ಇನ್ನೊಬ್ಬ ಆರೋಪಿ ಡ್ರಾಗರ್ ತೆಗೆದು ಇರಿದು ಬಿಡ್ತಾನೆ. ಅಡುಗೆ ಸೌಟಿನಿಂದ ಹೊಡೆದಾಗ ಮೂಗಿನಿಂದ ರಕ್ತಸ್ರಾವವಾಗಿರುತ್ತದೆ. ಡ್ರ್ಯಾಗರ್‌ನಿಂದ ಚುಚ್ಚಿದಾಗ, ಮತ್ತಷ್ಟು ರಕ್ತಸ್ರಾವವಾಗುತ್ತದೆ. ಬಳಿಕ ಆತ ಸ್ಥಳದಲ್ಲಿ ಅಸುನೀಗುತ್ತಾನೆ.

ಕೊಲೆ ಮಾಡಿದ ಆರೋಪಿಗಳು

ಅಂದ್ಹಾಗೇ, ಸಹದೇವ ಆಗ್ಲಿ, ರಾಬರಿ ನವೀನ್‌ ಮೇಲಾಗಲಿ ಹಲ್ಲೆ ಮಾಡ್ಬೇಕು ಅಂತಾ ವಿನಯ್‌ ಟೀಮ್‌ ಡಿಸೈಡ್ ಮಾಡಿರೋದರ ಹಿಂದೆ ಒಂದು ಬಲವಾದ ಕಾರಣವಿದೆ. ಅದಕ್ಕೆ ಕಾರಣ ಏನಂದ್ರೆ, ಗಣೇಶ ಹಬ್ಬ ಸಮಯದಲ್ಲಿ ನಡೆದ ಒಂದು ಕಿರಿಕ್‌.

ಗಣೇಶ ಹಬ್ಬದ ಸಮಯದಲ್ಲಿ ಸಹದೇವ್‌ ಟೀಮ್‌ನ ರಾಬರಿ ನವೀನ್‌ ವಿನಯ್‌ ಗ್ಯಾಂಗ್‌ನವರ ಮೇಲೆ ಹಲ್ಲೆ ಮಾಡಿರ್ತಾನೆ. ಈ ಕಿರಿಕ್‌ನಲ್ಲಿ ಸಹದೇವ್‌ ಕೂಡ ಹಲ್ಲೆ ಮಾಡಿದ್ದ ಅಂತಾ ಹೇಳಲಾಗ್ತಿದೆ. ಈ ಕಿರಿಕ್‌ನಿಂದ ಇರುಸು ಮುರಿಸುಗೊಂಡಿದ್ದ. ಹೀಗಾಗಿ ರಾಬರಿ ನವೀನ್‌ನ ಮುಗಿಸಲು ವಿನಯ್ ಟೀಮ್ ಸ್ಕೆಚ್ ಹಾಕಿತ್ತು. ಆದ್ರೆ, ದಾರಿ ಮಧ್ಯೆ ಸಹದೇವ ಸಿಕ್ಕಿದ ನಂತರ ಈ ಸೀನೇ ಬದಲಾಗಿಬಿಟ್ಟಿದೆ.

ಸಹದೇವ್ ಕೂಡ ಜೆಪಿನಗರದ ಕೊಲೆ ಕೇಸ್‌ವೊಂದರಲ್ಲಿ ಎ2 ಆರೋಪಿಯಾಗಿದ್ದ. ಜೈಲು ಶಿಕ್ಷೆ ಅನುಭವಿಸಿ ಬಂದ ನಂತರ, ಆತ ಏರಿಯಾದಲ್ಲಿ ಮೆರೆದಾಡುತ್ತಿದ್ದ. ಈಗ ಆಪೋಸಿಟ್‌ ಟೀಮ್‌ ಕಡೆಯವರಿಂದಲೇ ಫಿನಿಶ್ ಆಗಿದ್ದಾನೆ. ಮರ್ಡರ್ ಮಾಡಿದವರು ಅರೆಸ್ಟ್ ಆಗಿದ್ದು, ಜೈಲಿಗೆ ಶಿಫ್ಟ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಕೆಚ್​​ ಹಾಕಿದ್ದು ಶಿಷ್ಯನಿಗೆ.. ಕೊಚ್ಚಿ ಕೊಂದಿದ್ದು ಗುರುವನ್ನ.. ಕೊಲೆಯಾದ ಈತ ಸಾಚ ಏನಲ್ಲ..!

https://newsfirstlive.com/wp-content/uploads/2023/11/ROWDY_SAHAEVA_1.jpg

Load More