ಯುವಕನ ಮೇಲೆ ಹಲ್ಲೆ ಮಾಡಿದ ರೌಡಿಗಳ ಗ್ಯಾಂಗ್
ಯುವಕನ ಬಟ್ಟೆ ಬಿಚ್ಚಿಸಿ ಸರಿಯಾಗಿ ಹೊಡೆದ ಪುಂಡರು
ಹುಬ್ಬಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದ ಘಟನೆ
ಹುಬ್ಬಳ್ಳಿ: ಯುವಕನೊಬ್ಬನನ್ನ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಇನ್ಸ್ಟಾಗ್ರಾಮ್ನಲ್ಲಿ ಬೈದು, ಮೆಸೇಜ್ ಹಾಕಿದ್ದ ಎಂಬ ಕಾರಣಕ್ಕೆ ರೌಡಿಗಳು ಯುವಕನ ಬಟ್ಟೆ ತೆಗೆಸಿದ್ದಾರೆ ಬಳಿಕ ಸರಿಯಾಗಿ ಹೊಡೆದಿದ್ದಾರೆ. ಸದ್ಯ ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಸೆಟ್ಲಮೆಂಟ್ ಏರಿಯಾದ ರೌಡಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಸೆಟ್ಲಮೆಂಟ್ ಏರಿಯಾದ ಗಂಗಾಧರ ನಗರದ ಪ್ರಜ್ವಲ್ ಗಾಯಕವಾಡ, ಗಬ್ಬೂರಿನ ಜಸ್ಟೀನ್ ಮಂಜ್ಯಾ ಅಲಿಯಾಸ್ ಮಂಜುನಾಥ್ ಅಂಗಡಿ ಮತ್ತು ಮಂಜುನಾಥ್ ಹಲ್ಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ. ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಬಳಿಕ ಪುಂಡರು ವಿಡಿಯೋವನ್ನು ಹರಿಬಿಟ್ಟಿದ್ದಾರೆ.
ಸದ್ಯ ಹರಿದಾಡುತ್ತಿರುವ ವಿಡಿಯೋದಲ್ಲಿ ಯುವಕ ಅಳುತ್ತಾ ಕೈ ಮುಗಿದು ಬೇಡಿಕೊಂಡರೂ ಕಿರಾತರು ಬಿಟ್ಟು ಬಿಡದೆ ಹೊಡೆದಿದ್ದಾರೆ. ಈ ಕೃತ್ಯದ ಕಿಂಗ್ ಪಿನ್ ಜಾದವ್ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ