ಭಯವೇ ಇಲ್ಲದ ಚಿಗುರು ಮೀಸೆ ಪುಡಾರಿ
ಲಾಂಗ್ ಹಿಡಿದು ಅಪ್ರಾಪ್ತನಿಗೆ ಬೆದರಿಕೆ..!
ಬಾಲ ಬಿಚ್ಚಿದ್ರೂ ಕೈಕಟ್ಟಿ ಕುಳಿತ ಪೊಲೀಸರು
ಬೆಂಗಳೂರು: ನೆಟ್ಟಗೆ ಇನ್ನೂ ಮೀಸೆ ಚಿಗುರಿಲ್ಲ. ಅಪ್ರಾಪ್ತ ಬೇರೆ, ಆಗಲೇ ಎಂಥಾ ದೌಲತ್ತು ನೋಡಿ. ಕೈಯಲ್ಲಿ ಲಾಂಗ್ ಹಿಡ್ಕೊಂಡು ನಮ್ಮಣ್ಣನ್ನೇ ಬಾಸ್ ಎಂದು ಹೇಳೋ ಅಂತಾ ಅಪ್ರಾಪ್ತನಿಗೆ ಲಾಂಗ್‌ನಿಂದ ಅಟ್ಯಾಕ್ ಮಾಡಿದ್ದಾನೆ.
ಬಾಯಲ್ಲಿ ಬರೀ ಕೆಟ್ಟ ಪದಗಳು. ಓದೋ ವಯಸ್ಸಲ್ಲಿ ಬೀದಿಗೆ ಬಿಟ್ಟ ಹೋರಿಯಂತೆ ಬೆಳೆದು ಹೇಗೆ ಆಡುತ್ತಿದ್ದಾನೆ ಈ ಕಿಡಿಗೇಡಿ. ಬರೀ ಲಾಂಗ್ ಹಿಡ್ಕೊಂಡು ಪೋಸ್ ಕೊಟ್ಟಿದ್ದಷ್ಟೇ ಅಲ್ಲ, ಹಲ್ಲೆ ಮಾಡಿದ್ದಷ್ಟೇ ಅಲ್ಲ. ಅದನ್ನ ಇನ್‌ಸ್ಟಾ ಸ್ಟೋರೀಸ್‌ನಲ್ಲಿ ಹಾಕ್ಕೊಂಡು ಶೋಕಿ ಬೇರೆ!
ಚಿಗುರು ಮೀಸೆ ಪುಡಾರಿ
ಹೀಗೆ ಲಾಂಗ್ ಹಿಡಿದು ಶೋಕಿ ಮಾಡಿದವನು ಅಭಿ, ತನ್ನ ಸರ್ಕಲ್ನಲ್ಲಿ ಹವಾ ಮೇಂಟೇನ್ ಮಾಡೋಕೆ ಹೀಗೆ ದೌಲತ್ ಮಾಡಿದ್ದಾನೆ. ಇದಕ್ಕೆ ಕಾರಣ ಇಷ್ಟೇ. ಇವನ ಅಣ್ಣನನ್ನ ಬಾಸ್ ಅಂತ ಕರೀಬೇಕಂತೆ. ಇವನ ಅಣ್ಣ ಕೂಡ ಏನೂ ದೊಡ್ಡ ವ್ಯಕ್ತಿ ಅಲ್ಲ. ಆತ ಕೂಡ ಪುಡಿರೌಡಿ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್ ಅಂದ್ರಹಳ್ಳಿ ಜಗ್ಗಿ. ಈತನನ್ನ ಬಾಸ್ ಅಂತ ಕರೀಬೇಕು ಅಂತ ತಮ್ಮ ಅಭಿ ಹೀಗೆ ಮತ್ತೋರ್ವ ಅಪ್ರಾಪ್ತನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಹೊಡೆಯೋ ದೃಶ್ಯವನ್ನ ವೀಡಿಯೋವನ್ನ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಇದು ವಾರ್ನಿಂಗ್ ಅಂತ ಬರೆದುಕೊಂಡಿದ್ದಾನೆ.
ಇದೆಲ್ಲಾ ಸಾಲದು ಎಂದು ಅಂದ್ರಹಳ್ಳಿಗೆ ಜಗ್ಗಿನೇ ಬಾಸ್ ಅಂತ ರೀಲ್ಸ್‌ನಲ್ಲಿ ಬಿಲ್ಡಪ್ ವಿಡಿಯೋ ಮಾಡಿ ಪೋಸ್ಟ್ ಬೇರೆ ಮಾಡಿದ್ದಾನೆ. ಇಷ್ಟೆಲ್ಲಾ ಆದ್ರೂ ಪೊಲೀಸರು ಕೈಕಟ್ಟಿ ಕುಳಿತಿರೋದು ಯಾಕೆ ಅಂತ ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ. ಆರಂಭದಲ್ಲೇ ಬಾಲ ಕಟ್ ಮಾಡದಿದ್ರೆ ಮುಂದೆ ಇಂಥವೇ ಕೆಟ್ಟ ಹುಳುಗಳಾಗಿ ಸಮಾಜಕ್ಕೆ ಕಾಡೋದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ