ಹಿಂದಿನ ಮುಖ್ಯ ಕೋಚ್, ನಿರ್ದೇಶಕರ ಅವಧಿ ಮುಕ್ತಾಯ..!
ಆರ್ಸಿಬಿಗೆ ಬಂದ ಹೊಸ ಹೆಡ್ ಕೋಚ್, ಫುಲ್ ಹ್ಯಾಪಿ
ಈ ಹೆಡ್ ಕೋಚ್ರನ್ನ ಫ್ಲವರ್ ಆಫ್ ಪವರ್ ಅಂತಾರೆ
ಜಿಂಬಾಬ್ವೆ ಮೂಲದ ಮಾಜಿ ಕ್ರಿಕೆಟರ್ ಆಂಡಿ ಫ್ಲವರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಆಗಿ ಫ್ರಾಂಚೈಸಿ ಆಯ್ಕೆ ಮಾಡಿದೆ. ಈ ಹಿಂದೆ ಮುಖ್ಯ ಕೋಚ್ ಆಗಿದ್ದ ಸಂಜಯ್ ಬಂಗಾರ್, ನಿರ್ದೇಶಕ ಮೈಕ್ ಹೆಸ್ಸನ್ರನ್ನ ಕೈಬಿಟ್ಟ ಬೆನ್ನಲ್ಲೇ ಹೊಸ ಕೋಚ್ ಹೆಸರನ್ನು RCB ಫ್ರಾಂಚೈಸಿ ಘೋಷಣೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ RCB ಫ್ರಾಂಚೈಸಿ 2024ರ ಐಪಿಎಲ್ ಟೂರ್ನಿಗೆ ತಯಾರಿ ನಡೆಸಲು ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಆಂಡಿ ಫ್ಲವರ್ 10 ವರ್ಷಗಳ ಕಾಲ ಜಿಂಬಾಬ್ವೆ ತಂಡದ ವಿಕೆಟ್ ಕೀಪರ್ ಆಗಿದ್ದು ಉತ್ತಮ ಬ್ಯಾಟ್ಸ್ಮನ್ ಕೂಡ ಆಗಿದ್ದಾರೆ. ಅಲ್ಲದೇ 2002ರಲ್ಲಿ ಭಾರತದ ವಿರುದ್ಧ ನಡೆದ ಐಸಿಸಿ ಟ್ರೋಫಿಯಲ್ಲಿ 145 ರನ್ಗಳು ಬಾರಿಸಿರುವುದು ಇವರ ವೈಯಕ್ತಿಕ ಅಧಿಕ ರನ್ ಆಗಿದೆ.
ಕೋಚ್ ಆಗಿ ನೇಮಕಗೊಂಡ ಫ್ಲವರ್ ಹೇಳಿದ್ದೇನು..?
ಇಡೀ ಐಪಿಎಲ್ ಟೂರ್ನಿಯಲ್ಲಿ ಖ್ಯಾತಿ ಪಡೆದಿರುವ ಹಾಗೂ ಹೆಚ್ಚು ಪ್ರೀತಿಸುವ ಅಭಿಮಾನಿಗಳನ್ನು ಹೊಂದಿರುವ ಆರ್ಸಿಬಿ ತಂಡ ಸೇರುತ್ತಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ವಾತಾವರಣ ಸವಿಯಲು ಕಾತುರದಿಂದ ಇದ್ದೇನೆ ಎಂದು ಆರ್ಸಿಬಿಗೆ ಮುಖ್ಯ ಕೋಚ್ ಆಗಿ ನೇಮಕವಾಗಿರುವ ಆಂಡಿ ಫ್ಲವರ್ ಹೇಳಿದ್ದಾರೆ.
ಈ ಹಿಂದಿನ ಕೋಚ್ ಮತ್ತು ನಿರ್ದೇಶಕರ ಕೆಲಸವನ್ನು ಗುರುತಿಸಿ ಗೌರವಿಸುತ್ತೇನೆ. ಮುಂದಿನ ದಿನಗಳಲ್ಲಿ ಆರ್ಸಿಬಿಯ ಕೀರ್ತಿ ಪತಾಕೆಯನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಲಾಗುವುದು. ತಂಡದ ಆಟಗಾರರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಈ ಅವಕಾಶ ಸಿಕ್ಕಿರುವುದು ನನಗೆ ತುಂಬಾ ಖುಷಿ ಕೊಟ್ಟಿದ್ದು ಜವಾಬ್ದಾರಿಯಿಂದ ಕೆಲಸ ಮಾಡಲಾಗುವುದು. ನನ್ನ ಮುಂದೆ ದೊಡ್ಡ ಚಾಲೆಂಜ್ ಇದ್ದು ಅದನ್ನು ಸಾಧಿಸಲು ಮುಂದಾಗುತ್ತೇನೆ ಎಂದು ಫ್ಲವರ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
The feeling is mutual, Gaffer! 🤝
We can't wait to get #IPL2024 prep underway! ❤️🔥#PlayBold #ನಮ್ಮRCB pic.twitter.com/av7fEPh4zz
— Royal Challengers Bangalore (@RCBTweets) August 4, 2023