/newsfirstlive-kannada/media/post_attachments/wp-content/uploads/2024/11/RCB-5.jpg)
ಸೀಸನ್​​-18ರ ಐಪಿಎಲ್​​​​​​​​​​​​​ಗೆ ಮೆಗಾ ಆಕ್ಷನ್​ಗೆ ಕೌಂಟ್​ಡೌನ್ ಶುರುವಾಗಿದೆ. ಸೀಸನ್​​ ಆರಂಭಕ್ಕೂ ಮುನ್ನ ಬಲಿಷ್ಠ ತಂಡಗಳನ್ನ ಕಟ್ಟಲು ತೆರೆಮರೆಯಲ್ಲೇ ಸರ್ಕಸ್ ನಡೆಸ್ತಿವೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕೂಡ ಇದೇ ಲೆಕ್ಕಾಚಾರದಲ್ಲಿದೆ. ಹಾಗಾದ್ರೆ, ಮೆಗಾ ಆಕ್ಷನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಏನ್ ಮಾಡಬೇಕು..?
ಐಪಿಎಲ್ ಸೀಸನ್ -18ರ ಮೆಗಾ ಹರಾಜಿಗೆ ಕೌಂಟ್​​ಡೌನ್ ಶುರುವಾಗಿದೆ. ಸೌದಿ ಅರೇಬಿಯಾದ ಜೆದ್ಹಾ​​​ನಲ್ಲಿ 2 ದಿನ ನಡೆಯೋ ಬಿಡ್ಡಿಂಗ್​​​ ವಾರ್​ನಲ್ಲಿ ಮ್ಯಾಚ್​ ವಿನ್ನರ್​​​​​​​​​​​​​​​​​​​​​​ ಪ್ಲೇಯರ್​ಗಳಿಗೆ ಗಾಳ ಹಾಕಲು ಫ್ರಾಂಚೈಸಿಗಳು ತುದಿಗಾಲಿನಲ್ಲಿ ನಿಂತಿವೆ. ಇದಕ್ಕಾಗಿ ತೆರೆ ಹಿಂದೆ ಲೆಕ್ಕಾಚಾರಗಳು ಜೋರಾಗಿವೆ. ಈ ವಿಚಾರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಹಿಂದೆ ಬಿದ್ದಿಲ್ಲ.
ಹರಾಜಿಗೂ ಮುನ್ನ ರಿಟೈನ್ಶನ್​ ಅವಕಾಶದಲ್ಲಿ ಮೂವರು ಆಟಗಾರರನ್ನು ಉಳಿಸಿಕೊಂಡಿರುವ ಆರ್​ಸಿಬಿ, ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನ ಕಟ್ಟೋ ಲೆಕ್ಕಾಚಾರದಲ್ಲಿದೆ. 17 ಸೀಸನ್​ಗಳ ಕಪ್​ ಗೆಲುವಿನ ಕೊರಗು ನೀಗಬೇಕಾದ್ರೆ, ಅಳೆದು ತೂಗಿ, ಲೆಕ್ಕಾಚಾರ ಹಾಕಿ ಆಟಗಾರರನ್ನ ಖರೀದಿಸಬೇಕಿದೆ. ಸ್ಲಾಟ್​​ಗಳ ಮೇಲೆ ಪೋಕಸ್​ ಮಾಡಿಯೇ ತಂಡ ಕಟ್ಟಬೇಕು. ಇಲ್ಲ 17 ಸೀಸನ್​​ಗಳ ಆಟವೇ ಮುಂದುವರಿಯೋದು ಪಕ್ಕಾ.
/newsfirstlive-kannada/media/post_attachments/wp-content/uploads/2024/11/RCB-3.jpg)
RTM​ನಲ್ಲಿ ಕೋರ್ ಟೀಮ್​​​​​ನ ಉಳಿಸಿಕೊಳ್ಳಬೇಕು..!
ರಿಟೈನ್ಶನ್​​​​ನಲ್ಲಿ ಕೇವಲ ಮೂವರು ಆಟಗಾರರನ್ನ ಉಳಿಸಿಕೊಂಡಿರುವ ಆರ್​ಸಿಬಿ, ಟೀಮ್​ ಬ್ಯಾಲೆನ್ಸ್​ ದೃಷ್ಟಿಯಿಂದ ಕೋರ್ ಟೀಮ್ ಕಟ್ಟಬೇಕಿದೆ. ಪ್ರಮುಖವಾಗಿ ಮಾಕ್ಸ್​ವೆಲ್, ವಿಲ್​ ಜಾಕ್ಸ್​, ಮೊಹಮ್ಮದ್ ಸಿರಾಜ್​​​ರನ್ನ ತಂಡಕ್ಕೆ ಮರಳಿ ತರಬೇಕಿದೆ. ಇದು ಸಾಕಾರಗೊಳ್ಳಬೇಕಂದ್ರೆ, ಬತ್ತಳಿಕೆಯಲ್ಲಿರುವ ಮೂರು RTM ಅಸ್ತ್ರಗಳನ್ನ ಸರಿಯಾಗಿ ಬಳಸಿಕೊಳ್ಳಬೇಕು.
/newsfirstlive-kannada/media/post_attachments/wp-content/uploads/2024/11/Virat-Kohli-2.jpg)
ವಿರಾಟ್​ಗೆ ಸಾಥ್ ನೀಡುವ ಓಪನರ್ ಬೇಕು
ಆರ್​ಸಿಬಿಯಲ್ಲಿ ಉತ್ತಮ ಓಪನಿಂಗ್ ಜೋಡಿಯನ್ನು ನೋಡಿ ವರ್ಷಗಳೇ ಉರುಳಿವೆ. ವೆಸ್ಟ್ ಇಂಡೀಸ್​ನ ಕ್ರಿಸ್​ ಗೇಲ್​ ನಿರ್ಗಮನದ ಬಳಿಕ ಬೆಸ್ಟ್​ ಓಪನರ್ಸ್ ಇಲ್ದೇ ಸೊರಗಿದೆ. ಆದ್ರೆ, ಈ ಮೆಗಾ ಹರಾಜಿನಲ್ಲಿ ವಿರಾಟ್​ಗೆ ಸಾಥ್​ ನೀಡುವಂತ ಉತ್ತಮ ಆರಂಭಿಕ ಆಟಗಾರನಿಗೆ ಮಣೆ ಹಾಕಬೇಕಿದೆ. ಪ್ರಮುಖವಾಗಿ ಪವರ್​​​​​​​​​​​​​​ ಪ್ಲೇನಲ್ಲೇ ಅರ್ಧ ಮ್ಯಾಚ್ ಮುಗಿಸುವ ಆಟಗಾರ ಬೇಕಿದೆ. ಇಶಾನ್ ಕಿಶನ್, ಜಾಕ್ ಫ್ರೆಸರ್ ಮೆಕ್​​ಗುರ್ಗ್​​​, ಜೋಸ್ ಬಟ್ಲರ್​ರಂಥ ಆಟಗಾರರು ಬೇಕಿದ್ದಾರೆ.
ಬಲಿಷ್ಠ ಮಿಡಲ್ ಆರ್ಡರ್​ & ಮ್ಯಾಚ್ ಫಿನಿಷರ್ಸ್​..!
ಆರ್​ಸಿಬಿಯ ವೈಫಲ್ಯಕ್ಕೆ ಮತ್ತೊಂದು ಕಾರಣವೇ ಮಿಡಲ್ ಆರ್ಡರ್​. ಟಾಪ್ ಆರ್ಡರ್ ವೈಫಲ್ಯಗೊಂಡ್ರೆ, ಬ್ಯಾಟಿಂಗ್ ಬೆನ್ನುಲುಬಾಗಿ ನಿಲ್ಲಬೇಕಿರುವ ಮಿಡಲ್ ಆರ್ಡರ್​ನ ಕೊರತೆ ದಶಕಗಳಿಂದ ಕಾಡ್ತಿದೆ. ಮೆಗಾ ಹರಾಜಿನಲ್ಲಿ ಇದಕ್ಕೆ ಮದ್ದು ನೀಡಬೇಕಾದ್ರೆ, ರಜತ್​ ಪಾಟಿದಾರ್​ಗೆ ಹೆಗಲು ನೀಡುವಂತ ಗ್ಲೆನ್ ಫಿಲಿಫ್ಸ್​, ಮಾರ್ಕಸ್ ಸ್ಟೋಯ್ನಿಸ್​​ರಂಥ ಆಟಗಾರರನ್ನು ಕರೆತರಬೇಕಿದೆ.
17 ವರ್ಷಗಳಲ್ಲಿ ಹಲವು ಮ್ಯಾಚ್ ಫಿನಿಷರ್ ಆಟಗಾರರನ್ನ ಆರ್​ಸಿಬಿ ಕಂಡಿದೆ. ಆದ್ರೆ, ಎಬಿ ಡಿವಿಲಿಯರ್ಸ್​, ದಿನೇಶ್ ಕಾರ್ತಿಕ್ ಹೆಸರು ಮಾತ್ರವೇ ನೆನಪಿಗೆ ಬರುತ್ತೆ. ಇದೀಗ ಒಬ್ಬ ಸಾಲಿಡ್​​ ಫಿನಿಷರ್​​ನ ಮೆಗಾ ಹರಾಜಿನಲ್ಲಿ ಆರ್​ಸಿಬಿ ಟಾರ್ಗೆಟ್ ಮಾಡಬೇಕಿದೆ. ಈ ನಿಟ್ಟಿನಲ್ಲಿ ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್​​ರಂತ ಆಟಗಾರರಿಗೆ ಮಣೆಹಾಕಬೇಕಿದೆ.
/newsfirstlive-kannada/media/post_attachments/wp-content/uploads/2024/11/RCB-4.jpg)
ಅರ್​ಸಿಬಿಗೆ ಬೇಕಾಗಿದ್ದಾರೆ ಕ್ವಾಲಿಟಿ ಸ್ಪಿನ್ನರ್..!
ಅನಿಲ್ ಕುಂಬ್ಳೆ, ಮುತ್ತಯ್ಯ ಮುರಳಿಧರನ್, ಡೇನಿಯಲ್ ವೆಟೋರಿರಂಥ ಆಟಗಾರರನ್ನು ಆರ್​ಸಿಬಿ ಕಂಡಿದೆ. ಈ ಆಟಗಾರರ ಅನುಪಸ್ಥಿತಿಯನ್ನು ಯಜುವೇಂದ್ರ ಚಹಲ್​ ಅದ್ಬುತವಾಗಿ ತುಂಬಿದ್ದರು. ಆದ್ರೆ, ಚಹಲ್​​ ನಿರ್ಗಮನದ ಬಳಿಕ ಒಬ್ಬೇ ಒಬ್ಬ ಕ್ವಾಲಿಟಿ ಸ್ಪಿನ್ನರ್​ ಸಿಕ್ಕಿಲ್ಲ. ಮಿಡಲ್ ಓವರ್​ಗಳಲ್ಲಿ ರನ್​ಗೆ ಕಡಿವಾಣ ಹಾಕುತ್ತಾ, ವಿಕೆಟ್ ಬೇಟೆಯಾಡುತ್ತಾ ಎದುರಾಳಿ ಮೇಲೆ ಒತ್ತಡ ಹೇರುವಂತ ಕ್ವಾಲಿಟಿ ಸ್ಪಿನ್ನರ್​ ತಂಡಕ್ಕೆ ಬೇಕು.! ಚಹಲ್​​ ಹರಾಜಿನಲ್ಲಿ ಸಿಗದಿದ್ರೆ, ಅಫ್ಘನ್ ಮಿಸ್ಟರಿ ಸ್ಪಿನ್ನರ್ ಅಲ್ಲಾ ಘಜನ್‌ಫರ್, ಸಾಯಿ ಕಿಶೋರ್, ಲಂಕಾದ ದುನಿತಾ ವೆಲೆಲ್ಲಗೆ ಬೆಸ್ಟ್ ಚಾಯ್ಸ್.!
ಮಾಸ್ಟರ್​​ ಕ್ಲಾಸ್​ ಬೌಲರ್​ಗಳು..!
ಹೋಮ್​ ಗ್ರೌಂಡ್​ ಚಿನ್ನಸ್ವಾಮಿಯಲ್ಲಿ ಹೆಚ್ಚು ಪಂದ್ಯಗಳನ್ನಾಡೋ ಆರ್​ಸಿಬಿಗೆ, ಮಾಸ್ಟರ್​​ ಕ್ಲಾಸ್​ ಬೌಲರ್​ಗಳು ಬೇಕಿದ್ದಾರೆ. ಚಿನ್ನಸ್ವಾಮಿಯಂತ ಚಿಕ್ಕ ಮೈದಾನದಲ್ಲಿ ಪವರ್ ಪ್ಲೇ ಹಾಗೂ ಡೆತ್ ಓವರ್​ಗಳಲ್ಲಿ ರನ್​ಗಳಿಗೆ ಕಡಿವಾಣ ಹಾಕಬೇಕಿದೆ. ಇಂಡಿಯನ್ ಪೇಸರ್​​ಗಳಿಗೆ ಒತ್ತು ನೀಡುತ್ತಾ ಆರ್ಷ್​ದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್​​​ ಪಟೇಲ್, ಟ್ರೆಂಟ್ ಬೋಲ್ಟ್​​ರಂಥ ಪವರ್ ಫುಲ್ ಬೌಲರ್ಸ್ ಸಿಕ್ರೆ ಬೆಸ್ಟ್​.
ಐಪಿಎಲ್​ನ ಮೆಗಾ ಹರಾಜು ಆರ್​ಸಿಬಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಹಾಕಿದೆ. ಆರ್​​​ಸಿಬಿ ಯಾರಿಗೆ ಎಷ್ಟು ಕೋಟಿ ನೀಡುತ್ತೆ? ಈ ಸಲನಾದರು, ಕಪ್ ಗೆಲ್ಲುವ ತಂಡ ಕಟ್ಟುತ್ತಾ? ನೋಡಬೇಕಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us