newsfirstkannada.com

IPL 2025: ಈ ಅಪಾಯಕಾರಿ ಆಟಗಾರರನ್ನು ಖರೀದಿ ಮಾಡಲು ಆರ್​​​ಸಿಬಿ ಮಾಸ್ಟರ್​​ ಪ್ಲಾನ್!

Share :

Published August 26, 2024 at 7:37pm

    2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರೇಜ್​ ಹೆಚ್ಚಾಗುತ್ತಲೇ ಇದೆ..!

    ಇದಕ್ಕೆ ಕಾರಣ ಮುಂದಿನ ಸೀಸನ್​ಗೆ ಮುನ್ನ ನಡೆಯಲಿರೋ ಮೆಗಾ ಆಕ್ಷನ್​​​​

    ಹಲವು ಸ್ಟಾರ್ ಆಟಗಾರರು ಮೆಗಾ ಆಕ್ಷನ್​ಗೆ ಬರುವ ಸಾಧ್ಯತೆಯೇ ಹೆಚ್ಚು

ಇತ್ತೀಚೆಗೆ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರೇಜ್​ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕಾರಣ ಮುಂದಿನ ಸೀಸನ್​ಗೆ ಮುನ್ನವೇ ಮೆಗಾ ಹರಾಜು ನಡೆಯಲಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್, ಕೆಎಲ್‌ ರಾಹುಲ್ ಮತ್ತು ರಿಷಬ್ ಪಂತ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ಮೆಗಾ ಆಕ್ಷನ್​ಗೆ ಬರುವ ಸಾಧ್ಯತೆ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಗಾ ಆಕ್ಷನ್​ಗೆ ಕಾರ್ಯತಂತ್ರ ರೂಪಿಸಿದೆ. ಯಾರನ್ನು ರಿಲೀಸ್​ ಮಾಡಬೇಕು? ಯಾರನ್ನು ರೀಟೈನ್​ ಮಾಡಿಕೊಳ್ಳಬೇಕು? ಎಂದು ಇನ್ನೂ ಆರ್​​ಸಿಬಿ ಫೈನಲ್​ ಮಾಡಿದಂತೆ ಕಾಣುತ್ತಿಲ್ಲ. ಆದರೆ, ಹರಾಜಿನಲ್ಲಿ ಆರ್‌ಸಿಬಿ ತಂಡಕ್ಕೆ ಅಗತ್ಯವಿರುವ ಸ್ಟಾರ್​​ ಆಲ್​ರೌಂಡರ್ಸ್​ ಮೇಲೆ ಕಣ್ಣಿಟ್ಟಿದೆ. ಈ ಮೂವರು ಮೂವರು ಆಲ್‌ರೌಂಡರ್‌ಗಳು ಆರ್‌ಸಿಬಿ ಸೇರಬಹುದು ಎಂದು ತಿಳಿದು ಬಂದಿದೆ.

ಗ್ಲೆನ್ ಫಿಲಿಪ್ಸ್ ಮೇಲೆ ಆರ್​​ಸಿಬಿ ಕಣ್ಣು

ಗ್ಲೆನ್ ಫಿಲಿಪ್ಸ್ ನ್ಯೂಜಿಲೆಂಡ್ ತಂಡದ ಸ್ಪೋಟಕ ಬ್ಯಾಟರ್​​. ಬೆಂಕಿ ಫೀಲ್ಡಿಂಗ್‌ಗೆ ಹೆಚ್ಚು ಹೆಸರು ವಾಸಿ ಎಂದು ಹೇಳಬಹುದು. ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ ಕೂಡ ಹೊಂದಿದ್ದಾರೆ. ಆದರೆ, ಇವರು ಐಪಿಎಲ್​​ನಲ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಆರ್‌ಸಿಬಿ ಗ್ಲೆನ್ ಫಿಲಿಪ್ಸ್ ಅವರನ್ನು ಬಿಡ್ ಮಾಡುವುದಕ್ಕೆ ರೆಡಿಯಾಗಿದೆ.

ಅಶುತೋಷ್ ಶರ್ಮಾಗೂ ಆರ್​​ಸಿಬಿ ಸ್ಕೆಚ್​​

ಕಳೆದ ಐಪಿಎಲ್​ ಸೀಸನ್​​ನಲ್ಲಿ ಪಂಜಾಬ್‌ ಪರ ಅಶುತೋಷ್ ಶರ್ಮಾ ಅಬ್ಬರಿಸಿದ್ರು. ಅಶುತೋಷ್ ಬ್ಯಾಟಿಂಗ್​ ಮಾತ್ರವಲ್ಲ ಬೌಲಿಂಗ್​ ಕೂಡ ಸಖತ್​ ಆಗಿದೆ. ಆರ್‌ಸಿಬಿ ಈ ಆಟಗಾರನನ್ನು ಖರೀದಿ ಮಾಡುವ ಸಾಧ್ಯತೆ ಇದೆ.

ಲಿಯಾಮ್ ಲಿವಿಂಗ್​ಸ್ಟೋನ್​​​​ ಖರೀದಿ ಸಾಧ್ಯತೆ

ಇಂಗ್ಲೆಂಡ್‌ ಅಪಾಯಕಾರಿ ಆಲ್‌ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್​​. ಇವರು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ತಂಡಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ. ಸೋಲುವ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇವರಲ್ಲಿದ್ದು, ಆರ್‌ಸಿಬಿ ಲಿವಿಂಗ್​​ಸ್ಟೋನ್​ ಅವರನ್ನು ತಂಡಕ್ಕೆ ಕರೆತರುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಲಕ್ನೋ ತಂಡದಲ್ಲಿ ತನಗಾದ ಅವಮಾನದ ಬಗ್ಗೆ ಬಾಯ್ಬಿಟ್ಟ KL​ ರಾಹುಲ್; ಈ ಬಗ್ಗೆ ಏನಂದ್ರು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL 2025: ಈ ಅಪಾಯಕಾರಿ ಆಟಗಾರರನ್ನು ಖರೀದಿ ಮಾಡಲು ಆರ್​​​ಸಿಬಿ ಮಾಸ್ಟರ್​​ ಪ್ಲಾನ್!

https://newsfirstlive.com/wp-content/uploads/2024/04/Kohli_Andy-Flower.jpg

Load More