newsfirstkannada.com

×

ಪವರ್​​ ಹಿಟ್ಟರ್​​ ಖರೀದಿಗೆ ಆರ್​​​ಸಿಬಿಯಿಂದ ಮಾಸ್ಟರ್​ ಪ್ಲಾನ್​​; ಬೆಂಗಳೂರಿಗೆ ಬಂತು ಆನೆಬಲ

Share :

Published October 31, 2024 at 2:05pm

    ಬಹುನಿರೀಕ್ಷಿತ 2025ರ ಇಂಡಿಯನ್​​ ಪ್ರೀಮಿಯರ್​​ ಲೀಗ್​​

    ಆರ್​​ಸಿಬಿ ತಂಡದಿಂದ ಮೆಗಾ ಆಕ್ಷನ್​ಗೆ ಭರ್ಜರಿ ತಯಾರಿ

    ಬಿಸಿಸಿಐಗೆ ರೀಟೈನ್​​ ಲಿಸ್ಟ್​ ಸಲ್ಲಿಸಲು ಇಂದು ಕೊನೆಯ ದಿನ

ಬಹುನಿರೀಕ್ಷಿತ 2025ರ ಇಂಡಿಯನ್​​ ಪ್ರೀಮಿಯರ್​​ ಲೀಗ್​​ಗೆ ಇಡೀ ಕ್ರೀಡಾಲೋಕವೇ ಕಾಯುತ್ತಿದೆ. ಬಿಸಿಸಿಐಗೆ ಎಲ್ಲಾ ತಂಡಗಳು ಐಪಿಎಲ್​​​ ರೀಟೈನ್​​ ಲಿಸ್ಟ್​ ಸಲ್ಲಿಸಲು ಇಂದು ಕೊನೆಯ ದಿನ. ಸಂಜೆ ಒಳಗೆ ಯಾವ ತಂಡ ಯಾರನ್ನು ಉಳಿಸಿಕೊಂಡಿದೆ ಅನ್ನೋ ಮಾಹಿತಿ ಲಭ್ಯವಾಗಲಿದೆ. ರೀಟೈನ್​​ ಲಿಸ್ಟ್​​ ಸಲ್ಲಿಸಿದ ಕೆಲವೇ ದಿನಗಳಲ್ಲಿ 2025ರ ಮೆಗಾ ಆಕ್ಷನ್​​ ಕೂಡ ನಡೆಯಲಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಈಗಾಗಲೇ ಅಳೆದು ತೂಗಿ ರೀಟೈನ್​ ಲಿಸ್ಟ್ ರೆಡಿ​ ಮಾಡಿಕೊಂಡಿದೆ. ಇಷ್ಟೇ ಅಲ್ಲ ಮುಂದಿನ ತಿಂಗಳು ನಡೆಯಲಿರೋ ಮೆಗಾ ಆಕ್ಷನ್​ಗೂ ಆರ್​​ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ಹೇಗಾದ್ರೂ ಮಾಡಿ ಈ ಸಲ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್​​ಸಿಬಿ ಮೆಗಾ ಆಕ್ಷನ್​​ನಲ್ಲಿ ಸ್ಟಾರ್​ ಆಲ್​ರೌಂಡರ್​​ಗಳನ್ನೇ ಟಾರ್ಗೆಟ್​ ಮಾಡಲಿದೆ ಎಂದು ತಿಳಿದು ಬಂದಿದೆ.

ರಚಿನ್​​ ರವೀಂದ್ರ ಮೇಲೆ ಹದ್ದಿನ ಕಣ್ಣು

ರಚಿನ್‌ ರವೀಂದ್ರ ಅವರು ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಸ್ಟಾರ್​​ ಆಲ್​ರೌಂಡರ್​​. ಇವರನ್ನು ಚೆನ್ನೈ ಸೂಪರ್​​ ಕಿಂಗ್ಸ್​ ಉಳಿಸಿಕೊಳ್ಳುತ್ತಿರೋ ಕುರಿತು ಯಾವುದೇ ಮಾಹಿತಿ ಇಲ್ಲ. ಸಿಎಸ್‌ಕೆ ಇವರನ್ನು ಕೈ ಬಿಟ್ಟಲ್ಲಿ ಹಲವು ತಂಡಗಳು ಖರೀದಿಗೆ ಮುಗಿ ಬೀಳಲಿವೆ. ಆರ್​​ಸಿಬಿ ತಂಡದ ಬಕೆಟ್​​ ಲಿಸ್ಟ್​ನಲ್ಲಿ ರಚಿನ್​ ರವೀಂದ್ರ ಹೆಸರು ಇದೆ.

ಯಾರು ಈ ರಚಿನ್​ ರವೀಂದ್ರ?

ಬೆಂಗಳೂರು ಮೂಲದ ನ್ಯೂಜಿಲೆಂಡ್​ ತಂಡದ ಸ್ಟಾರ್​​ ಪ್ಲೇಯರ್​​​ ರಚಿನ್​ ರವೀಂದ್ರ. ಇವರು ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್​ ಬೀಸಲಿದ್ದಾರೆ. ಅದರಲ್ಲೂ ಮಿಡಲ್​ ಆರ್ಡರ್​​ನಲ್ಲಿ ಜೀವ ತುಂಬಬಲ್ಲ ಪ್ಲೇಯರ್​​​. ಇತ್ತೀಚಿಗೆ ಬೆಂಗಳೂರಲ್ಲಿ ನಡೆದ ಮೊದಲ ಟೆಸ್ಟ್​​ನಲ್ಲಿ ಭಾರತ ತಂಡದ ವಿರುದ್ಧ ಶತಕ ಸಿಡಿಸಿ ಮಿಂಚಿದ್ದರು. ಕೇವಲ ಬ್ಯಾಟಿಂಗ್​ ಮಾತ್ರವಲ್ಲ ಬೌಲಿಂಗ್​​ನಲ್ಲೂ ಸೈ ಎನಿಸಿಕೊಂಡವರು.

ಐಪಿಎಲ್​​ನಲ್ಲೂ ಅತ್ಯುತ್ತಮ ಸಾಧನೆ

ಕಳೆದ ಸೀಸನ್​​ನಲ್ಲಿ ಭಾರೀ ಸದ್ದು ಮಾಡಿದ್ದ ಆಲ್​​ರೌಂಡರ್​​ ರಚಿನ್​ ರವೀಂದ್ರ. ಇವರು ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಪರ 10 ಪಂದ್ಯಗಳನ್ನು ಆಡಿದ್ರು. ಒಂದು ಅರ್ಧಶತಕ ಸೇರಿದಂತೆ 222 ರನ್‌ ಸಿಡಿಸಿದ್ದಾರೆ.

ಭಾರತದ ಪಿಚ್​​ಗಳಲ್ಲಿ ಬ್ಯಾಟ್​ ಬೀಸಬಲ್ಲರು

ಭಾರತದ ಪಿಚ್‌ಗಳಲ್ಲಿ ಹೇಗೆ ಆಡಬೇಕು ಅನ್ನೋ ಅರಿವು ರಚಿನ್​​ ಅವರಿಗಿದೆ. ಬೆಂಗಳೂರು ಮೂಲದ ಈ ಪ್ಲೇಯರ್‌ ನ್ಯೂಜಿಲೆಂಡ್​​ನಲ್ಲಿ ಬೆಳೆದಿದ್ದು. ಹಾಗಾಗಿ ಅದೇ ದೇಶವನ್ನು ಪ್ರತಿನಿಧಿಸುತ್ತಾರೆ. ತಮ್ಮ ಆಕರ್ಷಕ ಬ್ಯಾಟಿಂಗ್​ನಿಂದಲೇ ಹೆಚ್ಚು ಮನೆ ಮಾತಾದವರು ರಚಿನ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವರ್​​ ಹಿಟ್ಟರ್​​ ಖರೀದಿಗೆ ಆರ್​​​ಸಿಬಿಯಿಂದ ಮಾಸ್ಟರ್​ ಪ್ಲಾನ್​​; ಬೆಂಗಳೂರಿಗೆ ಬಂತು ಆನೆಬಲ

https://newsfirstlive.com/wp-content/uploads/2024/10/RCB-News.jpg

Load More