2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್!
IPL ಸೀಸನ್ಗಾಗಿ ಇಡೀ ಕ್ರೀಡಾಲೋಕವೇ ಕಾಯುತ್ತಿದೆ
ಬಲಿಷ್ಠ ಆಟಗಾರರ ಖರೀದಿಗೆ ಐಪಿಎಲ್ ತಂಡಗಳ ಪ್ಲಾನ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗಾಗಿ ಇಡೀ ಕ್ರೀಡಾಲೋಕವೇ ಕಾಯುತ್ತಿದೆ. ವರ್ಷದ ಕೊನೆಗೆ ನಡೆಯಲಿರೋ ಐಪಿಎಲ್ ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರ ಖರೀದಿಗಾಗಿ ಎಲ್ಲಾ ಐಪಿಎಲ್ ತಂಡಗಳು ಪ್ಲಾನ್ ಮಾಡಿಕೊಂಡಿವೆ. ಹೇಗಾದ್ರೂ ಮಾಡಿ ಮುಂದಿನ ಸಲ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ತಂಡ ಕಟ್ಟಲು ಮುಂದಾಗಿದೆ.
ಇನ್ನು, ಎಲ್ಲಾ ಐಪಿಎಲ್ ತಂಡಗಳು ಬಿಸಿಸಿಐಗೆ ಹೊಸ ರೀಟೈನ್ ಲಿಸ್ಟ್ ಸಲ್ಲಿಸಲು ಕೇವಲ 3 ದಿನಗಳು ಮಾತ್ರ ಬಾಕಿ ಇದೆ. ಇದರ ಮಧ್ಯೆ ಆರ್ಸಿಬಿ ತಂಡದ ಹೊಸ ರೀಟೈನ್ ಲಿಸ್ಟ್ ಔಟ್ ಆಗಿದೆ. ಆರ್ಸಿಬಿ ತಂಡ ಈ ಸಲ 6 ಬಲಿಷ್ಠ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಸಜ್ಜಾಗಿದೆ. ಈ ಲಿಸ್ಟ್ನಲ್ಲಿ ಅಚ್ಚರಿ ಹೆಸರುಗಳು ಕೇಳಿ ಬಂದಿವೆ.
ಆರ್ಸಿಬಿ ರೀಟೈನ್ ಮಾಡಿಕೊಳ್ಳೋ ಆಟಗಾರರು ಇವರೇ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ. ಇವರು ಬರೋಬ್ಬರಿ 17 ವರ್ಷಗಳಿಂದ ಆರ್ಸಿಬಿ ತಂಡದ ಭಾಗವಾಗಿದ್ದಾರೆ. 2025ರ ಐಪಿಎಲ್ ಸೀಸನ್ಗೂ ಆರ್ಸಿಬಿ ಮೊದಲ ಆಯ್ಕೆ ವಿರಾಟ್ ಕೊಹ್ಲಿ ಆಗಿದ್ದಾರೆ.
ಆರ್ಸಿಬಿ ರೀಟೈನ್ ಲಿಸ್ಟ್ನಲ್ಲಿ ನಿರೀಕ್ಷೆಯಂತೆಯೇ ತಂಡದ ವೇಗಿ ಮೊಹಮ್ಮದ್ ಸಿರಾಜ್ ಇದ್ದಾರೆ. ಇವರ ಜತೆಗೆ ಅಚ್ಚರಿ ಎಂಬಂತೆ ಆರ್ಸಿಬಿ ತಂಡದ ಪ್ರೆಸೆಂಟ್ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಹೆಸರು ಕೂಡ ಇದೆ. ಇತ್ತೀಚೆಗೆ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ತಂಡ ಸೇಂಟ್ ಲೂಸಿಯಾ ಕಿಂಗ್ಸ್ ಅನ್ನು ಮುನ್ನಡೆಸಿದ್ದು ಇದೇ ಫಾಫ್. ಹಾಗಾಗಿ ಇವರ ನಾಯಕತ್ವದಲ್ಲಿ ಆರ್ಸಿಬಿ ಕಪ್ ಗೆಲ್ಲಬಹುದು ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಗ್ಲೆನ್ ಮ್ಯಾಕ್ಸ್ವೆಲ್ಗೂ ಮಣೆ
ತಂಡದ 4ನೇ ಆಯ್ಕೆ ಗ್ಲೆನ್ ಮ್ಯಾಕ್ಸ್ವೆಲ್. ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿದ್ರೂ ಮ್ಯಾಕ್ಸ್ವೆಲ್ ಅವರನ್ನು ಆರ್ಸಿಬಿ ರೀಟೈನ್ ಮಾಡಿಕೊಳ್ಳುತ್ತಿದೆ. ಮ್ಯಾಕ್ಸಿ ಜತೆ ರಜತ್ ಪಾಟಿದಾರ್ ಹೆಸರು ಕೂಡ ಇದೆ. ಇವರನ್ನು ಆರ್ಸಿಬಿ ಟೀಮ್ ಭವಿಷ್ಯದ ದೃಷ್ಟಿಯಿಂದ ಉಳಿಸಿಕೊಳ್ಳಲಾಗುತ್ತಿದೆ. ಹಾಗೆಯೇ ಅನ್ಕ್ಯಾಪ್ಡ್ ಪ್ಲೇಯರ್ ಯಶ್ ದಯಾಳ್ ಹೆಸರು ರೀಟೈನ್ ಲಿಸ್ಟ್ನಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ