newsfirstkannada.com

×

ಬೆಂಗಳೂರು ತಂಡಕ್ಕೆ ಭರ್ಜರಿ ಗುಡ್​ನ್ಯೂಸ್​​; ಆರ್​​ಸಿಬಿಗೆ ಈ ಮೂವರು ಸ್ಟಾರ್​ ಆಟಗಾರರ ಎಂಟ್ರಿ ಪಕ್ಕಾ!

Share :

Published September 17, 2024 at 9:38pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​​ ಲೀಗ್​​ ಮೆಗಾ ಹರಾಜು

    ಮೆಗಾ ಹರಾಜಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ತಯಾರಿ

    ಮೂವರು ಸ್ಟಾರ್​ ಆಟಗಾರರನ್ನೇ ಟಾರ್ಗೆಟ್ ಮಾಡಲು ಆರ್​​ಸಿಬಿ ಸಿದ್ಧತೆ

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​​ ಲೀಗ್​​ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೆ ಎಲ್ಲಾ ತಂಡಗಳು ಸಿದ್ಧತೆ ಆರಂಭಿಸಿವೆ. ಆರ್​​ಸಿಬಿ ಕೂಡ ಹರಾಜಿನಲ್ಲಿ ಬಲಿಷ್ಠ ಆಲ್‌ರೌಂಡರ್ ಮೇಲೂ ಕಣ್ಣಿಡಲಿದೆ. ಅದರಲ್ಲೂ ಮೂವರು ಆಲ್​ರೌಂಡರ್​ಗಳನ್ನೇ ಟಾರ್ಗೆಟ್ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಗ್ಲೆನ್ ಫಿಲಿಪ್ಸ್

ಗ್ಲೆನ್ ಫಿಲಿಪ್ಸ್ ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಭಾಗವಾಗಿದ್ದರು. ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಗ್ಲೆನ್ ಫಿಲಿಪ್ಸ್ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸಮನ್. ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಾರೆ. ಜೊತೆಗೆ ಬೌಲಿಂಗ್​ ಮೂಲಕವೂ ತಂಡಕ್ಕೆ ಆಧಾರವಾಗಿರುತ್ತಾರೆ. ಇವರು ಆಫ್ ಸ್ಪಿನ್ ಬೌಲರ್. ಅಂತಹ ಪರಿಸ್ಥಿತಿಯಲ್ಲಿ ಫಿಲಿಪ್ಸ್ ಹರಾಜಿನ ಭಾಗವಾದರೆ RCB ಕೊಂಡುಕೊಳ್ಳುವುದು ಪಕ್ಕಾ.

ಅಶುತೋಷ್ ಶರ್ಮಾ

ಅಶುತೋಷ್ ಶರ್ಮಾ 2024ರಲ್ಲಿ ಚೊಚ್ಚಲ ಐಪಿಎಲ್ ಟೂರ್ನಿ ಆಡಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾರೆ. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ 8ನೇ ಕ್ರಮಾಂಕದಲ್ಲಿ ಬಂದು ಒಂದು ಋತುವಿನಲ್ಲಿ 100 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಆಟಗಾರ. ಐಪಿಎಲ್ 2024ರಲ್ಲಿ ಅಶುತೋಷ್ 11 ಪಂದ್ಯಗಳಲ್ಲಿ 167.26 ಸ್ಟ್ರೈಕ್ ರೇಟ್‌ನಲ್ಲಿ 189 ರನ್ ಗಳಿಸಿದ್ದಾರೆ. ಇವರು ಹರಾಜಿಗೆ ಹೋದರೆ RCB ಖರೀದಿಸಲು ಪ್ಲಾನ್ ಮಾಡಿಕೊಂಡಿದೆ.

ಲಿಯಾಮ್ ಲಿವಿಂಗ್​​ಸ್ಟೋನ್

ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಲಿವಿಂಗ್‌ಸ್ಟೋನ್ ಪಂಜಾಬ್ ಕಿಂಗ್ಸ್‌ನ ಭಾಗವಾಗಿದ್ದಾರೆ. ಲಿವಿಂಗ್‌ಸ್ಟೋನ್ ಬ್ಯಾಟಿಂಗ್, ಬೌಲಿಂಗ್​​ ಎರಡರಲ್ಲೂ ಚರಿತ್ರೆ ಸೃಷ್ಟಿಸಬಲ್ಲರು. ಕಳೆದ ಋತುವಿನಲ್ಲಿ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಐಪಿಎಲ್ 2024ರ 7 ಇನ್ನಿಂಗ್ಸ್‌ಗಳಲ್ಲಿ 22.20 ಸರಾಸರಿಯಲ್ಲಿ 111 ರನ್ ಗಳಿಸಿದರು. ಬೌಲಿಂಗ್​ನಲ್ಲಿ ಕೇವಲ 3 ವಿಕೆಟ್ ಪಡೆದರು. ಹೀಗಾಗಿ ಅವರನ್ನು ಪಂಜಾಬ್ ತಂಡ ರಿಲೀಸ್​ ಮಾಡಲಿದ್ದು, ಆರ್​​ಸಿಬಿ ಖರೀದಿ ಮಾಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ತಂಡಕ್ಕೆ ಭರ್ಜರಿ ಗುಡ್​ನ್ಯೂಸ್​​; ಆರ್​​ಸಿಬಿಗೆ ಈ ಮೂವರು ಸ್ಟಾರ್​ ಆಟಗಾರರ ಎಂಟ್ರಿ ಪಕ್ಕಾ!

https://newsfirstlive.com/wp-content/uploads/2024/08/RCB_MAXWELL.jpg

Load More