newsfirstkannada.com

ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪ್ರಯಾಣಿಕನಿಗೆ CPR ಮಾಡಿ ಜೀವ ಉಳಿಸಿದ ಕಾನ್‌ಸ್ಟೆಬಲ್

Share :

18-09-2023

    ಭದ್ರತಾ ಸಿಬ್ಬಂದಿಯ ಮಾನವೀಯ ಕೆಲಸಕ್ಕೆ ಮೆಚ್ಚುಗೆ

    ಮುಂಬೈನ ಕುರ್ಲಾ ರೈಲ್ವೇ ನಿಲ್ದಾಣದಲ್ಲಿ ನಡೆದ ಘಟನೆ

    ಕಾರ್ಡಿಯಾಕ್ ಅರೆಸ್ಟ್​ನಿಂದಾಗಿ ನೆಲಕ್ಕೆ ಬಿದ್ದಿದ್ದ ಪ್ರಯಾಣಿಕ

ಮುಂಬೈನ ಕುರ್ಲಾ ರೈಲ್ವೇ ನಿಲ್ದಾಣದಲ್ಲಿ ಆರ್‌ಪಿಎಫ್ ಕಾನ್‌ಸ್ಟೆಬಲ್ ಒಬ್ಬರು, ಪ್ರಯಾಣಿಕರ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಸೆಪ್ಟೆಂಬರ್ 14 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಿಲ್ದಾಣದ ಪ್ಲಾಟ್‌ಫಾರ್ಮ್ 7-8ರಲ್ಲಿ ಪ್ರಯಾಣಿಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಸುದ್ದಿ ತಿಳಿಯುತ್ತಿದ್ದಂತೆಯೇ ಕರ್ತವ್ಯದಲ್ಲಿ, ಆರ್‌ಪಿಎಫ್ (ರೈಲ್ವೆ ಸಂರಕ್ಷಣಾ ಪಡೆ) ಕಾನ್‌ಸ್ಟೆಬಲ್ ಮುಖೇಶ್ ಯಾದವ್, ಸ್ಥಳಕ್ಕೆ ಆಗಮಿಸಿ ಸಿಪಿಆರ್ (Cardio Pulmonary Resuscitation) ಮಾಡಿದ್ದಾರೆ. ಮುಖೇಶ್ ಯಾದವ್ ಅವರ ಸಮಯ ಪ್ರಜ್ಞೆ ಜೊತೆಗಿನ ಕರ್ತವ್ಯ ಪ್ರಜ್ಞೆಯಿಂದಾಗಿ ಪ್ರಯಾಣಿಕನ ಜೀವ ಉಳಿದಿದೆ.

ಸಿಪಿಆರ್ ಮಾಡಿದ ಬಳಿಕ ಕೂಡಲೇ ಅವರನ್ನು ಅಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ತಪಾಸಣೆ ಬಳಿಕ, ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು ಅನ್ನೋದು ತಿಳಿದುಬಂದಿದೆ. ಆಸ್ಪತ್ರೆಯ ವೈದ್ಯರು ಆರ್‌ಪಿಎಫ್ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.
ಭದ್ರತಾ ಅಧಿಕಾರಿ ಮಾಡಿದ ಸಿಪಿಆರ್​ನಿಂದಾಗಿ ಪ್ರಯಾಣಿಕನ ಜೀವ ಉಳಿದಿದೆ. ಆರ್‌ಪಿಎಫ್ ಸಿಬ್ಬಂದಿ ಮುಖೇಶ್ ಯಾದವ್ ಅಮೂಲ್ಯವಾದ ಜೀವವನ್ನು ಉಳಿಸುವ ಮೂಲಕ ಮುಖೇಶ್ ಯಾದವ್ ಮಾನವೀಯತೆ ಮೆರೆದಿದ್ದಾರೆ. ಸದ್ಯ ಪ್ರಯಾಣಿಕನ ಆರೋಗ್ಯ ಸುಧಾರಿಸುತ್ತಿದೆ ಎಂದು ರೈಲ್ವೇ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪ್ರಯಾಣಿಕನಿಗೆ CPR ಮಾಡಿ ಜೀವ ಉಳಿಸಿದ ಕಾನ್‌ಸ್ಟೆಬಲ್

https://newsfirstlive.com/wp-content/uploads/2023/09/CPR.jpg

Load More