newsfirstkannada.com

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನೋಟಿಸ್ ಕೊಟ್ಟ ಪೊಲೀಸರು; ವಿಚಾರಣೆಗೆ ಹಾಜರಾಗಲು ಮೂರು ದಿನದ ಗಡುವು

Share :

11-11-2023

    ದರ್ಶನ್ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಅನ್ನೋ ಆರೋಪ

    ಮೂರು ದಿನದ ಒಳಗೆ ರಾಜರಾಜೇಶ್ವರಿ ನಗರ ಪೊಲೀಸರಿಂದ ವಿಚಾರಣೆ

    ದರ್ಶನ್ ಹೇಳಿಕೆ ದಾಖಲಿಸಿದ ಬಳಿಕ ಪೊಲೀಸರಿಂದ ಮುಂದಿನ ಕ್ರಮ

ಬೆಂಗಳೂರು: ರಾಜರಾಜೇಶ್ವರಿ ನಗರ ಪೊಲೀಸರು ಕೊನೆಗೂ ನಟ ದರ್ಶನ್‌ಗೆ ನೋಟಿಸ್ ಕೊಟ್ಟಿದ್ದಾರೆ. ದರ್ಶನ್ ಮನೆಯ ನಾಯಿ ಮಹಿಳೆಗೆ ಕಚ್ಚಿದ ಕೇಸ್‌ನಲ್ಲಿ ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗಬೇಕು. ಘಟನಾ ಸ್ಥಳದ ಸಿಸಿಟಿವಿ ಫೂಟೇಜ್ ನೀಡುವಂತೆ ನೋಟಿಸ್ ಕೊಡಲಾಗಿದೆ.

ಆರ್.ಆರ್ ನಗರ ಪೊಲೀಸರು ನಿನ್ನೆ ಮನೆಗೆ ಹೋಗಿ ನಟ ದರ್ಶನ್ ಕೈಗೆ ನೋಟಿಸ್ ಕೊಟ್ಟು ಬಂದಿದ್ದಾರೆ. ಮಹಿಳೆಗೆ ನಾಯಿ ಕಚ್ಚಿದ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಅವರ ಮನೆಯ ಡಾಗ್ ಕೇರ್ ಟೇಕರ್ ಹೇಳಿಕೆ ಪಡೆದುಕೊಂಡಿದ್ದಾರೆ. ಇದೀಗ ನಟ ದರ್ಶನ್ ಹೇಳಿಕೆಯಷ್ಟೇ ದಾಖಲಿಸಬೇಕಾಗಿದೆ. ಹೀಗಾಗಿ ನಟ ದರ್ಶನ್​ಗೆ ನೋಟಿಸ್ ನೀಡಿದ್ದಾರೆ. ಉದ್ದೇಶ ಪೂರ್ವಕವಾಗಿ ಶ್ವಾನ ಬಿಟ್ಟಿಲ್ಲ. ಆಕಸ್ಮಿಕವಾಗಿ ನಡೆದಿರೋ ಘಟನೆ ಎಂದು ಶ್ವಾನದ ಕೇರ್ ಟೇಕರ್ ಹೇಮಂತ್ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಆ ಶ್ವಾನ ದರ್ಶನ್ ಅವರದ್ದಲ್ಲ ಗಿಫ್ಟ್ ಆಗಿ ಬಂದಿರೋದು. ಗಿಫ್ಟ್ ಕೊಟ್ಟು ಶ್ವಾನವನ್ನು ತಾನೇ ನೋಡಿಕೊಳ್ಳುತ್ತಿದ್ದಾಗಿ ಹೇಮಂತ್ ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ ದರ್ಶನ್ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ದರ್ಶನ್ ದೊಡ್ಡ ವ್ಯಕ್ತಿ, ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ಅವರ ಮನೆಯವರನ್ನು ವಿಚಾರಣೆ ಮಾಡಿಲ್ಲ. ಶ್ವಾನವನ್ನ ಬೇಕು ಅಂತಾನೆ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ. ಪ್ರಕರಣದಲ್ಲಿ 307 ಸೆಕ್ಷನ್ ನನ್ನು ಪೊಲೀಸರು ಸೇರಿಸಿಲ್ಲ ಎಂದು ಆರೋಪ ಮಾಡಿದ್ದರು. ಸದ್ಯ ದರ್ಶನ್ ಹೇಳಿಕೆ ದಾಖಲಿಸಿದ ಬಳಿಕ ಪೊಲೀಸರ ಯಾವ ಕ್ರಮಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಏನಿದು ಪ್ರಕರಣ..?
ಅಕ್ಟೋಬರ್​​ ಕೊನೆಯಲ್ಲಿ ದರ್ಶನ್​ ಮನೆ ಮುಂದೆ ಅಮಿತ್ ಜಿಂದಾಲ್ ಎಂಬ ಮಹಿಳೆ ತನ್ನ ಕಾರ್​ ಪಾರ್ಕ್​ ಮಾಡಿದ್ದರು. ತಮ್ಮ ಕಾರ್​​ ತೆಗೆಯುವ ವೇಳೆ ಮಹಿಳೆ, ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಧ್ಯೆ ಜಗಳ ಆಗಿದೆ. ಇದರ ಪರಿಣಾಮ ದರ್ಶನ್​ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಮಹಿಳೆ ಆರೋಪ ಏನು..?
ಅಂದು ನಾನು ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ಕೊಟ್ಟಿದ್ದೆ. ನನ್ನ ಕಾರನ್ನು ದರ್ಶನ್ ಮನೆ ಬಳಿ ಖಾಲಿ ಸೈಟಿನಲ್ಲಿ ನಿಲ್ಲಿಸಿದ್ದೆ. ಕಾರ್​ ತೆಗೆದುಕೊಳ್ಳಲು ಬಂದಾಗ ಅದೇ ಜಾಗದಲ್ಲಿ ನಾಯಿ ಇತ್ತು. ಆಗ ಆ ನಾಯಿಯನ್ನು ಕಟ್ಟಿ ಎಂದು ಕೇಳಿದೆ. ಅದಕ್ಕೆ ನಾಯಿಯನ್ನು ನೋಡಿಕೊಳ್ಳುತ್ತಿದ್ದ ನಿರ್ಲಕ್ಷ್ಯ ತೋರಿದ. ಆಗ ಮಾತಿಗೆ ಮಾತು ಬೆಳೆದಾಗ ನಾಯಿ ನನ್ನ ಮೈಮೇಲೆ ಎಗರಿ ಕಚ್ಚಿದ್ದು, ಹೊಟ್ಟೆಯ ಭಾಗಕ್ಕೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನೋಟಿಸ್ ಕೊಟ್ಟ ಪೊಲೀಸರು; ವಿಚಾರಣೆಗೆ ಹಾಜರಾಗಲು ಮೂರು ದಿನದ ಗಡುವು

https://newsfirstlive.com/wp-content/uploads/2023/09/DARSHAN-2.jpg

Load More