newsfirstkannada.com

59ನೇ ಹುಟ್ಟುಹಬ್ಬಕ್ಕೆ 3 ದಿನ ಬಾಕಿ.. ಅಷ್ಟರಲ್ಲೇ ಇಹಲೋಕ ತ್ಯಜಿಸಿದ RRR ಚಿತ್ರದ ಖಳನಟ ರೇ ಸ್ಟೀವನ್ಸನ್​

Share :

23-05-2023

    ನಿಗೂಢ ಕಾಯಿಲೆಗೆ ತುತ್ತಾಗಿದ್ದ RRR ವಿಲನ್

    ನಟ ರೇ ಸ್ಟೀವನ್ಸನ್ ಅನುಮಾನಸ್ಪದ ಸಾವು

    ಸ್ಟೀವನ್ಸನ್ ರೇಗೆ ನಿರ್ದೇಶಕ ರಾಜಮೌಳಿ ಸಂತಾಪ

ತ್ರಿಬಲ್ ಆರ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಹಾಲಿವುಡ್ ನಟ ರೇ ಸ್ಟೀವನ್ಸನ್ ಸಾವನ್ನಪ್ಪಿದ್ದಾರೆ. 58 ವರ್ಷದ ರೇ ಸ್ಟೀವನ್ಸನ್ ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ರೇ ಸ್ಟೀವನ್ಸನ್ ಅವರ ಸಾವಿಗೆ ನಿರ್ದೇಶಕ ರಾಜಮೌಳಿ ಸಂತಾಪ ಸೂಚಿಸಿದ್ದು, ”ಆಘಾತ.. ಈ ಸುದ್ದಿಯನ್ನ ನಂಬಲು ಸಾಧ್ಯವಾಗ್ತಿಲ್ಲ. ರೇ ತಮ್ಮ ಜೊತೆ ಸಾಕಷ್ಟು ಎನರ್ಜಿ ಮತ್ತು ಚೈತನ್ಯವನ್ನ ಸೆಟ್​ಗೆ ತಂದಿದ್ದರು. ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ. ಆ ಕುಟುಂಬಕ್ಕೆ ನೋವು ಭರಿಸುವ ಧೈರ್ಯ ಸಿಗಲಿ. ರೇ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.

ರೇಮಂಡ್​​ ಸ್ಟೀವನ್ಸನ್​​ ಇವರ ಪೂರ್ಣ ಹೆಸರು. ಮೂಲತಃ ಉತ್ತರ ಐರಿಶ್​ನವರು. 1964, ಮೇ 25ರಂದು ಇವರು ಜನಿಸಿದರು. 58 ವರ್ಷದ ರೇಮಂಡ್​​ ಸ್ಟೀವನ್ಸನ್​​ ಸಾವನ್ನಪ್ಪಿರುವುದು ಸಿನಿ ತಾರೆಯರಿಗೆ ನೋವುಂಟು ಮಾಡಿದೆ. ಮತ್ತೊಂದು ಬೇಸರದ ಸಂಗತಿ ಎಂದರೆ ರೇಮಂಡ್​​ ಸ್ಟೀವನ್ಸನ್​​ ಇನ್ನು 3 ದಿನಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ಅದಕ್ಕೂ ಮುನ್ನವೇ ರೇಮಂಡ್​​ ಸ್ಟೀವನ್ಸನ್​​ ಇಹಲೋಕ ತ್ಯಜಿಸಿದ್ದಾರೆ.

ರೇಮಂಡ್​​ ಸ್ಟೀವನ್ಸನ್​​ ನಿನ್ನೆ ಇಟಲಿಯಲ್ಲಿ ನಿಧನರಾಗಿದ್ದಾರೆ. ಆರ್​ಆರ್​ಆರ್​ ಸಿನಿಮಾದಲ್ಲಿ ನಟಿಸಿ ಎಲ್ಲರಿಗೂ ಅಚ್ಚುಮೆಚ್ಚು ಎಂದೆನಿಸಿಕೊಂಡಿದ್ದ ಈ ನಟ ಮೂವರು ಮಕ್ಕಳನ್ನು ಹೊಂದಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ 

59ನೇ ಹುಟ್ಟುಹಬ್ಬಕ್ಕೆ 3 ದಿನ ಬಾಕಿ.. ಅಷ್ಟರಲ್ಲೇ ಇಹಲೋಕ ತ್ಯಜಿಸಿದ RRR ಚಿತ್ರದ ಖಳನಟ ರೇ ಸ್ಟೀವನ್ಸನ್​

https://newsfirstlive.com/wp-content/uploads/2023/05/Rajamouli.jpg

Load More