newsfirstkannada.com

ಅಕ್ಷಯ್ ಕುಮಾರ್ ಕಪಾಳಕ್ಕೆ ಬಾರಿಸಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ; ಕಾರಣವೇನು?

Share :

12-08-2023

    ಅಕ್ಷಯ್ ಕುಮಾರ್ ಅಭಿನಯದ ಓ ಮೈ ಗಾಡ್ 2 ಯಡವಟ್ಟು

    ಓ ಮೈ ಗಾಡ್.. ಅಕ್ಷಯ್ ಕುಮಾರ್ ಟಾರ್ಗೆಟ್ ಆಗಿದ್ದು ಯಾಕೆ?

    ಸಿನಿಮಾದ 13 ನಿಮಿಷಗಳಿಗೆ ಕತ್ತರಿ ಹಾಕಿರುವ ಸೆನ್ಸಾರ್ ಮಂಡಳಿ

ಆಗ್ರಾ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ಹಿಂದೂ ಸಂಘಟನೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಗ್ರಾದ ರಾಷ್ಟ್ರೀಯ ಹಿಂದೂ ಪರಿಷತ್ ಖಡಕ್ ಎಚ್ಚರಿಕೆ ನೀಡಿದ್ದು, ಅಕ್ಷಯ್ ಕುಮಾರ್ ಅವರಿಗೆ ಯಾರಾದ್ರೂ ಕಪಾಳಮೋಕ್ಷ ಮಾಡಿದ್ರೆ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ. ನಿನ್ನೆಯಷ್ಟೇ ಅಕ್ಷಯ್ ಕುಮಾರ್ ಅಭಿನಯದ ಓ ಮೈ ಗಾಡ್ 2 ಸಿನಿಮಾ ದೇಶಾದ್ಯಂತ ರಿಲೀಸ್ ಆಗಿದೆ. ಭರ್ಜರಿ ಪ್ರದರ್ಶನ ಕಾಣುತ್ತಿರುವ ಓ ಮೈ ಗಾಡ್ 2 ಬಾಕ್ಸ್‌ ಆಫೀಸ್‌ನಲ್ಲೂ ಸಾಕಷ್ಟು ಸದ್ದು ಮಾಡ್ತಿದೆ. ಇದು ಮತ್ತೊಂದು ಬಾಲಿವುಡ್ ಹಿಟ್ ಸಿನಿಮಾಗಳ ಲಿಸ್ಟ್‌ಗೆ ಸೇರೋ ಸಾಧ್ಯತೆಗಳಿವೆ. ಈ ಮಧ್ಯೆ, ರಾಷ್ಟ್ರೀಯ ಹಿಂದೂ ಪರಿಷತ್ ನಾಯಕರು ಅಕ್ಷಯ್ ಕುಮಾರ್ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಬಾಲಿವುಡ್‌ನ ಓ ಮೈ ಗಾಡ್ 2 ಸಿನಿಮಾದಲ್ಲಿ ಅಕ್ಷಯ್‌ ಕುಮಾರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಕಂಠನ ಅವತಾರದಲ್ಲಿ ಒಂದು ಹಾಡನ್ನು ಓ ಮೈ ಗಾಡ್ 2 ತಂಡ ಚಿತ್ರೀಕರಿಸಿದ್ದು, ಅಕ್ಷಯ್ ಕುಮಾರ್ ಭರ್ಜರಿ ಸ್ಟೆಪ್ಸ್ ಕೂಡ ಹಾಕಿದ್ದಾರೆ. ಈ ಶಿವನ ಅವತಾರವನ್ನೇ ಹಿಂದೂ ಸಂಘಟನೆಗಳು ಖಂಡಿಸಿದ್ದಾರೆ. ಭೋಲೆನಾಥನ ವೇಷದಲ್ಲಿ ಕಾಣಿಸಿಕೊಂಡಿರುವ ಅಕ್ಷಯ್ ಕುಮಾರ್ ತಪ್ಪು ಸಂದೇಶ ನೀಡಿದ್ದಾರೆ. ಶಿವನಿಗೆ ಕೊಳಚೆ ನೀರಿನಲ್ಲಿ ಸ್ನಾನ ಮಾಡಿಸೋ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದು ಆ ಶಿವನಿಗೆ ಮಾಡಿರುವ ಅವಮಾನ ಎಂದು ಆರೋಪಿಸಲಾಗಿದೆ.

ಅಕ್ಷಯ್ ಕುಮಾರ್ ಅವರು ಭೋಲೆನಾಥನಾಗಿ ನಟಿಸಿರೋದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ಖಂಡಿಸಲಾಗಿದೆ. ನಿನ್ನೆಯೇ ಥಿಯೇಟರ್‌ಗಳಿಗೆ ಮುತ್ತಿಗೆ ಹಾಕಿದ್ದ ಹಿಂದೂ ಸಂಘಟನೆಯ ಮುಖಂಡರು ಅಕ್ಷಯ್ ಕುಮಾರ್ ಪ್ರತಿಮೆ ಹಾಗೂ ಸಿನಿಮಾ ಪೋಸ್ಟರ್‌ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಓ ಮೈ ಗಾಡ್ 2 ಸಿನಿಮಾ ಪ್ರದರ್ಶನ ನಿಲ್ಲಿಸಬೇಕು. ಕೇಂದ್ರ ಸರ್ಕಾರ ಈ ಸಿನಿಮಾವನ್ನೇ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದರು. ಇಂದು ಆಗ್ರಾದ ರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ಗೋವಿಂದ ಪರಾಶರ ಅವರು ಒಂದು ಬಹುಮಾನವನ್ನು ಘೋಷಿಸಿದ್ದಾರೆ. ಅಕ್ಷಯ್ ಕುಮಾರ್ ಅವರಿಗೆ ಯಾರಾದ್ರೂ ಕಪಾಳಮೋಕ್ಷ ಮಾಡಿದ್ರೆ 10 ಲಕ್ಷ ರೂಪಾಯಿ ಪ್ರಶಸ್ತಿ ಕೊಡುವುದಾಗಿ ಹೇಳಿದ್ದಾರೆ.

2012ರಲ್ಲಿ ಬಿಡುಗಡೆಯಾಗಿದ್ದ ಓ ಮೈ ಗಾಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೃಷ್ಣನ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಓ ಮೈ ಗಾಡ್ 2 ನಲ್ಲಿ ಶಿವನ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಓ ಮೈ ಗಾಡ್ 2 ಸೆನ್ಸಾರ್ ಮಾಡಿದ್ದ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ಕೊಟ್ಟಿದ್ದು, 13 ನಿಮಿಷಗಳಿಗೆ ಕತ್ತರಿ ಹಾಕಲು ಹೇಳಿತ್ತು. ಇದೀಗ ಹಿಂದೂ ಸಂಘಟನೆಗಳು ಈ ಸಿನಿಮಾವನ್ನೇ ಬ್ಯಾನ್ ಮಾಡವಂತೆ ಒತ್ತಾಯಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಷಯ್ ಕುಮಾರ್ ಕಪಾಳಕ್ಕೆ ಬಾರಿಸಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ; ಕಾರಣವೇನು?

https://newsfirstlive.com/wp-content/uploads/2023/08/Akshay-Kumar-1.jpg

Load More