newsfirstkannada.com

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಟ್ರಾಫಿಕ್ ಪೊಲೀಸರ ಜೊತೆ ಫೀಲ್ಡ್​ಗೆ ಇಳಿಯಲಿದ್ದಾರೆ RTO ಅಧಿಕಾರಿಗಳು..!

Share :

18-07-2023

    ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುವರಿ ತಪಾಸಣೆ ಸೂಚನೆ

    ಒಂದು ವರುಷಕ್ಕೆ ₹4.35 ಲಕ್ಷ ವಾಹನ ತಪಾಸಣೆ ಟಾರ್ಗೆಟ್

    ಈ ಮೊದಲು ಮಾಡುತ್ತಿದ್ದ ತಪಾಸಣೆ ಡಬಲ್ ಮಾಡಲು ನಿರ್ಧಾರ

ಬೆಂಗಳೂರು: ಒಂದೊಂದೆ ಗ್ಯಾರಂಟಿ‌ ಜಾರಿ ಮಾಡಿ‌ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಳ್ತಿದೆ. ಶಕ್ತಿ ಬಳಿಕ ಗೃಹ ಜ್ಯೋತಿ. ಅನ್ನಭಾಗ್ಯದ ಹಣ ಕೂಡ ಜನರ ಅಕೌಂಟ್​ಗೆ ಸೇರಿದೆ. ಮುಂದಿನ ದಿನಗಳಲ್ಲಿ ಗೃಹ‌ಲಕ್ಷ್ಮಿಗೂ ಚಾಲನೆ ಸಿಗುತ್ತೆ. ಇಷ್ಟೆಲ್ಲ ಉಚಿತ ಭಾಗ್ಯ ಕೊಡಿತ್ತಿರುವ ಸರ್ಕಾರಕ್ಕೆ ಆದಾಯದ ಸಂಗ್ರಹದ ಟೆನ್ಶನ್ ಶುರುವಾಗಿದೆ. ಹೀಗಾಗಿ ಹಣ ಸಂಗ್ರಹಕ್ಕೆ ಕೆಲ‌ ಇಲಾಖೆಗೆಗಳನ್ನ ಟಾರ್ಗೆಟ್ ಮಾಡಿದೆ.

ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದ ಮೇಯನ್​ ಫೋಕಸ್​ ಸಾರಿಗೆ ಇಲಾಖೆ. ಬಜೆಟ್​ನಲ್ಲಿ ಈ ವರ್ಷ 11,500 ಕೋಟಿ ಆದಾಯ ಸಂಗ್ರಹಕ್ಕೆ ಟಾರ್ಗೆಟ್ ನೀಡಿದೆ. ಹೀಗಾಗಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತಪಾಸಣೆ ತೀವ್ರಗೊಳಿಸಲು ಇಲಾಖೆ ನಿರ್ಧಾರ ಮಾಡಿದೆ. ಇದು ವಾಹನ ಸವಾರರ ತಲೆನೋವಿಗೂ ಕಾರಣವಾಗಿದೆ. ಇನ್ಮುಂದೆ, ಟ್ರಾಫಿಕ್ ಪೊಲೀಸರ ಜೊತೆ RTO ಅಧಿಕಾರಿಗಳು ಫಿಲ್ಡ್​ಗೆ ಇಳಿಯಲಿದ್ದಾರೆ.

ಈ ಹಿಂದೆ 10,500 ಕೋಟಿ ರೂಪಾಯಿ ಟಾರ್ಗೆಟ್ ಇತ್ತು.‌ ಈಗ ಹೆಚ್ಚುವರಿ 1000 ಲಕ್ಷ ಆದಾಯ ಸಂಗ್ರಹಕ್ಕೆ ಟಾಸ್ಕ್‌ ‌ನೀಡಲಾಗಿದೆ.‌ ಒಂದು ವರುಷಕ್ಕೆ 4.35 ಲಕ್ಷ ವಾಹನ ತಪಾಸಣೆ ಟಾರ್ಗೆಟ್ ನೀಡಿದೆ.‌ ಈ ಹಿಂದೆ ಸಾರಿಗೆ ಅಧಿಕಾರಿಗಳು ವರುಷಕ್ಕೆ 2.50 ಲಕ್ಷ ವಾಹನ ತಪಾಸಣೆ ಮಾಡ್ತಿದ್ದರು.‌ ಅಲ್ಲದೆ ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುವರಿ ತಪಾಸಣೆ ಸೂಚನೆ. ಈ ಮೊದಲು ಮಾಡುತ್ತಿದ್ದ ತಪಾಸಣೆ ಡಬಲ್ ಮಾಡಲು ನಿರ್ಧಾರ ಮಾಡಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ವಿಶೇಷ ತಪಾಸಣೆ ತಂಡ ಹೆಚ್ಚುವರಿ ನೇಮಕಕ್ಕೆ ಪ್ಲಾನ್ ಮಾಡಲಾಗಿದೆ.

ಈಗ ಹೆಚ್ಚುವರಿ ಒಂದು ಸಾವಿರ ಕೋಟಿ ಆದಾಯ ಸಂಗ್ರಹದ್ದೇ ಅಧಿಕಾರಿಗಳಿಗೆ ಟೆನ್ಶನ್ ಶುರುವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತಪಾಸಣೆ ತೀವ್ರಗೊಳಿಸಲು ನಿರ್ಧಾರ ಮಾಡಲಾಗಿದೆ. ಅತಿ ಹೆಚ್ಚು ವಾಹನ ಇರೋ ಬೆಂಗಳೂರು ನಗರವೇ ಮೇನ್ ಟಾರ್ಗೆಟ್ ಆಗಿದೆ.‌ ರಾಜಧಾನಿಯಲ್ಲಿ ಬರೋಬ್ಬರಿ 1.05 ಲಕ್ಷ ವಾಹನಗಳಿದ್ದು, ಒಂದು ವೇಳೆ ವಾಹನ ದಾಖಲೆ ಇಲ್ಲದೆ ಸಂಚರಿಸಿದ್ರೆ ದಂಡ ಫಿಕ್ಸ್ ಆಗಿದೆ.‌ ಹೀಗಾಗಿ, ಮನೆಯಿಂದ ಹೊರ ಹೋಗುವ ಮುನ್ನ ಸರಿಯಾದ ದಾಖಲೆ ಜೊತೆಗೆ ಇರಿಸಿಕೊಂಡಿದ್ದರೆ ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಟ್ರಾಫಿಕ್ ಪೊಲೀಸರ ಜೊತೆ ಫೀಲ್ಡ್​ಗೆ ಇಳಿಯಲಿದ್ದಾರೆ RTO ಅಧಿಕಾರಿಗಳು..!

https://newsfirstlive.com/wp-content/uploads/2023/07/Traffic-rules.jpg

Load More