ಹಾಸನಾಂಬೆಯನ್ನು ಕಾಣಲು ನೆರೆದಿದ್ದ ಭಕ್ತರು
ಸರತಿ ಸಾಲಿನಲ್ಲಿ ದೇವಿಯನ್ನು ಕಣ್ತುಂಬಿಕೊಳ್ಳಲು ನಿಂತ ಜನರು
ಕರೆಂಟ್ ಶಾಕ್ ವದಂತಿಯಿಂದ ಎದ್ದು ಬಿದ್ದು ಓಡಿದ ಭಕ್ತರು
ಹಾಸನ: ಹಾಸನಾಂಬೆ ದೇವಾಲಯದಲ್ಲಿ ಕರೆಂಟ್ ಶಾಕ್ ವದಂತಿಯಿಂದ ಧಿಡೀರ್ ನೂಕು ನುಗ್ಗಲಾಗಿದೆ. ಈ ವೇಳೆ ಧರ್ಮ ದರ್ಶನ ಸರತಿ ಸಾಲಿನ ಬಳಿ ನಿಂತಿದ್ದ ಮಹಿಳೆಯರು ಎದ್ದು ಬಿದ್ದು ಓಡಲೆತ್ನಿಸಿದ್ದಾರೆ. ಓಡುವ ಬರದಲ್ಲಿ ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ.
ಜಗತ್ ಪ್ರಸಿದ್ಧ ಹಾಸನಾಂಬೆಯನ್ನು ಕಾಣಲು ದಿನಾಲು ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಅದರಂತೆಯೆ ಇಂದು ಕೂಡ ಸಾಕಷ್ಟು ಜನರು ದೇವರನ್ನು ಕಾಣಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆ ಕರೆಂಟ್ ಶಾಕ್ ಹೊಡೆಯುತ್ತಿದೆ ಎಂಬ ವದಂತಿ ಮಾತು ಕೇಳಿ ಜನರು ಕಾಲ್ಕಿತ್ತಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.
ಇನ್ನು ಕಾಲ್ತುಳಿತಕ್ಕೆ ಒಳಗಾದ ಕೆಲವರನ್ನು ಸ್ಥಳೀಯರು ಹೊರಗೆಳೆದ್ದಾರೆ. ಭಕ್ತರನ್ನು ಈ ವೇಳೆ ಭಯಬೀತರಾಗಿದ್ದಲ್ಲದೆ, ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ