newsfirstkannada.com

ಕಿಂಗ್ ಕೊಹ್ಲಿ ಯಾಕೆ ಹಿಂಗೆ..? ವಿರಾಟ್ ಅಭಿಮಾನಿಗಳು ಓದಲೇಬೇಕಾದ ಸ್ಟೋರಿ ಇದು..!

Share :

30-10-2023

  ಹಿಂದಿನಂತೇ ಇದ್ಯಾ ವಿರಾಟ್​ ಸಾಮರ್ಥ್ಯ..?

  35ನೇ ವಸಂತಕ್ಕೆ ಕಾಲಿಡಲು ‘6 ಹೆಜ್ಜೆ’ ಬಾಕಿ..!

  ರನ್​ ಕದಿಯೋ ಕಲೆಗೆ ಎದುರಾಳಿಗಳು ದಂಗು..!

ರನ್​ಮಷೀನ್​​​ ವಿರಾಟ್​ ಕೊಹ್ಲಿ ಬರ್ತ್​​​ ಡೇಗೆ ಕೆಲವೇ ದಿನಗಳು ಬಾಕಿ. ನವೆಂಬರ್​​ 5ರಂದು ಕಿಂಗ್​ ಕೊಹ್ಲಿ 35ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಬಾರಿಯ ಈ ಹುಟ್ಟುಹಬ್ಬ ಖುಷಿಗಿಂತ, ಅಭಿಮಾನಿಗಳ ವಲಯದಲ್ಲಿ ಬೇಸರ ಹೆಚ್ಚಿಸಿದೆ. ಕೊಹ್ಲಿಗೆ ವಯಸ್ಸಾಯ್ತು ಅನ್ನೋದು ಈ ಬೇಸರಕ್ಕೆ ಕಾರಣ. ಆದ್ರೆ ಬೇಸರಕ್ಕೆ ಒಳಗಾಗೋ ಅಗತ್ಯವೇ ಇಲ್ಲ. ಕೊಹ್ಲಿಗೆ ವಯಸ್ಸೇ ಆಗಿಲ್ಲ.

ಕಳಪೆ ಫಾರ್ಮ್​​ನಿಂದ ಹೊರ ಬಂದಾಗಿದೆ. ಮಾನಸಿಕ ಸಮಸ್ಯೆಯ ಯುದ್ಧವನ್ನೂ ಗೆದ್ದಾಗಿದೆ. ಕ್ಯಾಪ್ಟನ್ಸಿ ಜಂಜಾಟದಿಂದ ಬಿಡಿಸಿಕೊಂಡಾಗಿದೆ. ಫ್ರಿ ಬರ್ಡ್​ ಆಗಿರೋ ಕಿಂಗ್​ ಕೊಹ್ಲಿ ರಣಾಂಗಣದಲ್ಲಿ ರಣವಿಕ್ರಮನಂತೆ ಆರ್ಭಟಿಸ್ತಿದ್ದಾರೆ. ​ನಿನ್ನೆಯ ಪಂದ್ಯದಲ್ಲಿ ಅನ್​ಫಾರ್ಚುನೆಟ್ಲಿ ಕೊಹ್ಲಿ ಡಕೌಟ್​ ಆದ್ರು. ಆದ್ರೆ ಉಳಿದ ಪಂದ್ಯಗಳಲ್ಲಿ ನಡೆದಿದ್ದು ಕೊಹ್ಲಿಯದ್ದೇ ಕಾರು ಬಾರು.

ಕಿಂಗ್​ ಕೊಹ್ಲಿ 35ನೇ ಹುಟ್ಟುಹಬ್ಬಕ್ಕೆ ಜಸ್ಟ್​ 6 ದಿನ ಮಾತ್ರ ಬಾಕಿ. ಆದ್ರೆ ಕೊಹ್ಲಿಯ ಈ ಹುಟ್ಟುಹಬ್ಬ ಸಂಭ್ರಮ-ಸಂತೋಷಕ್ಕಿಂತ ಅಭಿಮಾನಿಗಳಲ್ಲಿ ಸ್ವಲ್ಪ ಬೇಸರ ತರಿಸಿದೆ. ಕೊಹ್ಲಿಗೆ ವಯಸ್ಸಾಯ್ತು. ನಿವೃತ್ತಿ ಹತ್ತಿರವಾಯ್ತು ಅನ್ನೋದು ಇದ್ರ ಹಿಂದಿನ ರೀಸನ್​​.. ಆದ್ರೆ ವಿಶ್ವಕಪ್​​ ಅಖಾಡದ ಅಂಕಿ-ಅಂಶಗಳು ಯಾರು ಹೇಳಿದ್ದು ಕೊಹ್ಲಿಗೆ ವಯಸ್ಸಾಯ್ತು ಅಂತಾ ಪ್ರಶ್ನಿಸ್ತಿವೆ.

ರನ್​ ಕದಿಯೋ ಕಲೆಗೆ ಎದುರಾಳಿಗಳು ದಂಗು

ವಿಶ್ವ ಸಮರದಲ್ಲಿ ವಿರಾಟ್​​ ಕೊಹ್ಲಿ ರೆಡ್​ ಹಾಟ್​ ಫಾರ್ಮ್​ನಲ್ಲಿ ಮಿಂಚು ಹರಿಸ್ತಿದ್ದಾರೆ. ಸಾಲಿಡ್​​​​ ಬ್ಯಾಟಿಂಗ್​ ನಡೆಸ್ತೆರೋ ವಿರಾಟ್​ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಬೌಂಡರಿ-ಸಿಕ್ಸರ್​​ ಲೆಕ್ಕಾಚಾರವನ್ನು ಬಿಟ್ಟು ಬಿಡಿ. ವಿಕೆಟ್​ ಮಧ್ಯೆ ಓಡಿ ರನ್​ ಕದಿಯೋ ಪರಿಗೆ ಎದುರಾಳಿಗಳು ದಂಗಾಗಿ ಹೋಗಿದ್ದಾರೆ. 35ನೇ ವಯಸ್ಸಿನಲ್ಲೂ ಕೊಹ್ಲಿ ಯುವ ಆಟಗಾರರೂ ನಾಚುವಂತೆ ಬಿಟ್ವೀನ್ ​ದ ವಿಕೆಟ್ಸ್​ ಓಡ್ತಿದ್ದಾರೆ.

‘ರನ್ನಿಂಗ್’​ ಮಷೀನ್​ ಕೊಹ್ಲಿ..!

ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 116 ಎಸೆತಗಳಲ್ಲಿ 85 ರನ್​ಗಳಿಸಿದ್ದ ವಿರಾಟ್, ಇದ್ರಲ್ಲಿ 47 ರನ್​ಗಳನ್ನ ಸಿಂಗಲ್​ನಿಂದಲೇ ಗಳಿಸಿದ್ರು. ಅಫ್ಘಾನಿಸ್ತಾನ ವಿರುದ್ಧ 56 ಎಸೆತಗಳಲ್ಲಿ ಗಳಿಸಿದ ಅಜೇಯ 55 ರನ್​ಗಳಲ್ಲಿ 23 ಸಿಂಗಲ್​ ಓಡಿದ್ರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 97 ಎಸೆತ ಎದುರಿಸಿ ಗಳಿಸಿದ 103 ರನ್​ಗಳ ಪೈಕಿ 45 ರನ್​ ಸಿಂಗಲ್​ ನಿಂದಲೇ ಬಂದಿದ್ವು. ನ್ಯೂಜಿಲೆಂಡ್​ ವಿರುದ್ಧ 104 ಎಸೆತಗಳಿಂದ ಗಳಿಸಿದ 95 ರನ್​ಗಳಲ್ಲಿ 43 ರನ್​ಗಳನ್ನ ಸಿಂಗಲ್​ ತೆಗೆದು ಕಲೆ ಹಾಕಿದ್ರು. ಈ ಬಾರಿಯ ವಿಶ್ವಕಪ್​ನಲ್ಲಿ 6 ಪಂದ್ಯಗಳನ್ನಾಡಿರೋ ಕೊಹ್ಲಿ 354 ರನ್​ಗಳಿಸಿದ್ದಾರೆ. ಈ ಪೈಕಿ 158 ರನ್​ಗಳು ಬಂದಿರೋದು ರನ್ನಿಂಗ್​ ಬಿಟ್ವೀನ್​ ದ ವಿಕೆಟ್ಸ್​ನಿಂದ. ಅಲ್ಲಿಗೆ ಕೊಹ್ಲಿಯ ಕ್ಯಾಲಿಬರ್​ ಎಂತದ್ದು? ಕೊಹ್ಲಿಗೆ ನಿಜವಾಗ್ಲೂ ವಯಸ್ಸಾಗಿದ್ಯಾ?

ಮುಂದೆ ಬದಲಾಗ್ತಾರಾ ವಿರಾಟ್​ ಕೊಹ್ಲಿ..?

ಸದ್ಯಕ್ಕಂತೂ ಕೊಹ್ಲಿ ವಿಶ್ವದ ಫಿಟ್ಟೆಸ್ಟ್​ ಕ್ರಿಕೆಟರ್​ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹಾಗಿದ್ರೂ ದೇಹಕ್ಕೆ ವಯಸ್ಸಾದ ಕಟು ಸತ್ಯವನ್ನ ಒಪ್ಪಿಕೊಳ್ಳಲೇಬೇಕು. ಬ್ಯುಸಿ ಶೆಡ್ಯೂಲ್​ನ ನಡುವೆ ಇಂಜುರಿ ಫ್ರಿಯಾಗಿರಿಸಿಕೊಳ್ಳೋದು ಪ್ರತಿಯೊಬ್ಬ ಕ್ರಿಕೆಟಿಗನ ಮುಂದಿರೋ ದೊಡ್ಡ ಸವಾಲು. ಇದ್ರಿಂದ ಕೊಹ್ಲಿ ಕೂಡ ಹೊರತಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕೊಹ್ಲಿಯ ನಿಧಾನವಾಗಿ ಬದಲಾಗೋ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಂಗ್ ಕೊಹ್ಲಿ ಯಾಕೆ ಹಿಂಗೆ..? ವಿರಾಟ್ ಅಭಿಮಾನಿಗಳು ಓದಲೇಬೇಕಾದ ಸ್ಟೋರಿ ಇದು..!

https://newsfirstlive.com/wp-content/uploads/2023/10/VIRAT_KOHLI-8-1.jpg

Load More