newsfirstkannada.com

BREAKING: ಚಂದ್ರನ ಮೇಲೆ ಅಪ್ಪಳಿಸಿದ ರಷ್ಯಾದ ಲೂನಾ-25; ಇಸ್ರೋಗೆ ಸೆಡ್ಡು ಹೊಡೆಯೋ ಯೋಜನೆ ವಿಫಲ

Share :

20-08-2023

    ನಿನ್ನೆಯೇ ಸಂಪರ್ಕ ಕಳೆದುಕೊಂಡಿದ್ದ ರಷ್ಯಾದ ಲೂನಾ-25

    ಬರೋಬ್ಬರಿ 47 ವರ್ಷಗಳ ಬಳಿಕ ನೌಕೆ ಕಳುಹಿಸಿದ್ದ ರಷ್ಯಾ

    ಚಂದ್ರಯಾನ-3 ವೇಗದಲ್ಲಿ ಇಸ್ರೋ ಮತ್ತೊಂದು ಯಶಸ್ಸು

ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗುವ ರಷ್ಯಾದ ಚಂದ್ರಯಾನ ಯೋಜನೆ ವಿಫಲವಾಗಿದೆ. ರಷ್ಯಾದ ಲೂನಾ-25 ನೌಕೆ ಚಂದ್ರನ ಮೇಲೆ ಅಪ್ಪಳಿಸಿ ಬಿದ್ದಿದೆ. ನಿನ್ನೆಯೇ ರಷ್ಯಾದ ನೌಕೆ ತನ್ನ ಸಂಪರ್ಕ ಕಳೆದುಕೊಂಡಿತ್ತು. ಆದರೆ ರಷ್ಯಾದ ಬಾಹ್ಯಾಕಾಶ ಸಂಸ್ಥೆ ಇದನ್ನ ಖಚಿತ ಪಡಿಸಿರಲಿಲ್ಲ. ಇಂದು ಲೂನಾ-25 ನೌಕೆ ವಿಫಲವಾಗಿದ್ದು, ರಷ್ಯಾದ ಬಾಹ್ಯಾಕಾಶ ಸಂಸ್ಥೆ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.

ಇದನ್ನೂ ಓದಿ: Chandrayaan-3: ವಿಕ್ರಂ ಲ್ಯಾಂಡರ್​​​ನ ವೇಗ ತಗ್ಗಿಸುವ ಕೊನೆಯ ಪ್ರಕ್ರಿಯೆ ಯಶಸ್ವಿ.. ರಷ್ಯಾದ ಲೂನಾ 25ನಲ್ಲಿ ತಾಂತ್ರಿಕ ದೋಷ..!

ಬರೋಬ್ಬರಿ 47 ವರ್ಷಗಳ ಬಳಿಕ ರಷ್ಯಾ ತನ್ನ ನೌಕೆಯನ್ನು ಚಂದ್ರನ ಬಳಿಗೆ ಕಳುಹಿಸಿತ್ತು. ಇದೇ ಆಗಸ್ಟ್ 11ರಂದು ರಷ್ಯಾದ ನೌಕೆ ಉಡಾವಣೆ ಯಶಸ್ವಿಯಾಗಿತ್ತು. ಭಾರತದ ಚಂದ್ರಯಾನಕ್ಕೂ ಮೊದಲು ರಷ್ಯಾದ ನೌಕೆ ಲ್ಯಾಂಡ್ ಮಾಡುವ ಯೋಜನೆ ಹೊಂದಲಾಗಿತ್ತು. ಆದರೆ, ರಷ್ಯಾದ ಲೂನಾ-25 ಚಂದ್ರನ ಮೇಲೆ ಅಪ್ಪಳಿಸಿದೆ. ಈ ಮೂಲಕ ರಷ್ಯಾದ ಬಹು ನಿರೀಕ್ಷಿತ ಯೋಜನೆ ವಿಫಲವಾಗಿದೆ.

ನಿನ್ನೆಯೇ ರಷ್ಯಾ ಕಳುಹಿಸಿರುವ ಲೂನಾ-25ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಲೂನಾ-25 ಪೂರ್ವ ಲ್ಯಾಂಡಿಂಗ್ ಕಕ್ಷೆಗೆ ಪ್ರವೇಶಿಸುವ ಪ್ರಯತ್ನದ ವೇಳೆ ತಾಂತ್ರಿಕ ದೋಷ ಎದುರಾಗಿತ್ತು. ತಜ್ಞರು ಸಮಸ್ಯೆಯನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ತಿಳಿಸಿತ್ತು. ಈ ಸವಾಲಿನ ನಡುವೆಯೂ ನಾಳೆ ಅಂದ್ರೆ ಆಗಸ್ಟ್​ 21ರಂದು ರಷ್ಯಾದ ಲೂನಾ-25 ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಆಗಲಿದೆ ಎಂದು ಹೇಳಲಾಗಿತ್ತು.

ಚಂದ್ರನ ದಕ್ಷಿಣ ಧ್ರುವದಲ್ಲಿ ಏನಿದೆ ಅನ್ನೋದನ್ನ ಪತ್ತೆ ಹಚ್ಚಲು ಭಾರತ ಮತ್ತು ರಷ್ಯಾ ಮುಂದಾಗಿತ್ತು. ಭಾರತಕ್ಕಿಂತ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ರಷ್ಯಾ ಇತಿಹಾಸ ಸೃಷ್ಟಿಸಲು ಯೋಜಿಸಿತ್ತು. ಆದ್ರೀಗ ರಷ್ಯಾದ ಯೋಜನೆ ವಿಫಲವಾಗಿದೆ. ಭಾರತದ ಚಂದ್ರಯಾನ-3 ಯಶಸ್ವಿಯಾಗಿ ಸಾಗುತ್ತಿದ್ದು, ಇಂದು 2ನೇ ಬಾರಿಗೆ ವಿಕ್ರಮ್ ಲ್ಯಾಂಡರ್ ವೇಗವನ್ನು ಇಸ್ರೋ ತಗ್ಗಿಸಿದೆ. ಚಂದ್ರನ ಮೇಲೆ ಇಳಿಯುವ ಸಮಯ ಕೂಡ ನಿಗದಿಯಾಗಿದೆ. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಂ ಲ್ಯಾಂಡರ್‌ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ವಿಕ್ರಂ ಲ್ಯಾಂಡರ್‌ ಸಾಫ್ಟ್ ಲ್ಯಾಂಡಿಂಗ್‌ಗೆ ಕೋಟ್ಯಾಂತರ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಚಂದ್ರನ ಮೇಲೆ ಅಪ್ಪಳಿಸಿದ ರಷ್ಯಾದ ಲೂನಾ-25; ಇಸ್ರೋಗೆ ಸೆಡ್ಡು ಹೊಡೆಯೋ ಯೋಜನೆ ವಿಫಲ

https://newsfirstlive.com/wp-content/uploads/2023/08/Luna-25-1.jpg

Load More