newsfirstkannada.com

Russia: ವ್ಯಾಗ್ನರ್ ಗುಂಪಿನ ಮೇಲೆ ರಷ್ಯಾ ಸೇನಾ ಹೆಲಿಕಾಪ್ಟರ್​​ಗಳ ಗುಂಡಿನ ದಾಳಿ!

Share :

24-06-2023

    ರಷ್ಯಾದಲ್ಲಿ ತಾರಕಕ್ಕೇರಿದ ವ್ಯಾಗ್ನರ್ ಗುಂಪು ಮತ್ತು ಸೇನೆಯ ಸಂಘರ್ಷ

    ವ್ಯಾಗ್ನರ್ ಗುಂಪಿನ ಮೇಲೆ ರಷ್ಯಾ ಸೇನಾ ಹೆಲಿಕಾಪ್ಟರ್​​ಗಳ ಗುಂಡಿನ ದಾಳಿ

    ವ್ಯಾಗ್ನರ್ ಗುಂಪು ಇರೋ ಕಡೆ ಹೊತ್ತಿ ಉರಿದ ಇಂಧನ ಟ್ಯಾಂಕ್​​ಗಳು..!

ಸದ್ಯ ವೊರೊನೆಜ್ ನಗರದ M4 ಹೆದ್ದಾರಿ ಸಮೀಪ ವ್ಯಾಗ್ನರ್ ಮಿಲಿಟರಿ ಬೆಂಗಾವಲು ಪಡೆ ಮೇಲೆ ರಷ್ಯಾ ಸೇನಾ ಹೆಲಿಕಾಪ್ಟರ್​ಗಳು ಗುಂಡು ಹಾರಿಸಿವೆ ಎಂದು ತಿಳಿದು ಬಂದಿದೆ. ರೋಸ್ಟೊವ್​​-ಮಾಸ್ಕೋ ಮಧ್ಯೆಯಿರೋ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇನ್ನು, ಗುಂಡು ಹಾರಿಸಿದ ಬೆನ್ನಲ್ಲೇ ವ್ಯಾಗ್ನರ್ ಮಿಲಿಟರಿ ಬೆಂಗಾವಲು ಪಡೆಯಿರೋ ಸ್ಥಳದಲ್ಲಿ ಇಂಧನ ಟ್ಯಾಂಕ್​ಗಳು ಹೊತ್ತಿ ಉರಿಯುತ್ತಿವೆ. ಈಗ ಇಂಧನ ಟ್ಯಾಂಕ್​​ಗಳನ್ನು ನಂದಿಸಲು 100ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಪ್ರಯತ್ನಿಸುತ್ತಿವೆ.

ಮಾಸ್ಕೋದಿಂದ ಸುಮಾರು 500 ಕಿಮೀ ದೂರದಲ್ಲಿರೋ ವೊರೊನೆಜ್ ನಗರದಲ್ಲಿ ಪರಿಸ್ಥಿತಿ ಮಿತಿ ಮೀರಿದೆ. ವೊರೊನೆಜ್​ನ ಬೀದಿ ಬೀದಿಗಳಲ್ಲಿ ಹೆಚ್ಚಿನ ಭದ್ರತಾ ಪಡೆ ನಿಯೋಜನೆ ಮಾಡಲಾಗಿದೆ. ಈ ಮೂಲಕ ರಷ್ಯಾ ಸೇನೆಗೆ ಕೌಂಟರ್​​ ಕೊಡಲಾಗುತ್ತಿದೆ.

ರಷ್ಯಾದಲ್ಲಿ ವ್ಯಾಗ್ನರ್ ಗುಂಪು ಮತ್ತು ಸೇನೆ ನಡುವೆ ನಡೆಯುತ್ತಿದ್ದ ಸಂಘರ್ಷ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್, ರಷ್ಯಾ ಸೈನ್ಯ ವಿರುದ್ಧ ದಂಗೆಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ವ್ಯಾಗ್ನರ್ ಗ್ರೂಪ್​ ಇದು ರಷ್ಯಾದ ಖಾಸಗಿ ಮಿಲಿಟರಿ ಪಡೆಯಾಗಿದೆ.

ಮಾತ್ರವಲ್ಲ, ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ‘ವ್ಯಾಗ್ನರ್ ಗುಂಪಿನ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಮತ್ತೊಂದು ಕಡೆ ವ್ಯಾಗ್ನರ್ ಗುಂಪಿನ ಮುಖ್ಯಸ್ಥನನ್ನು ಬಂಧಿಸಲು ಪುಟಿನ್ ಸರ್ಕಾರ ಆದೇಶ ಮಾಡಿದೆ. ಸಶಸ್ತ್ರ ದಂಗೆಯ ಆರೋಪದ ಮೇಲೆ ಬಂಡಾಯ ಪಕ್ಷದ ಮುಖ್ಯಸ್ಥನನ್ನು ಬಂಧಿಸುವಂತೆ ನಿರ್ದೇಶಿಸಲಾಗಿದೆ ಎಂದು ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Russia: ವ್ಯಾಗ್ನರ್ ಗುಂಪಿನ ಮೇಲೆ ರಷ್ಯಾ ಸೇನಾ ಹೆಲಿಕಾಪ್ಟರ್​​ಗಳ ಗುಂಡಿನ ದಾಳಿ!

https://newsfirstlive.com/wp-content/uploads/2023/06/Russia-2.jpg

Load More