ಭಾರತದ ಮಿಷನ್ಗಿಂತ ಎರಡು ದಿನ ಮೊದಲೇ ಲ್ಯಾಂಡಿಂಗ್ ಪ್ಲಾನ್
50 ವರ್ಷಗಳ ಬಳಿಕ ಚಂದ್ರಯಾನದಲ್ಲಿ ರಷ್ಯಾ ವಿಜ್ಞಾನಿಗಳು ವಿಫಲ
ರಷ್ಯಾ ಪ್ರಮುಖ ವಿಜ್ಞಾನಿ ಮರೋವ್ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲು
ಭಾರತದ ಚಂದ್ರಯಾನ-3ಗೆ ಟಕ್ಕರ್ ಕೊಡಲು ರಷ್ಯಾ ವಿಜ್ಞಾನಿಗಳು ಲಾಂಚ್ ಮಾಡಿದ್ದ ಲೂನಾ-25 ಮಿಷನ್ ಲ್ಯಾಂಡಿಂಗ್ ವೇಳೆ ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಪತನಗೊಂಡಿದೆ. ಸದ್ಯ ಪತನಗೊಂಡಿರುವುದಕ್ಕೆ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕಾಸ್ಮಾಸ್ನ ಮುಖ್ಯಸ್ಥ, ಯುರಿ ಬೋರಿಸೋವಾ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೇ ಕಳೆದ 50 ವರ್ಷಗಳಿಂದ ಚಂದ್ರ ಬಗ್ಗೆ ರಷ್ಯಾ ಯಾವುದೇ ಕಾರ್ಯಕ್ರಮ ಕೈಗೊಳ್ಳದಿರುವುದೇ ಇದಕ್ಕೆ ಮುಖ್ಯ ಕಾರಣ ಕಿಡಿ ಕಾರಿದ್ದಾರೆ.
ರಾಸ್ಕಾಸ್ಮಾಸ್ನ ಮುಖ್ಯಸ್ಥ, ಯುರಿ ಬೋರಿಸೋವಾ ಟಿವಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಕಳೆದ 50 ವರ್ಷಗಳಿಂದ ರಷ್ಯಾ ಚಂದ್ರನ ಬಗ್ಗೆ ಯಾವುದೇ ಸಂಶೋಧನೆ ಅಥವಾ ಮಿಷನ್ ಉಡಾವಣೆ ಮಾಡುವ ಕಾರ್ಯಕ್ರಮ ಕೈಗೊಂಡಿಲ್ಲ. 1960 ರಿಂದ 1970ರ ವರೆಗೆ ನಮ್ಮ ವಿಜ್ಞಾನಿಗಳ ಅನುಭವವನ್ನು ಹೊಂದಲು ನಮಗೆ ಸಾಧ್ಯವಾಗಲಿಲ್ಲ. ಅಲ್ಲದೇ ಲೂನಾ-25 ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗುವ ವೇಳೆ 84 ಸೆಕೆಂಡುಗಳ ಬದಲಿಗೆ 127 ಸೆಕೆಂಡುಗಳ ವೇಗದಲ್ಲಿ ಚಲಿಸಿದ್ದರಿಂದ ಕ್ರ್ಯಾಶ್ ಆಯಿತು. ಈ ಎಲ್ಲ ಕಾರಣಗಳಿಂದ ಲೂನಾ-25 ಯೋಜನೆ ವಿಫಲವಾಗಲು ಮುಖ್ಯ ಕಾರಣ ಎಂದು ಯುರಿ ಬೋರಿಸೋವಾ ಹೇಳಿದ್ದಾರೆ.
ಲೂನಾ-25 ಕ್ರ್ಯಾಶ್ ಸುದ್ದಿ ತಿಳಿಯುತ್ತಿದ್ದಂತೆ ರಷ್ಯಾದ ಬಾಹ್ಯಾಕಾಶ ವಿಜ್ಞಾನಿ ಮೈಕೆಲ್ ಮರೋವ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲೂನಾ ಯೋಜನೆ ಬಗ್ಗೆ ಸಾಕಷ್ಟ ಕನಸು ಕಂಡಿದ್ದ ಮೈಕೆಲ್ ಅದರ ಪತನ ಸುದ್ದಿಯಿಂದ ಆಘಾತಕ್ಕೆ ಒಳಗಾದ್ರು.
ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕಾಸ್ಮಾಸ್, ಲೂನಾ-25 ಚಂದ್ರನ ಮಿಷನ್ ಅನ್ನು ಆಗಸ್ಟ್ 11 ರಂದು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಇದು ಚಂದ್ರನ ದಕ್ಷಿಣ ಧ್ರುವದಲ್ಲಿನ ವಾತಾವರಣ, ಮಣ್ಣು, ಪ್ಲಾಸ್ಮಾ ಮತ್ತು ಧೂಳಿನ ಕಣಗಳು ಸೇರಿದಂತೆ ಇತರೆ ವಸ್ತುಗಳ ಬಗ್ಗೆ ಅಧ್ಯಯನ ಮಾಡುವ ಉದ್ದೇಶ ಹೊಂದಿತ್ತು. ಭಾರತದ ಚಂದ್ರಯಾನ-3 ಲ್ಯಾಂಡ್ (ಆಗಸ್ಟ್ 23) ಆಗುವ ಎರಡು ದಿನದ ಮೊದಲೇ ಅಂದರೆ ಆಗಸ್ಟ್ 21 ರಂದು ರಷ್ಯಾದ ಸ್ಮೂತ್ ಲ್ಯಾಂಡಿಂಗ್ ಆಗಬೇಕಿತ್ತು. ಆದ್ರೆ ಅದು ವಿಫಲವಾಗಿದೆ. ನಾಳೆ ಭಾರತದ ಚಂದ್ರಯಾನ-3 ಲ್ಯಾಂಡ್ ಆಗುವ ನಿರೀಕ್ಷೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ