/newsfirstlive-kannada/media/post_attachments/wp-content/uploads/2023/09/ROHIT_GILL.jpg)
ಟೀಮ್​ ಇಂಡಿಯಾದ ಬ್ಯುಸಿ ಕ್ರಿಕೆಟ್​ ಶೆಡ್ಯೂಲ್​ ನಡುವೆಯೇ ಬಿಸಿಸಿಐ ವಲಯದಲ್ಲಿ ಭವಿಷ್ಯದ ಲೆಕ್ಕಾಚಾರ ಜೋರಾಗಿದೆ. ಕ್ಯಾಪ್ಟನ್​ ​ರೋಹಿತ್​ ಶರ್ಮಾ ಉತ್ತರಾಧಿಕಾರಿಯ ಹುಡುಕಾಟ ಜೋರಾಗಿ ನಡೀತಾಯಿದೆ. ಇಷ್ಟು ದಿನ ಪ್ರಿನ್ಸ್​​ ಶುಭಮನ್​ ಗಿಲ್​, ಟೀಮ್​ ಇಂಡಿಯಾದ ಯುವರಾಜ ಎನ್ನಲಾಗಿತ್ತು. ಇದೀಗ ರೇಸ್​​ಗೆ ಅಸಲಿ ರಾಜ ಋತುರಾಜ್​ ಗಾಯಕ್ವಾಡ್​ ಎಂಟ್ರಿ ಕೊಟ್ಟಿದ್ದಾರೆ.
ಇಂಡೋ-ಬಾಂಗ್ಲಾ ಟೆಸ್ಟ್​​ ಫೈಟ್​ನ ನಡುವೆಯೆ ಪ್ರತಿಷ್ಟಿತ ದೇಶಿ ಟೂರ್ನಿ ಇರಾನಿ ಟ್ರೋಫಿಗೆ ಸಿದ್ಧತೆ ಶುರುವಾಗಿದೆ. ಮುಂಬೈ ಹಾಗೂ ರೆಸ್ಟ್​ ಆಫ್​ ಇಂಡಿಯಾ ನಡುವೆ ಕದನ ನಡೆಯಲಿದೆ. ಅಕ್ಟೋಬರ್​ 1ರಿಂದ ಲಕ್ನೋನಲ್ಲಿ ನಡೆಯೋ ಪಂದ್ಯಕ್ಕೆ ರೆಸ್ಟ್​ ಆಫ್​ ಇಂಡಿಯಾ ತಂಡ ಪ್ರಕಟವಾಗಿದೆ. ಬೆನ್ನಲ್ಲೇ, ಟೀಮ್​ ಇಂಡಿಯಾ ಫ್ಯೂಚರ್​ ಕ್ಯಾಪ್ಟನ್​ ಚರ್ಚೆ ಶುರುವಾಗಿದೆ.
ಇದನ್ನೂ ಓದಿ:2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
ರೋಹಿತ್ ಶರ್ಮಾ ಬಳಿಕ ಟೀಮ್​ ಇಂಡಿಯಾದ ಕ್ಯಾಪ್ಟನ್​ ಯಾರು? ಈ ಪ್ರಶ್ನೆ ಕಳೆದ ಕೆಲ ತಿಂಗಳಿಂದ ಭಾರತೀಯ ಕ್ರಿಕೆಟ್​ ವಲಯದಲ್ಲಿ ಗಿರಕಿ ಹೊಡೀತಾಯಿದೆ. ಮೊದಲೆಲ್ಲಾ ಕೆಲ ಸೀನಿಯರ್​ ಪ್ಲೇಯರ್​​ಗಳ ಹೆಸರೇ ಮುಂಚೂಣಿಯಲ್ಲಿ ಕೇಳಿ ಬರ್ತಾ ಇದ್ವು. ಕೆ.ಎಲ್​ ರಾಹುಲ್​, ಶ್ರೇಯಸ್​​ ಅಯ್ಯರ್​, ಜಸ್​ಪ್ರಿತ್​ ಬೂಮ್ರಾ. ಅಷ್ಟೇ ಏಕೆ.. ರಿಷಭ್​ ಪಂತ್​, ಹಾರ್ದಿಕ್​ ಪಾಂಡ್ಯ ಹೆಸರು ಕೂಡ ರೇಸ್​​ನಲ್ಲಿತ್ತು. ಇವ್ರೆಲ್ಲಾ ಇದೀಗ ರೇಸ್​​ನಿಂದ ಹೊರ ಬಿದ್ದಿದ್ದಾರೆ. ರೇಸ್​ನಲ್ಲಿದ್ದ ಸೀನಿಯರ್​ ಆಟಗಾರರು ಹೊರ ಬಿದ್ದ ಬಳಿಕ, ರೋಹಿತ್​ ಉತ್ತರಾಧಿಕಾರಿ ಪಟ್ಟವನ್ನೇರಲು ಯಂಗ್​ಸ್ಟರ್​ಗಳ ನಡುವೆ ಫೈಟ್​ ಏರ್ಪಟ್ಟಿದೆ.
ಭವಿಷ್ಯದ ನಾಯಕನ ಚರ್ಚೆಗೆ ಕಿಚ್ಚು ಹಚ್ಚಿದ ಇರಾನಿ ಟ್ರೋಫಿ
ಇರಾನಿ ಟ್ರೋಫಿ ಟೂರ್ನಿಗೆ ಸೀನಿಯರ್​​ ಸೆಲೆಕ್ಷನ್​ ಕಮಿಟಿ ರೆಸ್ಟ್​ ಆಫ್​ ಇಂಡಿಯಾ ತಂಡವನ್ನ ಪ್ರಕಟಿಸಿದೆ. ಪ್ರಮುಖ ಆಟಗಾರರನ್ನ ಸೈಡ್​​ಲೈನ್​ ಮಾಡಿ ಯುವ ಆಟಗಾರ ಋತುರಾಜ್​ ಗಾಯಕ್ವಾಡ್​ಗೆ ನಾಯಕನ ಪಟ್ಟವನ್ನ ಕಟ್ಟಲಾಗಿದೆ. ಈ ಮೂಲಕ ಋತುರಾಜ್​ ಗಾಯಕ್ವಾಡ್​ನ​ ಟೀಮ್​ ಇಂಡಿಯಾದ ಭವಿಷ್ಯದ ನಾಯಕನನ್ನಾಗಿ ಬೆಳೆಸಲಾಗ್ತಿದೆ ಅನ್ನೋ ಪರೋಕ್ಷ ಸಂದೇಶ ರವಾನೆಯಾಗಿದೆ.
ರಣಜಿ, ದುಲೀಪ್​ ಟ್ರೋಫಿ, IPLನಲ್ಲಿ ನಾಯಕ
ರೆಸ್ಟ್​ ಆಫ್​ ಇಂಡಿಯಾ ತಂಡದ ನಾಯಕತ್ವ ಮಾತ್ರವಲ್ಲ. ಈ ಹಿಂದಿನ ದುಲೀಪ್​ ಟ್ರೋಫಿ ಟೂರ್ನಿಯಲ್ಲೂ ಇಂಡಿಯಾ ಸಿ ತಂಡಕ್ಕೆ ಋತುರಾಜ್​ ಸಾರಥಿಯಾಗಿದ್ರು. ಆಗಲೇ ಈ ಭವಿಷ್ಯದ ನಾಯಕನ ಚರ್ಚೆ ನಡೆದಿತ್ತು. ಐಪಿಎಲ್​ನಲ್ಲಿ ಧೋನಿ ಬಳಿಕ ಚೆನ್ನೈ ಸೂಪರ್​ ಕಿಂಗ್ಸ್​ನ ಋತುರಾಜ್ ಮುನ್ನಡೆಸ್ತಾ ಇದ್ದಾರೆ. ರಣಜಿ ಟ್ರೋಫಿ, ಸೈಯದ್​ ಮುಷ್ತಾಕ್ ಅಲಿ ಸೇರಿದಂತೆ ಡೊಮೆಸ್ಟಿಕ್​ ಟೂರ್ನಿಗಳಲ್ಲಿ ಮಹಾರಾಷ್ಟ್ರ ತಂಡಕ್ಕೆ ಋತುರಾಜ್​ ನಾಯಕನಾಗಿದ್ದಾರೆ. ಹೀಗಾಗಿ ಬಿಸಿಸಿಐ ಕಣ್ಣು ಋತುರಾಜ್​ ಮೇಲೆ ಬಿದ್ದಿದ್ದು, ಫ್ಯೂಚರ್​ ಕ್ಯಾಪ್ಟನ್ ಆಗಿ ಋತುರಾಜ್​ನ ಬೆಳೆಸೋ ಕೆಲಸ ಆರಂಭವಾಗಿದೆ.
ಇದನ್ನೂ ಓದಿ:ಕೊಹ್ಲಿಯನ್ನು ಕಾಣುವಾಸೆ.. 58km ಸೈಕಲ್​ ಏರಿ ಬಂದ 10ನೇ ತರಗತಿ ಬಾಲಕ
ಋತುರಾಜ್​ ನಾಯಕತ್ವದಲ್ಲಿ ಏಷ್ಯನ್​ ಗೇಮ್ಸ್​ ಗೆಲುವು
ಕಳೆದ ಏಷ್ಯನ್​ ಗೇಮ್ಸ್​ ವೇಳೆಯೂ ಅನುಭವಿ ಶಿಖರ್​ ಧವನ್​ ಟೀಮ್​ ಇಂಡಿಯಾವನ್ನು ಮುನ್ನಡೆಸ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಈ ವೇಳೆ ಶಾಕ್​ ಕೊಟ್ಟಿದ್ದ ಸೆಲೆಕ್ಷನ್​ ಕಮಿಟಿ ಸರ್​​ಪ್ರೈಸ್​ ರೀತಿಯಲ್ಲಿ ಋತುರಾಜ್​ ಗಾಯಕ್ವಾಡ್​ಗೆ ನಾಯಕತ್ವ ನೀಡಿತ್ತು. ಗಾಯಕ್ವಾಡ್​ ಸಾರಥ್ಯದಲ್ಲಿ ಟೀಮ್​ ಇಂಡಿಯಾ ಏಷ್ಯನ್​ ಗೇಮ್ಸ್​ನಲ್ಲಿ ಚಾಂಪಿಯನ್​ ಆಗಿತ್ತು.
‘ಯುವರಾಜ’ VS ‘ರಾಜ’ನ ನಡುವೆ ಬಿಗ್​ ಫೈಟ್​
ಋತುರಾಜ್​ ಮಾತ್ರವಲ್ಲ.. ಸೀನಿಯರ್​ ಸೆಲೆಕ್ಷನ್​ ಕಮಿಟಿ ಯುವ ಆಟಗಾರ ಶುಭ್​ಮನ್​ ಗಿಲ್​ನ ಕೂಡ ಭವಿಷ್ಯದ ನಾಯಕನನ್ನಾಗಿ ರೂಪಿಸ್ತಿದೆ. ಈಗಾಗಲೇ T20 ಹಾಗೂ ಏಕದಿನ ಫಾರ್ಮೆಟ್​ನಲ್ಲಿ ಎಲ್ಲರನ್ನ ಸೈಡ್​ಲೈನ್​ ಮಾಡಿ ಶುಭ್​ಮನ್​ ಗಿಲ್​ಗೆ ಉಪನಾಯಕನ ಪಟ್ಟವನ್ನ ಕಟ್ಟಲಾಗಿದೆ. ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್​ ಇಂಡಿಯಾ ನಾಯಕನಾಗಿ ಗಿಲ್​ ಜವಾಬ್ಧಾರಿ ನಿರ್ವಹಿಸಿದ್ದಾರೆ. ಐಪಿಎಲ್​ನಲ್ಲಿ ಶುಭ್​ಮನ್ ಗಿಲ್​, ಗುಜರಾತ್​ ತಂಡವನ್ನ ಮುನ್ನಡೆಸ್ತಾ ಇದ್ದು ನಾಯಕನ ರೇಸ್​​ನಲ್ಲೂ ಮುಂಚೂಣಿಯಲ್ಲಿದ್ದಾರೆ.
ಒಟ್ಟಿನಲ್ಲಿ ರೋಹಿತ್​ ಶರ್ಮಾ ಉತ್ತರಾಧಿಕಾರಿ ನೇಮಕಕ್ಕೆ ಬಿಸಿಸಿಐ ವಲಯದಲ್ಲಿ ಸಿದ್ಧತೆಯಂತೂ ಜೋರಾಗಿದೆ. ಲಾಂಗ್​ಟರ್ಮ್​ ಕ್ಯಾಪ್ಟನ್​ ಹುಡುಕಾಟದಲ್ಲಿರೋ ಬಾಸ್​​ಗಳು ಈ ಇಬ್ಬರು ಯುವ ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿರೋದಂತೂ ಸ್ಪಷ್ಟ. ಯುವರಾಜ ಶುಭ್​ಮನ್​ ಗಿಲ್​, ರಾಜ ಋತುರಾಜ್​ ಗಾಯಕ್ವಾಡ್​ ನಡುವಿನ ಫೈಟ್​ನಲ್ಲಿ ನಾಯಕತ್ವ ಯಾರಿಗೆ ಒಲಿಯುತ್ತೆ ಅನ್ನೋದು ಸದ್ಯಕ್ಕಂತೂ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಕ್ರಿಕೆಟ್ ಆಚೆ ಬೇರೆ ಕ್ರೀಡೆಯನ್ನು ಪ್ರೀತಿಸುವುದನ್ನೇ ಮರೆತರಾ ಭಾರತೀಯರು? ನೊಂದ ಹಾಕಿಪಟು ಹೇಳಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us