Advertisment

ಅಸಂಖ್ಯಾತ ಬಡ ರೋಗಿಗಳ ಬದುಕು ಬೆಳಗಿದ್ದ, ಶಂಕರ ನೇತ್ರಾಲಯ ಸಂಸ್ಥಾಪಕ ಡಾ.ಬದರಿನಾಥ್ ಇನ್ನಿಲ್ಲ

author-image
Ganesh
Updated On
ಅಸಂಖ್ಯಾತ ಬಡ ರೋಗಿಗಳ ಬದುಕು ಬೆಳಗಿದ್ದ, ಶಂಕರ ನೇತ್ರಾಲಯ ಸಂಸ್ಥಾಪಕ ಡಾ.ಬದರಿನಾಥ್ ಇನ್ನಿಲ್ಲ
Advertisment
  • ಡಾ.ಎಸ್.ಎಸ್.ಬದರಿನಾಥ್ ನಿಧನಕ್ಕೆ ಮೋದಿ ಕಂಬನಿ
  • ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು
  • ಬಡವರ, ನಿರ್ಗತಿಕರಿಗಾಗಿ ಮಿಡಿದಿದ್ದ ಡಾ. ಬದರಿನಾಥ್

ಶಂಕರ ನೇತ್ರಾಲಯದ ಸಂಸ್ಥಾಪಕ, ಪದ್ಮವಿಭೂಷಣ ಪುರಸ್ಕೃತ ಡಾ.ಎಸ್.ಎಸ್.ಬದರಿನಾಥ್ ಇಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು, ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಡಾ.ಎಸ್.ಎಸ್.ಬದರಿನಾಥ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಕಂಬನಿ ಮಿಡಿದಿದ್ದಾರೆ.

Advertisment

ದೇಶದಲ್ಲಿಯೇ ಅತೀ ದೊಡ್ಡ ಚಾರಿಟೇಬಲ್ ಹಾಸ್ಪಿಟಲ್ಸ್ ‘ಶಂಕರ್ ನೇತ್ರಾಲಯ’ವನ್ನು ಚೆನ್ನೈನಲ್ಲಿ ಹುಟ್ಟು ಹಾಕಿದ ಹೆಗ್ಗಳಿಕೆ ಡಾ.ಎಸ್​.ಎಸ್.ಬದರಿನಾಥ್​ ಅವರದ್ದಾಗಿತ್ತು. ಡಾ.ಬದರಿನಾಥ್ ವಿದೇಶದಲ್ಲಿ ವಿದ್ಯಾಭ್ಯಾಸ ಮತ್ತು ಸಂಶೋಧನೆಗಳನ್ನು ಪೂರ್ಣಗೊಳಿಸಿದ ನಂತರ ಭಾರತಕ್ಕೆ ಬಂದು 1978ರಲ್ಲಿ ಲಾಭ ರಹಿತ ಜನಸೇವೆಯಲ ಚಾರಿಟೇಬಲ್ ಹುಟ್ಟು ಹಾಕಿದ್ದರು.

ಯಾರು ಈ ಡಾ.ಬದರಿನಾಥ್..?

ಡಾ.ಬದರಿನಾಥ್ ಅವರು ವೈದ್ಯಕೀಯ ಸೇವೆಯಲ್ಲಿ ವಿಶೇಷವಾಗಿ ಕಾಣುತ್ತಾರೆ. ಶಂಕರ ನೇತ್ರಾಲಯ ಸ್ಥಾಪನೆ ಬಳಿಕ ಆರ್ಥಿಕವಾಗಿ ಹಿಂದುಳಿದವರಿಗೆ, ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆಯನ್ನು ಮಾಡಿಕೊಂಡು ಬಂದಿದ್ದರು. ಇಂದಿಗೂ ಕೂಡ ನೂರಾರು ರೋಗಿಗಳಿಗೆ ತಮ್ಮ ಚಾರಿಟೇಬಲ್ ಸಹಾಯದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಬದರಿನಾಥ್ ಫೆಬ್ರವರಿ 24, 1940 ರಂದು ಚೆನ್ನೈನಲ್ಲಿ ಜನಿಸಿದ್ದರು. ಅವರ ಪೂರ್ಣ ಹೆಸರು ಡಾ.ಸೆಂಗಮೇಡು ಶ್ರೀನಿವಾಸ್ ಬದರಿನಾಥ್. ತಂದೆ ಎಸ್‌.ವಿ.ಶ್ರೀನಿವಾಸ್ ರಾವ್, ಇವರು ಎಂಜಿನಿಯರ್ ಆಗಿದ್ದರು, ತಾಯಿ ವಕೀಲರೊಬ್ಬರ ಮಗಳಾಗಿದ್ದರು. ಡಾ.ಬದರಿನಾಥ್ ಚಿಕ್ಕವರಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡರು. ತಂದೆಯ ಮರಣದ ನಂತರ ಜೀವ ವಿಮೆಯಿಂದ ಬಂದ ಹಣದಲ್ಲಿ ವೈದ್ಯಕೀಯ ವ್ಯಾಸಂಗ ಪೂರೈಸಿದ್ದರು. ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ನ್ಯೂಯಾರ್ಕ್​ನಲ್ಲಿ ವೃತ್ತಿಜೀವನ ಪ್ರಾರಂಭಿಸಿದ್ದರು.

Advertisment

ಬಳಿಕ 1978ರಲ್ಲಿ ಡಾ.ಬದರಿನಾಥ್ ಹಾಗೂ ವೈದ್ಯರ ತಂಡ ಲಾಭ ರಹಿತ ಚಾರಿಟೇಬಲ್ ಸಂಸ್ಥೆಯನ್ನು ಹುಟ್ಟುಹಾಕುವ ನಿರ್ಧಾರ ಮಾಡಿತ್ತು. ಅದರಂತೆ ಶಂಕರ ನೇತ್ರಾಲಯ ತೆರೆದು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಶುರುಮಾಡಿದರು. ಪ್ರತಿನಿತ್ಯ 1200ಕ್ಕೂ ರೋಗಿಗಳು ಆಸ್ಪತ್ರೆಯ ಕದವನ್ನು ತಟ್ಟಿದ್ರೆ, ಅವರಲ್ಲಿ 100ಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಸರ್ಜರಿ ಮಾಡಿ ಕಳುಹಿಸುತ್ತಿದ್ದರು. ಅಷ್ಟೇ ಅಲ್ಲದೇ ತಜ್ಞರಿಂದ ಯುವ ವೈದ್ಯರಿಗೆ ತರಬೇತಿ ಕೂಡ ನೀಡಲಾಗುತ್ತಿದೆ. ಡಾ.ಬದರಿನಾಥ್ ಅವರು ಸೇನಾ ಪಡೆಗಳಲ್ಲಿ ನೇತ್ರಶಾಸ್ತ್ರಜ್ಞರಾಗಿಯೂ ಸೇವೆ ಸಲ್ಲಿಸಿದ್ದರು.

ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದರು

ಡಾ.ಬದರೀನಾಥ್ ಸೇವೆಯನ್ನು ಮೆಚ್ಚಿದ ಭಾರತ ಸರ್ಕಾರ 1983ರಲ್ಲಿ ಪದ್ಮಶ್ರೀ ಮತ್ತು 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು. ತಮಿಳುನಾಡು ಡಾ.ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯವು 1995 ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತ್ತು. ಡಾ.ಬದರಿನಾಥ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

Advertisment

https://twitter.com/vazhapadi/status/1726800229603893264

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment