newsfirstkannada.com

ಸೆಹ್ವಾಗ್​ ಹೇಳಿದ ಆ ಮಾತಿಗೆ ‘ಹುಕ್​ ಶಾಟ್’​ ಬಾರಿಸಿ ಸಿಕ್ಸರ್​ ಸಿಡಿಸಿದ ಸಚಿನ್​.. ಅಪರೂಪದ ಪ್ರಸಂಗ ಇದು..!

Share :

04-08-2023

    ಭಾರತ-ಪಾಕ್​ ವಿಶ್ವಕಪ್​ ಪಂದ್ಯದಲ್ಲಿ ನಡೆದಿದ್ದು ಏನು ಗೊತ್ತಾ?

    ನಾನ್​ ಸ್ಟ್ರೈಕ್ ​ಎಂಡ್​​​ನಲ್ಲಿ ನಿನ್ನ ಅಪ್ಪ ಸಚಿನ್​ ಇದ್ದಾರೆ- ಸೆಹ್ವಾಗ್

    ಸಿಕ್ಸ್ ಬಾರಿಸಿಕೊಂಡು ತೆಪ್ಪಗಾದ ಪಾಕಿಸ್ತಾನದ​ ಮಾಜಿ ವೇಗಿ

ಇಂಡೋ-ಪಾಕ್​ ನಡುವೆ ಕ್ರಿಕೆಟ್​ ಪಂದ್ಯ ಅಂದ್ರೆ ಅಲ್ಲಿ ಟಾಕ್​ ವಾರ್​ ಫಿಕ್ಸ್​. ಪರಸ್ಪರ ಕಾಲೆಳೆಯೋದು ಮಾಮೂಲಿ ಅನ್ನಿಸುವಷ್ಟರ ಮಟ್ಟಿಗೆ ನಡೆಯುತ್ತದೆ. ಅತಿರೇಕದ ಹಂತ ತಲುಪಿದ ಘಟನೆಗಳೂ ಇವೆ. 2003ರ ವಿಶ್ವಕಪ್​ ಪಂದ್ಯದಲ್ಲಿ ನಡೆದ ಸ್ಲೆಡ್ಜಿಂಗ್​ನ​ ಒಂದು ಕಥೆ ಇಲ್ಲಿದೆ.

ಭಾರತ- ಪಾಕಿಸ್ತಾನ ನಡುವಿನ​ ಪಂದ್ಯ ಕುತೂಹಲ ಕೆರಳಿಸೋದೇ ಸ್ಲೆಡ್ಜಿಂಗ್ ಕಾರಣಕ್ಕೆ. ಅದ್ರಲ್ಲೂ ಈ ಹಿಂದೆ ಶೋಯೆಬ್​ ಅಖ್ತರ್​ ಆಡ್ತಿದ್ದ ಕಾಲದಲ್ಲಿ ಟಾಕ್​ ವಾರ್​ ಪಕ್ಕಾ ಆಗಿತ್ತು. ಸುಖಾಸುಮ್ಮನೆ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನು ಕೆಣಕ್ತಿದ್ದ ಪಾಕ್​ ವೇಗಿ, ಇರಲಾರದೆ ಇರುವೆ ಬಿಟ್ಟುಕೊಳ್ಳೋ ಕೆಲಸ ಮಾಡ್ತಿದ್ರು. 2003ರ ವಿಶ್ವಕಪ್​ ಟೂರ್ನಿಯಲ್ಲೂ ಇಂತದ್ದೇ ಯಡವಟ್ಟನ್ನ ಅಖ್ತರ್​ ಮಾಡಿಕೊಂಡಿದ್ರು.

ಸೆಹ್ವಾಗ್​ರನ್ನ ಕೆಣಕಿದ ಅಖ್ತರ್

2003ರ ವಿಶ್ವಕಪ್​ನ ಇಂಡೋ -ಪಾಕ್​ ಪಂದ್ಯದ ವೇಳೆ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್​ ತೆಂಡೂಲ್ಕರ್​ ಬ್ಯಾಟಿಂಗ್​ ನಡೆಸ್ತಿದ್ದರಂತೆ. ಈ ವೇಳೆ ಬೌನ್ಸರ್​ಗಳನ್ನು ಹಾಕ್ತಿದ್ದ ಅಖ್ತರ್​, ಹುಕ್ ಶಾಟ್​ ಹೊಡೆದು ತೋರಿಸು ಎಂದು ಸೆಹ್ವಾಗ್​​ರನ್ನ ಪದೇ ಪದೇ ಕೆಣಕ್ತಿದ್ರಂತೆ. ಇದಕ್ಕೆ ಆಗ ಉತ್ತರಿಸಿದ್ದ ಸೆಹ್ವಾಗ್​, ನಾನ್​ ಸ್ಟ್ರೈಕ್ ಎಂಡ್​​​ನಲ್ಲಿ ನಿನ್ನ ಅಪ್ಪ ಸಚಿನ್​ ತೆಂಡೂಲ್ಕರ್​​ ಇದ್ದಾರೆ. ಅವರಿಗೆ ಹೋಗಿ ಹೇಳು, ಅವರು ಹೊಡೆದು ತೋರಿಸ್ತಾರೆ ಎಂದಿದ್ರಂತೆ.

ಅದಾದ ನೆಕ್ಸ್ಟ್​ ಓವರ್​ನಲ್ಲೇ ಸಚಿನ್​ ತೆಂಡುಲ್ಕರ್​​, ಅಖ್ತರ್​ ಬೌನ್ಸರ್​ಗೆ ಹುಕ್​ ಶಾಟ್​ ಬಾರಿಸಿ ಸಿಕ್ಸರ್​ ಸಿಡಿಸಿದ್ರಂತೆ. ಆಗ ಮತ್ತೆ ಅಖ್ತರ್​ ಬಳಿ ತೆರಳಿದ್ದ ಸೆಹ್ವಾಗ್, ಮಗ ಎಂದಿಗೂ ಮಗನೇ.. ಅಪ್ಪ ಅಪ್ಪನೇ ಎಂದು ಹೇಳಿದ್ರಂತೆ. ಈ ಸ್ಲೆಡ್ಜಿಂಗ್​ ಘಟನೆಯನ್ನ ಸೆಹ್ವಾಗ್​ ಹೇಳಿಕೊಂಡಿದ್ದಾರೆ. ಇನ್ನು, ಪಂದ್ಯದಲ್ಲಿ ಸಾಲಿಡ್​ ಬ್ಯಾಟಿಂಗ್​ ನಡೆಸಿದ್ದ ಸಚಿನ್​ 98 ರನ್​ ಸಿಡಿಸಿದ್ರೆ, ಟೀಮ್​ ಇಂಡಿಯಾ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೆಹ್ವಾಗ್​ ಹೇಳಿದ ಆ ಮಾತಿಗೆ ‘ಹುಕ್​ ಶಾಟ್’​ ಬಾರಿಸಿ ಸಿಕ್ಸರ್​ ಸಿಡಿಸಿದ ಸಚಿನ್​.. ಅಪರೂಪದ ಪ್ರಸಂಗ ಇದು..!

https://newsfirstlive.com/wp-content/uploads/2023/08/SACHIN_SEHWAG.jpg

Load More