newsfirstkannada.com

ಬೆಂಗಳೂರು: ಚಿರತೆ ಸಾವಿನ ಬೆನ್ನಲ್ಲೇ ಅರಣ್ಯ ಇಲಾಖೆ ವಿರುದ್ಧ ಭಾರೀ ಜನಾಕ್ರೋಶ

Share :

02-11-2023

    ಎರಡು ಬಾರಿ ವೈದ್ಯರ ಮೇಲೆ ದಾಳಿ ನಡೆಸಿದ ಚಿರತೆ

    ದಾಳಿ ಬೆನ್ನಲ್ಲೇ ಚಿರತೆ ಮೇಲೆ ಶೂಟ್ ಮಾಡಿದ್ದ ಅಧಿಕಾರಿಗಳು

    ನಿಜವಾಗಿ ಕಾಡು ಮೃಗಗಳು ಯಾರು ಅಂತ ಪ್ರಶ್ನಿಸಿ ಆಕ್ರೋಶ

ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದ್ದ ಚಿರತೆ ಪ್ರಕರಣ ನಿನ್ನೆ ಅದರ ಸಾವಿನಲ್ಲಿ ಅಂತ್ಯಗೊಂಡಿದೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನ ಕೃಷ್ಣಾ ರೆಡ್ಡಿ ಲೇಔಟ್​ನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಅದನ್ನು ಸೆರೆ ಹಿಡಿಯಲು ನಾನಾ ರೀತಿಯ ಕಸರತ್ತು ಮಾಡಲಾಗಿತ್ತು. ರೆಸ್ಕ್ಯೂ ಟೀಂ ನಿಯೋಜನೆಗೊಳಿಸಿದ್ದ ಅರಣ್ಯ ಇಲಾಖೆ ಥರ್ಮಲ್ ಡ್ರೋನ್ ಬಳಸಿ ಹಗಲು-ರಾತ್ರಿಯೆನ್ನದೆ ಚಿರತೆಯನ್ನು ಹುಡುಕಿತ್ತು. ಇನ್ನು ರೆಸ್ಕ್ಯೂ ಸಂಧರ್ಭದಲ್ಲಿ ವೈದ್ಯರ ಮೇಲೆ ಎರಡೆರಡು ಬಾರಿ ಚಿರತೆ ದಾಳಿ ನಡೆಸಿದ ಹಿನ್ನಲೆಯಲ್ಲಿ ಅಧಿಕಾರಿಗಳು ಚಿರತೆಯನ್ನು ಗುಂಡಿಟ್ಟು ಕೊಂದಿದ್ದರು.

ಇದೀಗ ಅರಣ್ಯ ಇಲಾಖೆ ಮೇಲೆ ಆಕ್ರೋಶ ಭುಗಿಲೆದ್ದಿದೆ. ಕಾಡುಪ್ರಾಣಿಗಳಿಗೆ ರಕ್ಷಣೆ ಒದಗಿಸಬೇಕಾಗಿದ್ದ ಇಲಾಖೆಯೇ ಕೊಲ್ಲಲು ಮುಂದಾದರೆ ಇವರು ರಕ್ಷಣೆ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಚಿರತೆಯನ್ನು ಜೀವಂತ ಹಿಡಿಯಲು ವಿಫಲರಾದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು: ಚಿರತೆ ಸಾವಿನ ಬೆನ್ನಲ್ಲೇ ಅರಣ್ಯ ಇಲಾಖೆ ವಿರುದ್ಧ ಭಾರೀ ಜನಾಕ್ರೋಶ

https://newsfirstlive.com/wp-content/uploads/2023/11/leopard.jpg

Load More