newsfirstkannada.com

ನೊಂದ ಕುಟುಂಬಗಳಿಗೆ ಬೆಳಕಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ- ಶಾಸಕ ಬೇಳೂರು ಗೋಪಾಲಕೃಷ್ಣ

Share :

28-06-2023

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಗ್ರಾಮೀಣ ಜನರ ಬದುಕಿಗೆ ಬೆಳಕಾಗಿದೆ

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಒಂದು ದೊಡ್ಡ ಶಕ್ತಿಯಾಗಿದೆ ಎಂದ ಶಾಸಕ

    ಮದ್ಯ ವ್ಯಸನಕ್ಕೆ ದಾಸರಾಗಿ ಗಂಡಸರು ಕುಟುಂಬವನ್ನೂ ಬೀದಿಗೆ ತಂದಿದ್ದಾರೆ

ಶಿವಮೊಗ್ಗ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಗ್ರಾಮೀಣ ಜನರ ಬದುಕಿನ ಬೆಳಕಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿಯೇ ಈ ಸಂಘ ಒಂದು ದೊಡ್ಡ ಶಕ್ತಿಯಾಗಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಇಲ್ಲಿನ ರಾಮೇಶ್ವರ ಸಭಾಭವನದಲ್ಲಿ ನಡೆದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯೋಗದಲ್ಲಿ ನಡೆಯುತ್ತಿರುವ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತಾಡಿದ್ದಾರೆ.

ಮದ್ಯ ವ್ಯಸನಕ್ಕೆ ದಾಸರಾಗಿ ಗಂಡಸರು ತಮ್ಮ ಬದುಕಿನ ಜತೆ ತನ್ನ ಕುಟುಂಬವನ್ನೂ ಸಹ ಬೀದಿಗೆ ತರುತ್ತಿದ್ದಾರೆ. ಇಂತಹ ಮದ್ಯಕ್ಕೆ ದಾಸರಾಗಿದ್ದವರ ಅದರಿಂದ ಬಿಡಿಸುವ ಪ್ರಯತ್ನ ಮಾಡಿ, ಎಷ್ಟೋ ಕುಟುಂಬದ ಹೆಣ್ಣುಮಕ್ಕಳ ಕಣ್ಣೀರು ಒರೆಸುತಿರುವ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯವಾದದು ಶಿಬಿರಾರ್ಥಿಗಳು ಧರ್ಮಸ್ಥಳ ಮುಂಜುನಾಥ ಸ್ವಾಮಿಯ ಮೇಲೆ ತ್ಯಜಿಸಬೇಕು. ಮುಂದೆ ಸಮಾಜದಲ್ಲಿ ಮದ್ಯ ವ್ಯಸನವನ್ನು ಹೆಸರುಗಳಿಸಿ ಉತ್ತಮ ಕುಟುಂಬಕ್ಕೂ ಧರ್ಮಸಲ ಸಂಘಕ ಕೀರ್ತಿ ತರುವಂತಾಗಬೇಕು ಎಂದರು.

1672 ನೇ ಮದ್ಯವರ್ಜನಾ ಶಿಬಿರದ ಅಧ್ಯಕ್ಷರಾದ ವಕೀಲ ಮೋಹನ ಶೆಟ್ಟಿ ಮಾತನಾಡಿ ನಮ್ಮ ಈ ಮದ್ಯ ವರ್ಜನಾ ಶಿಬಿರದಲ್ಲಿ 65 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಎಲ್ಲರೂ ಮದ್ಯ ವ್ಯಸನವನ್ನು ಸಂಪೂರ್ಣವಾಗಿ ತ್ಯಜಿಸಿ ನವಜೀವನದ ಸದಸ್ಯರಾಗಿ ಹೊಸ ಜೀವನವನ್ನು ಪ್ರಾರಂಭಿಸಿ, ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಬದುಕುವಂತಾಗಲಿ ಎಂದು ಹೇಳಿದರು. ಹಾಗೂ ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗುತ್ತಿರುವ ಕಳ್ಳಬಟ್ಟಿ ಜಾಲವನ್ನು ಭೇದಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವಂತೆ ಶಾಸಕರು ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಿನ್ಸೆಂಟ್ ಪಾಯಸ್‌ ಹಾಗೂ ಕಾಂಗ್ರೆಸ್ ಮುಖಂಡ ಮಾಸ್ತಿಕಟ್ಟೆ ಸುಭ್ರಮಣ್ಯ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾರಾಯಣ ಕಾಮತ್, ನಿಟ್ಟೂರು ಗ್ರಾಪಂ ಅದಕ್ಕೆ ಏನೊಧಾ ಗುರುಮೂರ್ತಿ, 1672 ನೇ ಮಧ್ಯ ವರ್ಜನ ಶಿಬಿರದ ಗೌರವಾದ್ಯಕ್ಷರಾದ ಬೈಸ್ಕಲ್ ಸುರೇಶ್ ಉಪಸ್ಥಿತರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೊಂದ ಕುಟುಂಬಗಳಿಗೆ ಬೆಳಕಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ- ಶಾಸಕ ಬೇಳೂರು ಗೋಪಾಲಕೃಷ್ಣ

https://newsfirstlive.com/wp-content/uploads/2023/06/shivammoga-1.jpg

Load More