newsfirstkannada.com

ಮೆಗಾ ಕುಟುಂಬದಲ್ಲಿ ಬಿರುಕು.. ಸಾಯ್​ ಧರ್ಮ ತೇಜ್​​, ಅಲ್ಲು ಅರ್ಜುನ್​ ಮಧ್ಯೆ ಏನಾಯ್ತು?

Share :

Published June 13, 2024 at 7:20pm

Update June 13, 2024 at 7:23pm

  ಅಲ್ಲು ಅರ್ಜುನ್​ ಹಾಗೂ ಪತ್ನಿ ಸ್ನೇಹಾ ರೆಡ್ಡಿ ಮೇಲೆ ಸಾಯ್​ ಧರ್ಮ್​​ ಮುನಿಸು!

  ಅಷ್ಟು ಕ್ಲೋಸ್​ ಆಗಿದ್ದ ಇವರು ದಿಢೀರ್ ದೂರ ಆಗಲು ಕಾರಣವೇನು ಗೊತ್ತಾ?

  ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್​ ಮಾಡುವ ಮೂಲಕ ಫ್ಯಾನ್ಸ್​ ಬೇಸರ

ಒಂದಲ್ಲಾ ಒಂದು ವಿಚಾರಕ್ಕೆ ಮೆಗಾ ಸ್ಟಾರ್​ ಕುಟುಂಬ ಸದಾ ಸುದ್ದಿಯಲ್ಲಿ ಇರುತ್ತದೆ. ದಶಕದ ಹಿಂದೆ ಜನಸೇನಾ ಪಾರ್ಟಿ ಸ್ಥಾಪಿಸಿದ್ರೂ ಈ ಚುನಾವಣೆಯಲ್ಲಷ್ಟೇ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್‌ ಅವರಿಗೆ ಜಯ ಸಿಕ್ಕಿದೆ. ಇದೇ ಖುಷಿಯಲ್ಲಿದ್ದ ಕುಟುಂಬಸ್ಥರು ಭರ್ಜರಿ ಸ್ವಾಗತ ಕೋರಿದ್ದರು. ಅದ್ಧೂರಿಯಾಗಿ ಸ್ವಾಗತ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ಸಂದರ್ಭದಲ್ಲಿ ಮೆಗಾ ಫ್ಯಾಮಿಲಿ ಜತೆ ಅಲ್ಲು ಅರ್ಜುನ್​ ಇರಲಿಲ್ಲ.

ಇದನ್ನೂ ಓದಿ: ದರ್ಶನ್‌ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?

ಆದರೆ ಮೆಗಾಸ್ಟಾರ್​ ಫ್ಯಾಮಿಲಿಯಲ್ಲಿ ಇದೀಗ ಮತ್ತೊಂದು ಸುದ್ದಿ ವೈರಲ್​ ಆಗುತ್ತಿದೆ. ಅದು ಮೆಗಾಸ್ಟಾರ್ ಕುಟುಂಬದಲ್ಲಿ ಬಿರುಕು ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಟ್ವಿಟರ್​ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ನಟ ಸಾಯ್​​ ಧರ್ಮ ತೇಜ್​​ ಅವರು ಅಲ್ಲು ಅರ್ಜುನ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಇದನ್ನು ಖುದ್ದು ಅಭಿಮಾನಿಗಳು ಪತ್ತೆ ಹಚ್ಚಿ ಬೇಸರ ಹೊರ ಹಾಕುತ್ತಿದ್ದಾರೆ.

ಹೌದು, ಇಷ್ಟು ದಿನ ನಟ ಸಾಯ್​ ಧರ್ಮ್​​ ತೇಜ್ ಅಲ್ಲು ಅರ್ಜುನ್​ ಕುಟುಂಬಸ್ಥರನ್ನು ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ ಹಾಗೂ ಟ್ವೀಟರ್ ಖಾತೆಯಲ್ಲಿ ಫಾಲೋ ಮಾಡುತ್ತಿದ್ದರು. ಆದರೆ ಇದೀಗ ಏಕಾಏಕಿ ಅನ್‌ಫಾಲೋ ಮಾಡಿಬಿಟ್ಟಿದ್ದಾರೆ. ಅಷ್ಟು ಕ್ಲೋಸ್​ ಆಗಿದ್ದ ಇಬ್ಬರು ದಿಢೀರ್ ಅಂತ ದೂರ ಆಗಿದ್ದೇಕೆ ಅಂತ ಅಭಿಮಾನಿಗಳು ಕಾಮೆಂಟ್​ ಮಾಡಿ ಬೇಸರ ಹೊರ ಹಾಕುತ್ತಿದ್ದಾರೆ. ಆದರೆ ನಟ ಸಾಯ್​ ಧರ್ಮ್​​ ತೇಜ್ ಅವರು ಅಲ್ಲು ಅರ್ಜುನ್​ ಜತೆ ಸ್ನೇಹಾ ರೆಡ್ಡಿ ಅವರನ್ನು ಕೂಡ ಅನ್ ಫಾಲೋ ಮಾಡಿದ್ದು, ಅಲ್ಲು ಕುಟುಂಬದ ಅಲ್ಲು ಸಿರಿಶ್ ಅನ್ನು ಮಾತ್ರ ಫಾಲೋ ಮಾಡುತ್ತಿರುವುದನ್ನು ಕಂಡು ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕ್ರೂರ ಕೊಲೆ‌ ಕೇಸ್‌ಗೆ ಮೇಜರ್ ಟ್ವಿಸ್ಟ್.. ತನಿಖಾಧಿಕಾರಿ ದಿಢೀರ್ ಬದಲಾವಣೆ; ಯಾಕೆ?

ಇದರ ಹಿಂದಿನ ಕಾರಣ ಏನಿರಬಹುದು?

ಪೀಠಾಪುರ ವಿಧಾನಸಭಾ ಕ್ಷೇತ್ರದಿಂದ ಪವನ್ ಕಲ್ಯಾಣ್‌ ಚುನಾವಣೆಗೆ ನಿಂತುಕೊಂಡಿದ್ದರು. ಆದರೆ ಸ್ವಂತ ಕುಟುಂಬಸ್ಥರ ಪರವಾಗಿ ಅಲ್ಲು ಅರ್ಜುನ್​ ಪ್ರಚಾರ ಮಾಡಿರಲಿಲ್ಲ. ಬದಲಾಗಿ ವೈಎಸ್‌ಆರ್‌ಸಿಪಿ ಕ್ಷೇತ್ರದಲ್ಲಿರೋ ತನ್ನ ಸ್ನೇಹಿತನ ಪರ  ಪ್ರಚಾರದಲ್ಲಿ ನಟ ಅಲ್ಲು ಅರ್ಜುನ್​ ಕಾಣಿಸಿಕೊಂಡಿದ್ರು. ಬಳಿಕ ಆಂಧ್ರಪ್ರದೇಶದ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಪವನ್ ಕಲ್ಯಾಣ ಕುಟುಂಬಸ್ಥರ ಸೆಲೆಬ್ರೇಶನ್​ನಲ್ಲಿಯೂ ಕೂಡ ಅಲ್ಲು ಅರ್ಜುನ್​ ಕುಟುಂಬಸ್ಥರು ಭಾಗಿಯಾಗಿರಲಿಲ್ಲ. ಮೊನ್ನೆ ಆಂಧ್ರಪ್ರದೇಶದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿಯೂ ನಟ ಅಲ್ಲು ಅರ್ಜುನ್​ ಕಾಣಿಸಿಕೊಂಡಿರಲಿಲ್ಲ. ಆ ಕಾರ್ಯಕ್ರಮಕ್ಕೆ ಸಾಯ್​​ ಧರ್ಮ ತೇಜ್, ವರುಣ್ ತೇಜ್ ಮತ್ತು ಉಳಿದ ಬಂಧುಗಳು ಹಾಜರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಗಾ ಕುಟುಂಬದಲ್ಲಿ ಬಿರುಕು.. ಸಾಯ್​ ಧರ್ಮ ತೇಜ್​​, ಅಲ್ಲು ಅರ್ಜುನ್​ ಮಧ್ಯೆ ಏನಾಯ್ತು?

https://newsfirstlive.com/wp-content/uploads/2024/06/allu-arjun.jpg

Load More