ಸಲಾರ್ ಸಿನಿಮಾ ರಿಲೀಸ್ ತಡ ಯಾಕೆ? ಮತ್ತೆ ಯಾವಾಗ?
ಪ್ರಶಾಂತ್ ನೀಲ್ ಅಂದುಕೊಂಡಂತೆ ನಡೆಯುತ್ತಿಲ್ಲ ಏಕೆ?
ಒಟ್ಟೊಟ್ಟಿಗೆ ಥಿಯೇಟರ್ಗೆ ಲಗ್ಗೆ ಇಡುತ್ತಿದೆ ಎರಡು ಚಿತ್ರ
ಸಲಾರ್ ಸಿನಿಮಾ ಬಗ್ಗೆ ಜನರಿಗೆ ದೊಡ್ಡ ನಿರೀಕ್ಷೆ ಇದೆ. ಆದರೆ ಯಾಕೋ ಏನೋ ಅಂದುಕೊಂಡಂತೆ ಏನೂ ನಡೀತಿಲ್ಲ. ಅಂದ್ರೆ, ಸಿನಿಮಾ ರಿಲೀಸ್ ಆಗೋದು ಅಂದುಕೊಂಡಂತೆ ನಡೀತಿಲ್ಲ. ಯಾಕೆ ಅನ್ನೋದಕ್ಕೆ ಹಲವು ಕಾರಣಗಳಿವೆ. ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿದ ತಕ್ಷಣ ತೆಲುಗು ನಟ ಪ್ರಭಾಸ್ ಜೊತೆ ಪ್ರಶಾಂತ್ ನೀಲ್, ಸಲಾರ್ ಅಂತ ಸಿನಿಮಾ ಅನೌನ್ಸ್ ಮಾಡಿದ್ದರು. ಕೆಜಿಎಫ್ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್ ಅವರೇ ಈ ಚಿತ್ರಕ್ಕೂ ಬಂಡವಾಳ ಹಾಕಿದ್ದು, ಹೈದರಾಬಾದ್ನಲ್ಲಿ ಗ್ರ್ಯಾಂಡ್ ಆಗಿ ಸಿನಿಮಾ ಲಾಂಚ್ ಆಯ್ತು.
ಸಲಾರ್ ಲಾಂಚ್ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅತಿಥಿಯಾಗಿ ಹೋಗಿದ್ದರು. ಅದ್ಯಾವಾಗ ಸಲಾರ್ ಇವೆಂಟ್ನಲ್ಲಿ ಈ ಮೂವರು ಒಟ್ಟಿಗೆ ಕಾಣಿಸಿಕೊಂಡ್ರೋ ಆಗಲೇ ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೆಟ್ ಆಗಿತ್ತು. ಒಂದು ಕ್ರೇಜಿ ಕಾಂಬಿನೇಷನ್ನ ಸುಳಿವು ಸಿಕ್ಕಿತ್ತು. ಯಾರೂ ಎಕ್ಸ್ಪೆಕ್ಟೇ ಮಾಡದೇ ಇರೋ ಸುದ್ದಿಯೊಂದು ಜೀವ ಪಡೆದುಕೊಂಡಿತ್ತು.
ಈ ಸುದ್ದಿಗೆ ಮತ್ತೆ ಜೀವ ಬಂದಿದ್ದು ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ್ಮೇಲೆ ಕೆಜಿಎಫ್ ಎರಡನೇ ಅಧ್ಯಾಯ ನೋಡಿ ಹೊರಗೆ ಬಂದ ಪ್ರೇಕ್ಷಕ ಮೂರನೇ ಭಾಗದ ಕಥೆ ಊಹಿಸೋಕೆ ಶುರು ಮಾಡಿದ್ದರು. ರಾಕಿ ಭಾಯ್ ಮತ್ತೆ ಬರ್ತಾನೆ, ಅವನ ಕಥೆ ಮತ್ತೆ ಮುಂದುವರಿಯುತ್ತೆ ಅನ್ನೋ ಚರ್ಚೆಗಳು ಮಾತಾಡೋಕೆ ಶುರು ಮಾಡಿದ್ರು. ಪ್ರೇಕ್ಷಕರ ನಿರೀಕ್ಷೆಯಂತೆ ನಿರ್ಮಾಪಕರು ಕೂಡ ಕೆಜಿಎಫ್ ಪಾರ್ಟ್ 3 ಬರುತ್ತೆ ಅಂತ ಹೇಳಿ ಕುತೂಹಲ ಹೆಚ್ಚಿಸಿದ್ದರು. ಅಷ್ಟೋತ್ತಿಗೆ ಬಣ್ಣದ ಲೋಕದಲ್ಲಿ ಪ್ರಭಾಸ್-ಪ್ರಶಾಂತ್ ನೀಲ್-ರಾಕಿಂಗ್ ಸ್ಟಾರ್ ಕಾಂಬಿನೇಷನ್ ಬಗ್ಗೆ ಸುದ್ದಿಯೊಂದು ಜೀವ ಪಡೆದುಕೊಂಡಿತ್ತು.
ಕೆಜಿಎಫ್ ಚಾಪ್ಟರ್ 2 ಚಿತ್ರದ ಕಥೆಗೂ ಸಲಾರ್ಗೂ ಲಿಂಕ್ ಇದೆ. ಪ್ರಭಾಸ್ ಪಾತ್ರಕ್ಕೂ ರಾಕಿ ಭಾಯ್ ಪಾತ್ರಕ್ಕೂ ಸಂಬಂಧ ಇದೆ. ಸಲಾರ್ ಚಿತ್ರದಲ್ಲಿ ಯಶ್ ಗೆಸ್ಟ್ ಅಪಿರಿಯೆನ್ಸ್ ಇರುತ್ತೆ ಎನ್ನುವ ಸಮಾಚಾರಗಳು ಹೆಡ್ಲೈನ್ ಆಗಿದ್ದವು. ಇಷ್ಟೆಲ್ಲಾ ಹೈಪ್ ಕ್ರಿಯೇಟ್ ಮಾಡಿರೋ ಸಲಾರ್ ಸಿನಿಮಾದ ಮೇಲೆ ಜನರಿಗಂತೂ ನಿರೀಕ್ಷೆಯಿದೆ. ಆದರೆ ಸಲಾರ್ ಟೀಮ್ ಮಾತ್ರ, ರಿಲೀಸ್ ಡೇಟ್ ಬಗ್ಗೆ ಪಕ್ಕಾ ಮಾಹಿತಿ ನೀಡ್ತಿಲ್ಲ.
ಎಲ್ಲ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 28ಕ್ಕೆ ಪ್ರಭಾಸ್ ನಟನೆಯ ಬಹುನಿರೀಕ್ಷೆ ಸಲಾರ್ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಈಗ ನಿಗದಿಯಾಗಿದ್ದ ದಿನಕ್ಕೆ ಸಲಾರ್ ಬರ್ತಿಲ್ಲ. ಚಿತ್ರದ ವಿಎಫ್ಎಕ್ಸ್ ಕೆಲಸಗಳು ಪೂರ್ಣವಾಗದ ಹಿನ್ನೆಲೆ ಸಲಾರ್ ಬಿಡುಗಡೆ ಪೋಸ್ಟ್ ಪೋನ್ ಆಗಿದೆ. ಹಾಗಾದ್ರೆ ಸಲಾರ್ ಯಾವಾಗ ರಿಲೀಸ್ ಆಗಬಹುದು ಅನ್ನೋದಕ್ಕೆ ಉತ್ತರ ದೀಪಾವಳಿ ಎನ್ನಲಾಗ್ತಿದೆ. ಹೌದು, ಮಾಹಿತಿ ಪ್ರಕಾರ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 10ಕ್ಕೆ ಸಲಾರ್ ಬರುವ ತಯಾರಿ ನಡೆದಿದೆ ಎನ್ನಲಾಗಿದೆ. ಆದರೆ ಅದೇ ದಿನ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ ‘ಟೈಗರ್-3’ ತೆರೆಗೆ ಬರ್ತಿದ್ದು, ಡಾರ್ಲಿಂಗ್ ಚಿತ್ರಕ್ಕೆ ಟಫ್ ಕಾಂಪಿಟೇಶನ್ ಆಗುವ ಸಾಧ್ಯತೆ ಇದೆ.
ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿರುವ ಸಲಾರ್ ತೆಲುಗು, ಕನ್ನಡ, ತಮಿಳು, ಮಲಯಾಳ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ. ಸರ್ಪ್ರೈಸ್ ಅಂದ್ರೆ ಸಲಾರ್ ಕನ್ನಡ ವರ್ಷನ್ನಲ್ಲಿ ಪ್ರಭಾಸ್ ಪಾತ್ರಕ್ಕೆ ನಟ ವಸಿಷ್ಠ ಸಿಂಹ ವಾಯ್ಸ್ ಡಬ್ ಮಾಡಲಿದ್ದಾರೆ ಎನ್ನುವ ಎಕ್ಸ್ಕ್ಲೂಸಿವ್ ಸಮಾಚಾರ ನ್ಯೂಸ್ಫಸ್ಟ್ ತಂಡಕ್ಕೆ ಲಭ್ಯವಾಗಿದ್ದು, ಸ್ಯಾಂಡಲ್ವುಡ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಪ್ರಶಾಂತ್ ನೀಲ್ ಈ ಚಿತ್ರ ನಿರ್ದೇಶಿಸಿದ್ದು, ಶೂಟಿಂಗ್ ಕಂಪ್ಲೀಟ್ ಆಗಿದೆ. ಸದ್ಯ ಟೀಸರ್ ಮೂಲಕ ಸೆನ್ಸೇಷನ್ ಸೃಷ್ಟಿಸಿರುವ ಸಲಾರ್ ಶೀಘ್ರದಲ್ಲೇ ಟ್ರೇಲರ್ ಲಾಂಚ್ ಮಾಡೋಕೆ ರೆಡಿಯಾಗಿದೆ. ಈ ನಡುವೆ ರಿಲೀಸ್ ದಿನಾಂಕ ಮುಂದೂಡಿಕೆಯಾಗಿರುವುದು ಸಹಜವಾಗಿ ನಿರಾಸೆ ಉಂಟು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ