newsfirstkannada.com

Salaar teaser: ಐದು ಭಾಷೆಯಲ್ಲಿ ‘ಸಲಾರ್’ ಟೀಸರ್ ರಿಲೀಸ್.. ಬೆಳ್ಳಂಬೆಳಗ್ಗೆ ಹಬ್ಬ ಮಾಡಿದ ಪ್ರಭಾಸ್ ಅಭಿಮಾನಿಗಳು

Share :

Published July 6, 2023 at 5:14am

Update July 6, 2023 at 5:53am

    ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ‘ಸಲಾರ್’

    KGF-2 ಚಿತ್ರದ ಬಳಿಕ ನೀಲ್ ಮತ್ತೊಂದು ನಿರೀಕ್ಷಿತ ಸಿನಿಮಾ

    ರಿಲೀಸ್ ಆಗ್ತಿದ್ದಂತೆ ಭಾರೀ ವೀಕ್ಷಣೆ ಪಡೆದ ಸಲಾರ್ ಟೀಸರ್

ಕನ್ನಡಿಗ ಪ್ರಶಾಂತ್ ನೀಲ್ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಸಿನಿ ಪ್ರೇಮಿಗಳಿಗೆ ಬೆಳ್ಳಂಬೆಳಗ್ಗೆ ಚಮಕ್ ಕೊಟ್ಟಿದ್ದಾರೆ.  ಮುಂಜಾನೆ 5.12ಕ್ಕೆ ತಮ್ಮ ಬಹು ನಿರೀಕ್ಷಿತ ಸಲಾರ್ ಚಿತ್ರದ ಟೀಸರ್ ರಿಲೀಸ್ ಮಾಡಿ, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಇಂಡಸ್ಟ್ರಿ ಬಹಳ ಕಾತುರದಿಂದ ಎದುರು ನೋಡ್ತಿರೋ ಸಿನಿಮಾ ಸಲಾರ್. ಐದು ಭಾಷೆಗಳಲ್ಲಿ ರಿಲೀಸ್ ಆಗಿರುವ ಸಲಾರ್ ಟೀಸರ್ ವೀಕ್ಷಕರನ್ನು ಬೆರಗುಗೊಳಿಸುತ್ತಿದೆ. ಸಲಾರ್ ಇಷ್ಟೊಂದು ದೊಡ್ಡ ಹೈಪ್ ಕ್ರಿಯೆಟ್ ಮಾಡೋಕೆ ಸಾಕಷ್ಟು ಕಾರಣಗಳಿವೆ. ಮೊದಲನೇಯದು ಕೆಜಿಎಫ್ ಆದ್ಮೇಲೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾ. ಎರಡನೇಯದು ನೀಲ್​ ಡೈರೆಕ್ಷನ್​ನಲ್ಲಿ ಪ್ಯಾನ್ ಇಂಡಿಯಾ ಸೂಪರ್​ಸ್ಟಾರ್​ ಪ್ರಭಾಸ್​ ನಟಿಸ್ತಿರೋದು. ಈ ಡೆಡ್ಲಿ ಕಾಂಬಿನೇಷನ್​ ಈಗ ಭಾರತೀಯ ಚಿತ್ರರಂಗದ ಟ್ರೆಂಡಿಂಗ್ ಟಾಪಿಕ್ ಆಗಿದೆ.

ಇನ್ನು ಸಲಾರ್ ಶುರುವಾದಾಗಿಂದಲೂ ಒಂದಲ್ಲ ಒಂದು ವಿಷ್ಯದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಾನೇ ಇದೆ. ಕಾಸ್ಟಿಂಗ್, ಸೆಟ್​, ಶೂಟಿಂಗ್, ಲುಕ್​ ಹೀಗೆ ಪ್ರತಿ ಹೆಜ್ಜೆಯಲ್ಲೂ ಥ್ರಿಲ್ ಹೆಚ್ಚಿಸುತ್ತಲೇ ಹೋಯ್ತು.. ಕೆಜಿಎಫ್​ನಲ್ಲಿ ಎಷ್ಟು ವೈಲೆನ್ಸ್​ ನೋಡಿದ್ರೋ, ಎಷ್ಟು ಆ್ಯಕ್ಷನ್ ನೋಡಿದ್ರೋ ಅದಕ್ಕಿಂತ ಹೆಚ್ಚು ಪಟ್ಟು ಸಲಾರ್​ನಲ್ಲಿ ಇರುತ್ತೆ ಅನ್ನೋದು ಹೈಲೈಟ್. ಈ ಎಲ್ಲಾ ಹೈಲೈಟ್​ಗಳೊಂದಿಗೆ ತಯಾರಾಗ್ತಿದ್ದ ಸಲಾರ್​ ಇಂದು ಶೂಟಿಂಗ್ ಕಂಪ್ಲೀಟ್​ ಮಾಡಿ ಫಸ್ಟ್​ ಝಲಕ್ ತೋರಿಸಿದೆ.

ಸೆಪ್ಟೆಂಬರ್ 28ಕ್ಕೆ ಐದು ಭಾಷೆಯಲ್ಲಿ ದಾಖಲೆಯ ಸ್ಕ್ರೀನ್​ಗಳಲ್ಲಿ ಸಲಾರ್ ಎಂಟ್ರಿ ಕೊಡ್ತಿದೆ. ಬಟ್, ಫುಲ್ ಪಿಚ್ಚರ್ ತೋರಿಸೋಕೆ ಟೀಸರ್​ ನೋಡೋ ಬಯಕೆ ಬಹುದೊಡ್ಡದಾಗಿ ಕಾಡ್ತಿತ್ತು. ಫೈನಲಿ ಆ ಟೈಮ್​ ಕೂಡ ಬಂದೇ ಬಿಟ್ಟಿದೆ. ಇಂದು ಪ್ರಭಾಸ್ ಅಭಿಮಾನಿಗಳ ಪಾಲಿಗೆ ಹಬ್ಬದ ದಿನವಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ 

Salaar teaser: ಐದು ಭಾಷೆಯಲ್ಲಿ ‘ಸಲಾರ್’ ಟೀಸರ್ ರಿಲೀಸ್.. ಬೆಳ್ಳಂಬೆಳಗ್ಗೆ ಹಬ್ಬ ಮಾಡಿದ ಪ್ರಭಾಸ್ ಅಭಿಮಾನಿಗಳು

https://newsfirstlive.com/wp-content/uploads/2023/07/SALAAR-1.jpg

Load More