newsfirstkannada.com

ಸಲಾರ್​ಗೆ ಪ್ರಾಮಿಸ್ ಮಾಡಿದ ಸ್ನೇಹಿತ ರಾಕಿನಾ? ಇದೇನಾ ಪ್ರಶಾಂತ್​ ನೀಲ್​ ಹೆಣೆದ ಸೀಕ್ರೆಟ್​​

Share :

Published July 8, 2023 at 3:19pm

Update July 8, 2023 at 3:25pm

    ಪ್ರಭಾಸ್​ ಸಲಾರ್​ ಚಿತ್ರದ ಸ್ಟೋರಿ ಲೈನ್ ಇದೇನಾ?

    ಟೀಸರ್​ ರಿಲೀಸ್ ಆದಂತೆ ಶುರುವಾಯ್ತು ಸ್ಟೋರಿ ಲೈನ್​ ಬಗ್ಗೆ ಚರ್ಚೆ

    ಸಲಾರ್​ ಸಿನಿಮಾದ ಒನ್ ಸ್ಟೋರಿ ರಿವಿಲ್ ಮಾಡಿರೋ ಐಎಂಡಿಬಿ

‘ಬಾಷಾ’ ರಜಿನಿಕಾಂತ್ ನಟನೆಯ ಅಂಡರ್​ವರ್ಲ್ಡ್​ ಬ್ಯಾಕ್​ಡ್ರಾಪ್ ಸಿನಿಮಾ. ಮುಂಬೈ ಅಂಡರ್​ವರ್ಲ್ಡ್​ನ ಹಿಡಿತದಲ್ಲಿಟ್ಟುಕೊಂಡಿದ್ದ ಮಾರ್ಕ್ ಆಂಟೋನಿಯನ್ನ ನಾಶ ಮಾಡ್ಬೇಕು ಅಂತ ಮಾಣಿಕ್ ಬಾಷಾ ಫೈಟ್ ಮಾಡೋದು ಒನ್ ಲೈನ್ ಅಜೆಂಡಾ.. ಆದ್ರೆ ಬಾಷಾ ಈ ಅಂಡರ್​ವರ್ಲ್ಡ್​ಗೆ ಧಮುಕೋದೇ ಸ್ನೇಹಿತನಿಗೆ ಕೊಟ್ಟ ಮಾತಿಂದ. ಸ್ನೇಹಿತನಿಗೆ ಆದ ಅನ್ಯಾಯದಿಂದ.

‘ಉಗ್ರಂ’ ಚಿತ್ರದಲ್ಲೂ ಒನ್​ ಲೈನ್ ಸ್ಟೋರಿ ಆಲ್ ಮೋಸ್ಟ್​ ಸೇಮ್ ಇದೆ. ಸ್ನೇಹಿತ ಬಾಲಕನಿಗೆ ಕೊಟ್ಟ ಮಾತು ಉಳಿಸಿಕೊಳ್ಳೋದು ಒಂದ್ಕಡೆಯಾದ್ರೆ, ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳೊದು ಮತ್ತೊಂದ್ಕಡೆ. ಇನ್ನು ಕೆಜಿಎಫ್​ ಚಿತ್ರದಲ್ಲೂ ಪ್ರಾಮಿಸ್ ಅನ್ನೋದು​ ಪ್ರಮುಖ ಅಸ್ತ್ರ. ತಾಯಿಗೆ ಕೊಟ್ಟ ಮಾತಿಗಾಗಿಯೇ ರಾಕಿ ಕೆಜಿಎಫ್​ ಅನ್ನೋ ದೊಡ್ಡ ಸಾಮ್ರಾಜ್ಯ ಸೃಷ್ಟಿಸ್ತಾನೆ. ತಾಯಿಗೆ ಕೊಟ್ಟ ಮಾತಿಗಾಗಿಯೇ ದೊಡ್ಡ ಶ್ರೀಮಂತನಾಗ್ತಾನೆ.

ಈಗ ಸಲಾರ್ ವಿಷ್ಯಕ್ಕೆ ಬರೋದಾದ್ರೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಸಿನಿಮಾ ಮಾಡ್ಬೇಕು ಅನ್ನೋದು ಕೆಜಿಎಫ್ ಆದ್ಮೇಲೆ ಕಮಿಟ್ ಆಗಿದ್ದಲ್ಲ. ನೀಲ್ ಉಗ್ರಂ ಅಂತ ಸಿನಿಮಾ ಮಾಡಿದಾಗಲೇ ಪ್ರಭಾಸ್​ ಕಾಲ್​ಶೀಟ್​ ಸಿಕ್ಕಿತ್ತು. ಆದ್ರೆ, ಪ್ರಭಾಸ್ ಅವಾಗ ಬಾಹುಬಲಿ ಮಾಡಿದ ಕಾರಣ ಈ ಕಮಿಟ್​ಮೆಂಟ್​ ಟೇಕ್ ಆಫ್ ಆಗಿರಲಿಲ್ಲ. ಈ ಕಡೆ ನೀಲ್ ಕೂಡ ಕೆಜಿಎಫ್​ ಆರಂಭಿಸಿದ್ರು. ಆದ್ರೆ ಹಳೆಯ ಕಮಿಟ್​ಮೆಂಟ್​ ಮರೆಯದ ಪ್ರಭಾಸ್​-ನೀಲ್ ಮತ್ತೆ ಸಿನಿಮಾ ಮಾಡ್ಬೇಕು ಅಂತ ಡಿಸೈಡ್​ ಮಾಡಿದಾಗಲೇ ಸೃಷ್ಟಿಯಾಗಿದ್ದು ಸಲಾರ್.

ಸಲಾರ್​ ಉಗ್ರಂ ಚಿತ್ರದ ರಿಮೇಕ್ ಎನ್ನಲಾಗ್ತಿದೆ. ಇದನ್ನ ರವಿ ಬಸ್ರೂರ್ ಕೂಡ ಬಾಯ್ತಪ್ಪಿ ಹೇಳ್ಬಿಟ್ಟಿದ್ದರು. ಆದ್ರೆ ಪ್ರಶಾಂತ್ ನೀಲ್ ಆ ಸುದ್ದಿನ ನಿರಾಕರಿಸಿದ್ದರು. ಸಲಾರ್ ಹೊಸ ಪ್ರಪಂಚ. ಇದು ಹೊಸ ಕಥೆ ಎಂದಿದ್ದರು. ಬಟ್, ಯಾವ ಥರಾ ಪ್ರಪಂಚ, ಯಾವ ಥರಾ ಕಥೆ ಅಂತ ಇದುವರೆಗೂ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಆದ್ರೀಗ ಸಲಾರ್ ಟೀಸರ್​ ರಿಲೀಸ್ ಆದ್ಮೇಲೆ ಚಿತ್ರದ ಸ್ಟೋರಿ ಲೈನ್​ ಬಗ್ಗೆ ಚರ್ಚೆ ಜೋರಾಗಿದೆ. ಅದರಲ್ಲೂ ವಿಕಿಪೀಡಿಯಾ ಮಾದರಿಯ ಐಎಂಡಿಬಿ ಹಂಚಿಕೊಂಡಿರೋ ಕಥೆಯ ಸಾರಾಂಶ ಕುತೂಹಲಕ್ಕೆ ಕಾರಣವಾಗಿದೆ.

ಸಲಾರ್​ ಚಿತ್ರದ ಸ್ಟೋರಿ ಲೈನ್ ಅದೇನಾ?

ಸಲಾರ್ ಚಿತ್ರದ ಡಿಸ್ಕ್ರಿಪ್ಷನ್​ನಲ್ಲಿ ಒನ್ ಸ್ಟೋರಿ ರಿವಿಲ್ ಮಾಡಿರೋ ಐಎಂಡಿಬಿ ‘ಸಲಾರ್ ಸಿನಿಮಾ ಗ್ಯಾಂಗ್​ಸ್ಟರ್ ಕಥೆ. ತನ್ನ ಸ್ನೇಹಿತ ಸಾಯೋ ಮುಂಚೆ ಕೊಟ್ಟ ಮಾತಿಗೆ ಪ್ರತಿಕಾರ ತೀರಿಸಿಕೊಳ್ಳೋ ರಿವೇಂಜ್ ಕಥೆ’ ಎಂದು ವಿವರಣೆ ಹಾಕಿದೆ. ಐಎಂಡಿಬಿ ರಿವೀಲ್ ಮಾಡಿರೋದಕ್ಕೆ ಇಷ್ಟೊಂದು ಮಹತ್ವನಾ ಅಂತ ಕೇಳಿದ್ರೆ ಐಎಂಡಿಬಿ ಒಂದು ನಂಬಿಕಸ್ಥ ಸಂಸ್ಥೆ. ಭಾರತೀಯ ಸಿನಿಮಾಗಳನ್ನ ರೇಟಿಂಗ್ ಮಾಡುವ ಟಾಪ್ ಕಂಪನಿ. ಹಾಗಾಗಿ, ಐಎಂಡಿಬಿಗೆ ಪ್ಯಾನ್ ಇಂಡಿಯಾದಲ್ಲಿ ತುಂಬಾ ಇಂಪಾರ್ಟೆನ್ಸ್​ ಇದೆ. ಇನ್​ಫ್ಯಾಕ್ಟ್​ ಐಎಂಡಿಬಿ ರಿವೀಲ್ ಮಾಡಿರೋ ವಿಷ್ಯವನ್ನ ನೀಲ್ ಆಪ್ತರು ಸಹ ಹೇಳ್ಕೊಂಡಿರೋದ್ರಿಂದ ಇದು ನಿಜಾನೇ ಅಂತ ಹೇಳಲಾಗ್ತಿದೆ. ಹಾಗಾದ್ರೆ ಸಲಾರ್​ ಪ್ರಾಮಿಸ್ ತಗೊಂಡಿರೋ ಆ ಸ್ನೇಹಿತಾ ಯಾರು?

ಸಲಾರ್​ಗೆ ಪ್ರಾಮಿಸ್ ಮಾಡಿದ ಸ್ನೇಹಿತ ರಾಕಿನಾ?

ಸಲಾರ್ ಚಿತ್ರ ಉಗ್ರಂನ ಅಪ್ಡೇಟ್​ ವರ್ಷನ್​ ಅಂತ ಹೇಳಲಾಗ್ತಿದೆ. ಈಗ ಸಲಾರ್ ಟೀಸರ್ ಬಂದ್ಮೇಲೆ ಇದು ಉಗ್ರಂ ಅಲ್ಲ ಕೆಜಿಎಫ್​ ಯೂನಿವರ್ಸ್ ಎಂಬ ಹೊಸ ಅನುಮಾನ ಶುರುವಾಗಿದೆ. ಈ ನಡುವೆ ಒನ್​ಲೈನ್​ ಸ್ಟೋರಿ ಬಗ್ಗೆ ಚರ್ಚೆಯಾಗ್ತಿದ್ದು, ಸಲಾರ್​ ಪ್ರಾಮಿಸ್​ ತಗೊಂಡಿರೋ ಆ ಸ್ನೇಹಿತ ರಾಕಿನೇ ಅನ್ನೋ ಹೊಸ ಸೆನ್ಸೇಷನ್ ಕ್ರಿಯೇಟ್ ಆಗಿದೆ. ಆ ಕಡೆ ಸಲಾರ್​ ಟೀಸರ್​ನಲ್ಲೂ ಕೆಜಿಎಫ್​ ನೆನಪಿಸುವಂತಹ ಕೆಲವು ಸೀನ್​ಗಳು ಕಾಣಿಸ್ತಿರೋದು ಇದಕ್ಕೆ ಇನ್ನಷ್ಟು ಪುಷ್ಠಿ ಕೊಡ್ತಿದೆ..

ಎನ್​ಟಿಆರ್​ 31ನೇ ಚಿತ್ರಕ್ಕೂ ಸಲಾರ್​ಗೂ ಸಂಬಂಧವಿದ್ಯಾ?

ಪ್ರಶಾಂತ್ ನೀಲ್​ ಸಿನಿಮಾಗಳ ಮೇಕಿಂಗ್ ಹಾಗೂ ಕಥೆಯಲ್ಲಿ ಸಿಮಿಲಾರಿಟಿ ಕಾಣ್ತಿದೆ. ಕೆಜಿಎಫ್​ ಸಿರೀಸ್​ ಆದ್ಮೇಲೆ ಬಹುಶಃ ಕೆಜಿಎಫ್ ಯೂನಿವರ್ಸ್ ಸೃಷ್ಟಿಸ್ತಿದ್ದಾರೆ ಎಂಬ ಅನುಮಾನ ಹುಟ್ಕೊಂಡಿದೆ. ಸಲಾರ್​ ಕೂಡ ಅದ್ರ ಭಾಗವೇ ಆಗಿದೆ ಎಂಬ ಕುತೂಹಲ ಕಾಡ್ತಿದ್ದು, ಅದಕ್ಕೆ ಪೂರಕವಾದ ಅಂಶಗಳು ಚರ್ಚೆಗೆ ಬರ್ತಿದೆ. ಇನ್ನು ಸಲಾರ್ ನಂತರ ಪ್ರಶಾಂತ್ ನೀಲ್​, ಜ್ಯೂನಿಯರ್ ಎನ್​ಟಿಆರ್ ಜೊತೆ ಸಿನಿಮಾ ಮಾಡಬೇಕಿದ್ದು ಆ ಚಿತ್ರಕ್ಕು ಸಲಾರ್​ಗೂ ಸಂಬಂಧ ಕಲ್ಪಿಸಲಾಗ್ತಿದೆ. ಎನ್​ಟಿಆರ್ ಚಿತ್ರದ ಪೋಸ್ಟರ್​ ಕೂಡ ನೀಲ್​ ಸ್ಟೈಲ್​​ನಲ್ಲೇ ಇರೋದು ಅನುಮಾನ ಸೃಷ್ಟಿಸಿದೆ. ಹಾಗಾಗಿ, ಸಲಾರ್​ ಪ್ರಾಮಿಸ್ ತಗೊಳ್ಳೋ ಸ್ನೇಹಿತ ಎನ್​ಟಿಆರ್​ ಇದ್ದರೂ ಇರಬಹುದು ಎಂಬ ಲೆಕ್ಕಾಚಾರ ಕಾಡ್ತಿದೆ.

ಸದ್ಯ ಇಂಡಿಯನ್ ಸಿನಿಮಾರಂಗದಲ್ಲಿ ಯೂನಿವರ್ಸ್ ಕಥೆಗಳು ಟ್ರೆಂಡ್ ನಡೀತಿದೆ. ಇಂಥ ಸಮಯದಲ್ಲಿ ಒಂದು ಹಿಟ್ ಚಿತ್ರದ ಸುತ್ತ ಇಂಥಹ ಉಪಕಥೆಗಳು ಸೃಷ್ಟಿಯಾಗೋದು ಸಾಮಾನ್ಯ. ಈಗ ಕೆಜಿಎಫ್ ಆದ್ಮೇಲೆ ನೀಲ್ ಮಾಡ್ತಿರೋ ಸಲಾರ್ ಸುತ್ತವೂ ಇಂಥದ್ದೇ ಉಪಕಥೆಗಳು ಸೃಷ್ಟಿಯಾಗಿದ್ದು, ಇದೆಲ್ಲದಕ್ಕೂ ಪ್ರಶಾಂತ್ ನೀಲೇ ಉತ್ತರ ಕೊಡಬೇಕಿದೆ. ಆ ಉತ್ತರ ಬೇಕು ಅಂದ್ರೆ ಸಲಾರ್​ ಥಿಯೇಟರ್​ಗೆ ಬರೋವರೆಗೂ ಕಾಯ್ಬೇಕು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸಲಾರ್​ಗೆ ಪ್ರಾಮಿಸ್ ಮಾಡಿದ ಸ್ನೇಹಿತ ರಾಕಿನಾ? ಇದೇನಾ ಪ್ರಶಾಂತ್​ ನೀಲ್​ ಹೆಣೆದ ಸೀಕ್ರೆಟ್​​

https://newsfirstlive.com/wp-content/uploads/2023/07/Prabhas.jpg

Load More