newsfirstkannada.com

ಕೆಜಿಎಫ್​ ದಾಖಲೆ ಮುರಿಯುತ್ತಾ ಸಲಾರ್​​​..? ಇಲ್ಲಿದೆ ಟಾಪ್​ ಸಿನಿಮಾ ಸುದ್ದಿಗಳು!

Share :

06-07-2023

    ನಟ ಕಿರಣ್ ರಾಜ್ ನಟನೆಯ ರಾನಿ ಚಿತ್ರದ ಟ್ರೇಲರ್ ರಿಲೀಸ್

    ಡಿವೋರ್ಸ್ ವದಂತಿಗೆ ಪವರ್​​ ಸ್ಟಾರ್​ ಪವನ್ ಕಲ್ಯಾಣ್ ಸ್ಪಷ್ಟನೆ!

    ನಟ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಟೀಸರ್ ರಿಲೀಸ್

ಪವನ್ ಕಲ್ಯಾಣ್ ಡಿವೋರ್ಸ್​ ವದಂತಿಗೆ ಬ್ರೇಕ್!

ತೆಲುಗು ಪವರ್ ಸ್ಟಾರ್​ ಪವನ್ ಕಲ್ಯಾಣ್ ಮೂರನೇ ಮದುವೆ ಮುರಿದು ಬಿದ್ದಿದೆ, ಗಂಡ ಹೆಂಡತಿ ದೂರಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.. ಆದ್ರೀಗ ಈ ಸುದ್ದಿ ಸುಳ್ಳು, ಪವನ್ ಕಲ್ಯಾಣ್ ಮತ್ತು ಅನ್ನ ಲೆಝ್​ನೋವಾ ಒಟ್ಟಿಗೆ ಇದ್ದಾರೆ ಎಂದು ಜನಸೇನಾ ಪಾರ್ಟಿ ಸ್ಪಷ್ಟನೆ ನೀಡಿದೆ. ಪವನ್ ಕಲ್ಯಾಣ್ ಮತ್ತು ಅನ್ನ ಲೆಝ್​ನೋವಾ ಜೊತೆಯಲ್ಲಿರುವ ಫೋಟೋ ಶೇರ್ ಮಾಡಿರುವ ಜನಸೇನಾ ಪಾರ್ಟಿ, ಇತ್ತೀಚೆಗಷ್ಟೇ ಹೈದರಾಬಾದ್​ನಲ್ಲಿ ನಡೆದ ವರಾಹಿ ಯಾತ್ರ ಪೂಜೆಯಲ್ಲಿ ಭಾಗವಹಿಸಿದ್ದರು ಅಂತ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಶ್ರುತಿ ಅಭಿಮಾನಿಗಳಿಂದ ಹೊಸ ಬೇಡಿಕೆ

ಹಿರಿಯ ನಟಿ ಶ್ರುತಿಗೆ ತಮ್ಮ ಅಭಿಮಾನಿಗಳು ಹೊಸ ಬೇಡಿಕೆ ಇಟ್ಟಿದ್ದಾರೆ. ಯಾರು ಏನೇ ಹೇಳಿದ್ರು ನೀವು ಅಳುವ ಸಿನಿಮಾಗಳೇ ಮಾಡಿ ಅಂತ ಸಲಹೆ ಕೊಟ್ಟಿದ್ದಾರೆ. ಶ್ರುತಿ ಅವರ ತೋಟದಲ್ಲಿ ಕೆಲಸ ಮಾಡುವ ಅಭಿಮಾನಿಗಳು ಶ್ರುತಿ ಅವರ ನಟನೆ ನೋಡಿ ತಾವು ಅಳುತ್ತಿದ್ದರಂತೆ. ಇದರಿಂದ ಕಣ್ಣೇ ಕಾಣಿಸದೇ ಹಾಗೆ ಆಗ್ತಿದೆ ಅಂತ ಹೇಳ್ಕೊಂಡಿದ್ದಾರೆ. ಇದಕ್ಕೆ ಪರಿಹಾರವಾಗಿ ಕನ್ನಡಕ ಹಾಕ್ಕೊಂಡು ಸಿನಿಮಾ ನೋಡಿ ಅಂತ ಶ್ರುತಿ ಹೊಸ ಐಡಿಯಾ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

View this post on Instagram

A post shared by Shruthi (@shruthi__krishnaa)

ರಾನಿ ಜಬರ್​ದಸ್ತ್​ ಟ್ರೇಲರ್

ಕನ್ನಡತಿ ಖ್ಯಾತಿಯ ನಟ ಕಿರಣ್ ರಾಜ್ ನಟನೆಯ ರಾನಿ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಭಾರಿ ಮೆಚ್ಚುಗೆ ಗಳಿಸಿಕೊಳ್ತಿದೆ.. ಗ್ಯಾಂಗ್​ಸ್ಟರ್​ ಕಥೆಯಲ್ಲಿ ಡಾನ್​ ಪಾತ್ರದಲ್ಲಿ ನಟಿಸಿರುವ ಕಿರಣ್ ರಾಜ್ ಜಬರ್​ದಸ್ತ್ ಆ್ಯಕ್ಷನ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇನ್ನು ಗುರುತೇಜ್ ಶೆಟ್ಟಿ ಈ ಚಿತ್ರ ನಿರ್ದೇಶಿಸಿದ್ದು, ಕಿರಣ್ ರಾಜ್ ಜೊತೆ ರವಿಶಂಕರ್, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಸಮೀಕ್ಷಾ ಈ ಚಿತ್ರದ ನಾಯಕಿಯಾಗಿದ್ದಾರೆ.

ಕೆಜಿಎಫ್​ ಬೆನ್ನತ್ತಿದ ಸಲಾರ್ ಟೀಸರ್

ಪ್ಯಾನ್ ಇಂಡಿಯಾ ಸೂಪರ್​ಸ್ಟಾರ್​ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಹಲವು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಳ್ತಿದೆ. ಸದ್ಯ ಯೂಟ್ಯೂಬ್​ನಲ್ಲಿ ಸಲಾರ್ ಟೀಸರ್ ನಂಬರ್ ಒನ್ ಸ್ಥಾನದಲ್ಲಿದ್ದು, 20 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಕಂಡಿದೆ. ಈ ಮೂಲಕ ಕೆಜಿಎಫ್​ ಟೀಸರ್​ ದಾಖಲೆನಾ ಬ್ರೇಕ್ ಮಾಡುವತ್ತಾ ಹೆಜ್ಜೆ ಹಾಕಿದೆ. ಕೆಜಿಎಫ್ ಚಾಪ್ಟರ್ 2 ಟೀಸರ್ 24 ಗಂಟೆಯಲ್ಲಿ 78 ಮಿಲಿಯನ್ ವೀಕ್ಷಣೆ ಕಂಡಿತ್ತು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕೆಜಿಎಫ್​ ದಾಖಲೆ ಮುರಿಯುತ್ತಾ ಸಲಾರ್​​​..? ಇಲ್ಲಿದೆ ಟಾಪ್​ ಸಿನಿಮಾ ಸುದ್ದಿಗಳು!

https://newsfirstlive.com/wp-content/uploads/2023/07/PRABHAS_SALAAR-1.jpg

Load More