ನಟಿ ಸಮಂತಾ 25 ಕೋಟಿ ರೂ. ಸಾಲ ಪಡೆದಿದ್ದು ನಿಜಾನಾ?
ಫ್ಯಾನ್ಸ್ಗೆ ಪೋಸ್ಟ್ ಮಾಡುವ ಮೂಲಕ ಸತ್ಯ ಹೇಳಿದ ಸ್ಯಾಮ್!
25 ಕೋಟಿ ರೂ. ಸಾಲದ ಸುದ್ದಿಗೆ ನಟಿ ಸಮಂತಾ ಸ್ಪಷ್ಟನೆ ಏನು?
ಸೌತ್ ಸುಂದರಿ ಸಮಂತಾ ಸದ್ಯ ಸಿನಿಮಾಗೆ ಬ್ರೇಕ್ ಹಾಕಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ನಟಿ ಸಮಂತಾ ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇತ್ತೀಚೆಗೆ ನಟಿ ಸ್ಯಾಮ್ ಬಗ್ಗೆ ಶಾಕಿಂಗ್ ಸಮಾಚಾರವೊಂದು ಹೊರಬಿದ್ದಿತ್ತು. ಸೌತ್ ಇಂಡಸ್ಟ್ರಿಯ ಟಾಪ್ ನಟಿ ಅಂತಾ ಕರೆಸಿಕೊಳ್ಳೋ ಸಮಂತಾ ಬಗ್ಗೆ ಬೆಚ್ಚಿ ಬೀಳಿಸುವ ವಿಷಯವೊಂದು ಸದ್ದು ಮಾಡುತ್ತಿತ್ತು.
ನಟಿ ಸಮಂತಾ ಮೈಯೋಸಿಟಿಸ್ ಕಾಯಿಲೆಯ ಚಿಕಿತ್ಸೆಗಾಗಿ ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂಬ ಸುದ್ದಿ ಸೌತ್ ಇಂಡಸ್ಟ್ರಿ ತುಂಬೆಲ್ಲಾ ಸೌಂಡ್ ಮಾಡುತ್ತಿತ್ತು. ಜೊತೆಗೆ ಆ ಸಾಲವನ್ನು ನಟನೊಬ್ಬನಿಂದ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಈ ಸುದ್ದಿಗೆ ಸಮಂತಾ ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದೊಂದು ಸುಳ್ಳು ಸುದ್ದಿ ಎಂದು ಬರೆದುಕೊಂಡಿದ್ದಾರೆ.
ಮಯೋಸಿಟಿಸ್ ಚಿಕಿತ್ಸೆಗೆ 25 ಕೋಟಿ!?
‘ನನಗಿರೋ ಕಾಯಿಲೆಗೆ ಚಿಕಿತ್ಸೆ ಪಡೆಯಲು 25 ಕೋಟಿ ರೂಪಾಯಿ ಸಾಲ ಮಾಡಿದ್ದೇನೆ ಎನ್ನುವುದು ಸುಳ್ಳು ಸುದ್ದಿ. ಚಿಕಿತ್ಸೆಗೆ ಅಷ್ಟು ಹಣದ ಅವಶ್ಯಕತೆಯಿಲ್ಲ. ಯಾರೋ ನಿಮಗೆಲ್ಲ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಾರೆ. ನಾನು ದುಡಿದ ದುಡ್ಡಿನಲ್ಲೇ ಸ್ವಲ್ಪ ಖರ್ಚು ಮಾಡುತ್ತಿದ್ದೇನೆ ಎಂದು ನನಗೆ ಖುಷಿಯಾಗಿದೆ. ನನಗಿರೊ ಕಾಯಿಲೆ ದೊಡ್ಡದಲ್ಲ. ಆದ್ದರಿಂದ, ನನಗೆ ಬೇಕಾದ ಖರ್ಚು ಅನ್ನು ನಾನೇ ನೋಡಿಕೊಳ್ಳುತ್ತೇನೆ. ಸಾವಿರಾರು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮನಬಂದಂತೆ ಪೋಸ್ಟ್ ಮಾಡುವ ಬದಲು ಒಮ್ಮೆ ಆಲೋಚಿಸಿ ಎಂದು ಸ್ಯಾಮ್ ಬರೆದುಕೊಂಡಿದ್ದಾರೆ.
ಸದ್ಯ ನಟಿ ಸಮಂತಾ ಖುಷಿ ಹಾಗೂ ಸಿಟಾಡೆಲ್ ಸಿನಿಮಾ ಮುಗಿಸಿ ಒಂದು ವರ್ಷ ಬಣ್ಣದ ಲೋಕದಿಂದ ದೂರ ಉಳಿದುಕೊಳ್ಳು ನಿರ್ಧರಿಸಿದ್ದಾರೆ. ಮೈಯೋಸಿಟಿಸ್ ಖಾಯಿಲೆ ಚಿಕಿತ್ಸೆಯೇ ಮೂಲ ಕಾರಣವಾಗಿದೆ. ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಸುಳ್ಳು ಸುದ್ದಿಗೆ ನಟಿ ತೆರೆ ಎಳೆದಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ