newsfirstkannada.com

ರಕ್ತದಾನದ ಜೊತೆಗೆ ಅಂಗಾಂಗ ದಾನದ ಜಾಗೃತಿಯೂ ಅಗತ್ಯ; ಸಚಿವ ದಿನೇಶ್ ಗುಂಡೂರಾವ್

Share :

Published August 17, 2023 at 3:44pm

Update August 17, 2023 at 3:46pm

    ’ಯುವ ಪೀಳಿಗೆ ಹಾಗೂ ದಾನಿಗಳು ರಕ್ತದಾನ ಮಾಡಿ‘

    ಸ್ಪರ್ಶ ಆಸ್ಪತ್ರೆಯಲ್ಲಿ ರಕ್ತದ ಮಹತ್ವದ ಬಗ್ಗೆ ಸಮ್ಮೇಳನ

    ಸ್ಪರ್ಶ ಆಸ್ಪತ್ರೆಯ ನಿರ್ದೇಶಕರು ಈ ಕುರಿತು ಹೇಳಿದ್ದೇನು?

ಬೆಂಗಳೂರು: ರಾಜ್ಯಾದ್ಯಂತ ವೈದ್ಯಕೀಯ ವೃತ್ತಿಪರರ ನಿರಂತರ ಕೌಶಲ್ಯ ವರ್ಧನೆಯ ನಿಟ್ಟಿನಲ್ಲಿ ಇಂಡಿಯನ್ ಅಸೋಸಿಯೇಷನ್ ಆಫ್ ಬ್ಲಡ್ ಬ್ಯಾಂಕ್ ಹಾಗೂ ಸ್ಪರ್ಶ ಆಸ್ಪತ್ರೆ ವತಿಯಿಂದ ಕರ್ನಾಟಕ ರಾಜ್ಯ ರಕ್ತಚಲನ ಪರಿಷತ್, ಸುವರ್ಣ ಕರ್ನಾಟಕ ರಕ್ತ ನಿಧಿ ಅಸೋಸಿಯೇಷನ್, ಔಷಧ ನಿಯಂತ್ರಣ ಇಲಾಖೆ, ಇಂಡಿಯನ್ ಸೊಸೈಟಿ ಆಫ್ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ಸಹಯೋಗದೊಂದಿಗೆ ಬ್ಲಡ್ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ವಿಷಯದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಸಮ್ಮೇಳನವನ್ನು ಆಗಸ್ಟ್ 17 ಮತ್ತು 18ರಂದು ಯಶವಂತಪುರ ಸ್ಪರ್ಶ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಂಡಿಯನ್ ಅಸೋಸಿಯೇಷನ್ ಆಫ್ ಬ್ಲಡ್ ಬ್ಯಾಂಕ್ ಅಧ್ಯಕ್ಷರಾದ ಲಯನ್ ಎಸ್ ಮನೋಜ್ ಕುಮಾರ್ ಹಾಗೂ ಸಮಿತಿಯ ಅಧ್ಯಕ್ಷರಾದ ಗಿರೀಶ್ ಬುಡರಕಟ್ಟಿರವರು ಉಪಸ್ಥಿತರಿದ್ದರು. ಈ ಕುರಿತು ಕಾರ್ಯಕ್ರಮದಲ್ಲಿ ಮಾತಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್, ರಕ್ತದಾನ ಮಾಡಲು ಅರ್ಹರಾಗಿರುವ 90% ಕ್ಕಿಂತ ಹೆಚ್ಚು ಜನರು ರಕ್ತದಾನ ಮಾಡುವುದಿಲ್ಲ, ಅಂದರೆ ಹೊಸ ದಾನಿಗಳ ಅವಶ್ಯಕತೆ ಯಾವಾಗಲೂ ಇರುತ್ತದೆ.

ರಕ್ತದಾನವು ನಿಸ್ವಾರ್ಥವಾಗಿ ರಕ್ತವನ್ನು ಅಗತ್ಯವಿರುವವರಿಗೆ ದಾನ ಮಾಡುವುದು. ಇದು ಸಾವಿರಾರು ಜನರ ಜೀವ ಉಳಿಸಲು ಸಹಾಯ ಮಾಡುವ ಮಾಡುತ್ತದೆ. ಅಪಘಾತಗಳು, ಶಸ್ತ್ರಚಿಕಿತ್ಸೆಗಳು ಮತ್ತು ರಕ್ತದ ಕ್ಯಾನ್ಸರ್ ಮತ್ತು ಮುಂತಾದ ವಿವಿಧ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ರಕ್ತದಾನ ಸಹಾಯ ಮಾಡುತ್ತದೆ. ಇದು ಅನೇಕರ ಜೀವ ಉಳಿಸಲು ಸಹಾಯ ಮಾಡುವ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ. ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಉತ್ತಮ ಮಾರ್ಗವಾಗಿದೆ. ಆದ್ದರಿಂದ ಯುವ ಪೀಳಿಗೆ ಹಾಗೂ ದಾನಿಗಳು ರಕ್ತದಾನ ಮಾಡಲು ಮುಂದಾಗಬೇಕಾಗಿದೆ. ರಕ್ತದಾನಿಗಳನ್ನು ಪ್ರೋತ್ಸಾಹಿಸಲು ಹಾಗೂ ರಕ್ತದ ಮಹತ್ವವನ್ನು ತಿಳಿಸಲು ಇಂತಹ ಮಹತ್ವವಾದ ಸಮ್ಮೇಳನವನ್ನು ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಬಳಿಕ ಮಾತಾಡಿದ ಇಂಡಿಯನ್ ಅಸೋಸಿಯೇಷನ್ ಆಫ್ ಬ್ಲಡ್ ಬ್ಯಾಂಕ್ ಅಧ್ಯಕ್ಷರಾದ ಲಯನ್ ಮನೋಜ್ ಎಸ್. ಕುಮಾರ್, ರಕ್ತದಾನವು ಎಷ್ಟೋ ಜನರಿಗೆ ಜೀವ ನೀಡುವ ಮಹಾದಾನವಾಗಿದೆ. ದಾನಿಗಳಿಂದ ಸಂಗ್ರಹಿಸುವ ರಕ್ತವು ಜೀವ ವಾಹಿನಿಯಾಗಿ ರೋಗಿಗಳ ನಾಡಿಗಳಲ್ಲಿ ಹರಿಯುವ ಮೊದಲು ಅನೇಕ ಮಜಲುಗಳಲ್ಲಿ ವೈಜ್ಞಾನಿಕವಾಗಿ ಪರೀಕ್ಷೆ ಮತ್ತು ಪ್ರಕ್ರಿಯೆಗಳಿಗೆ ಒಳಪಟ್ಟು ರಕ್ತದ ಉಪಯುಕ್ತ ಉತ್ಪನ್ನಗಳು ತಯಾರಿಗೊಳ್ಳುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಕ್ತದಾನದ ಜೊತೆಗೆ ಅಂಗಾಂಗ ದಾನದ ಜಾಗೃತಿಯೂ ಅಗತ್ಯ; ಸಚಿವ ದಿನೇಶ್ ಗುಂಡೂರಾವ್

https://newsfirstlive.com/wp-content/uploads/2023/08/yashaanthapura.jpg

Load More