newsfirstkannada.com

ರಾಕಿಂಗ್​ ಸ್ಟಾರ್​ ಫ್ಯಾನ್ಸ್​​ಗೆ ಗುಡ್​ನ್ಯೂಸ್​​;​ ಯಶ್​19 ಚಿತ್ರಕ್ಕೆ ಹೀರೋಯಿನ್​ ಇವರೇನಾ..?

Share :

12-09-2023

    ಅಭಿಮಾನಿಗಳಿಗೆ ಶುಭ ಸುದ್ದಿ ನೀಡಲು ಮುಂದಾದ್ರಾ ಯಶ್​19 ತಂಡ

    ಯಶ್​​ ಮುಂದಿನ ಚಿತ್ರದಲ್ಲಿ ಮಲಯಾಳಂ ನಟಿ ಅಭಿನಯ ಮಾಡ್ತಾರಾ?

    ಯಶ್19 ಚಿತ್ರಕ್ಕಾಗಿ ತೆರೆ ಹಿಂದೆ ನಡೆಯುತ್ತಿದೆ ಮಹತ್ವದ ತಯಾರಿ!

ಸ್ಯಾಂಡಲ್​ವುಡ್​ ಖ್ಯಾತ ನಟ ರಾಕಿಂಗ್​ ಸ್ಟಾರ್​​ ಯಶ್ ​ಸದ್ಯ ತಮ್ಮ ಸುಂದರ ಕುಟುಂಬದ ಜೊತೆ ಕಾಲವನ್ನು ಕಳೆಯುತ್ತಿದ್ದಾರೆ. ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ 19 ಚಿತ್ರಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಹರಿದಾಡುತ್ತಿದೆ.

ಇದನ್ನು ಓದಿ: 2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ ದಂಪತಿ; ಹೇಗಿತ್ತು ಪ್ರೇರಣಾ ಸೀಮಂತ ಕಾರ್ಯಕ್ರಮ..?

ರಾಕಿಂಗ್ ಸ್ಟಾರ್ ಯಶ್ ನಟನೆಯ ಹೊಸ ಸಿನಿಮಾದ ಬಗ್ಗೆ ಆಗಾಗ ದಿನಕ್ಕೊಂದು ಹೊಸ ಹೊಸ ಮಾಹಿತಿಗಳು ವೈರಲ್​​​​ ಆಗುತ್ತಾ ಇರುತ್ತವೆ. ಇದೀಗ ಯಶ್ 19 ಸಿನಿಮಾದ ಬಗ್ಗೆ ಮತ್ತೊಂದು ಹೊಸ ಸುದ್ದಿ ಸಿಕ್ಕಿದೆ. ಈ ಸಿನಿಮಾಗೆ ನಾಯಕಿಯಾಗಿ ಮಲಯಾಳಂ ನಟಿ ಸಂಯುಕ್ತಾ ಮೆನನ್ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಹೀಗಾಗಿ ಫ್ಯಾನ್ಸ್​ಗಳಿಗೆ ಈ ಬಗ್ಗೆ ಕೂತುಹಲ ಹೆಚ್ಚಾಗಿದೆ.

ನಟಿ ಸಂಯುಕ್ತಾ ಮೆನನ್ ಅವರು ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಈ ಬ್ಯೂಟಿ 2016 ರಲ್ಲಿ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ನಟಿ ಸಂಯುಕ್ತಾ ಅವರಿಗೆ ಸಾಲು ಸಾಲು ಅವಕಾಶಗಳು ಒದಗಿ ಬರುತ್ತಿವೆ. ತಮಿಳಿನ ಕೆಲವು ಚಿತ್ರಗಳಲ್ಲಿ ನಟಿ ಅಭಿನಯಿಸಿದ್ದಾರೆ. ಕಲ್ಯಾಣ್ ರಾಮ್ ‘ಬಿಂಬಿಸಾರ’ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಯಶ್ 19 ಸಿನಿಮಾಗಾಗಿ ರಾಕಿಭಾಯ್ ತೆರೆ ಹಿಂದೆ ಎಲ್ಲಾ ರೀತಿಯಲ್ಲಿ ತಯಾರಿ ಮಾಡುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಯಶ್ ಮುಂದಿನ ಸಿನಿಮಾ ಬಗ್ಗೆ ಉತ್ತರ ಸಿಗಲಿದೆ ಎನ್ನಲಾಗುತ್ತಿದೆ. ನೆಚ್ಚಿನ ನಟನನ್ನು ಬಿಗ್​ಸ್ಕ್ರೀನ್​​ ಮೇಲೆ ನೋಡಲು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಕಿಂಗ್​ ಸ್ಟಾರ್​ ಫ್ಯಾನ್ಸ್​​ಗೆ ಗುಡ್​ನ್ಯೂಸ್​​;​ ಯಶ್​19 ಚಿತ್ರಕ್ಕೆ ಹೀರೋಯಿನ್​ ಇವರೇನಾ..?

https://newsfirstlive.com/wp-content/uploads/2023/09/yash-2.jpg

Load More